ಟಿಲ್ಲು ಸ್ಕ್ವೇರ್ ನಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ಕೇಳಿದ್ರೆ, ಬೋಲ್ಡ್ ಆಗಿಯೇ ಉತ್ತರ ಕೊಟ್ಟ ಮಲ್ಲು ಬ್ಯೂಟಿ ಅನುಪಮಾ…..!

Follow Us :

ಮಲ್ಲು ಬ್ಯೂಟಿ ಅನುಪಮಾ ಪರಮೇಶ್ವರನ್ ಕೆರಿಯರ್‍ ಆರಂಭದಿಂದಲೂ ಪದ್ದತಿಯಾಗಿಯೇ ಕಾಣಿಸಿಕೊಂಡಿದ್ದರು. ಆದರೆ ಕಳೆದ ವರ್ಷ ಮಾತ್ರ ಆಕೆ ಓವರ್‍ ಆಗಿಯೇ ಕಾಣಿಸಿಕೊಂಡಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದರು. ಸದ್ಯ ಆಕೆ ಟಿಲ್ಲು ಸ್ಕ್ವೇರ್‍ ನಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ಅನುಪಮಾ ಹಿರೋ ಸಿದ್ದು ಜೊನ್ನಲಗಡ್ಡ ಜೊತೆಗೆ ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದು, ಈ ಬಗ್ಗೆ ಕೇಳಿದರೇ ಅನುಪಮಾ ಬೋಲ್ಡ್ ಆಗಿಯೇ ಉತ್ತರ ನೀಡಿದ್ದಾರೆ.

ಯಂಗ್ ಬ್ಯೂಟಿ ಅನುಪಮಾ ಪರಮೇಶ್ವರನ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಲ್ಲಿ ತುಂಬಾ ಪದ್ದತಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ ರೌಡಿ ಭಾಯ್ಸ್ ಸಿನೆಮಾದಲ್ಲಿ ಮೊದಲ ಬಾರಿಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಿ ಶಾಕ್ ನೀಡಿದ್ದರು. ಕಳೆದ ವರ್ಷ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಹ ಪಡೆದುಕೊಂಡು ಹ್ಯಾಟ್ರಿಕ್ ಪಡೆದುಕೊಂಡಿದ್ದಾರೆ. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಸದ್ಯ ನಟಿ ಅನುಪಮಾ ಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ದು ಜೊನ್ನಲಗಡ್ಡ ನಟನಾಗಿ ಕಾಣಿಸಿಕೊಂಡ ಡಿಜೆ ಟಿಲ್ಲು ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಕಡಿಮೆ ಬಂಡವಾಳದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಭಾರಿ ಸಕ್ಸಸ್ ಕಂಡುಕೊಂಡಿತ್ತು. ಇದೀಗ ಟಿಲ್ಲು ಸ್ಕ್ವೇರ್‍ ಸಿನೆಮಾದ ಮೇಲೆ ಸಹ ಭಾರಿ ನಿರೀಕ್ಷೆ ಹುಟ್ಟಿದೆ.

ಇನ್ನೂ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಅನುಪಮಾ ತುಂಬಾನೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಈ ಸಿನೆಮಾ ಇದೇ ಮಾ.29 ರಂದು ತೆರೆ ಕಾಣಲಿದೆ. ಈ ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಪ್ರಮೋಷನ್ ನಿಮಿತ್ತ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅನುಪಮಾ ಸಿನೆಮಾದಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ಎದುರಾದ ಪ್ರಶ್ನೆಗೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಪ್ರತಿನಿತ್ಯ ನಾವು ಅನ್ನ ತಿನ್ನೋಕೆ ಆಗೊಲ್ಲ ಅಲ್ಲವೇ, ಬಿರ್ಯಾನಿ, ಪುಲಾವ್ ಹೀಗೆ ಡಿಫರೆಂಟ್ ಡಿಫರೆಂಟ್ ಊಟ ಬೇಕು ಅನ್ನಿಸುತ್ತದೆ. ಆದರೆ ನಿರ್ದೇಶಕ ನನಗೆ ಕೊಟ್ಟ ಕೆಲಸವನ್ನು ಪೂರ್ಣ ಗೊಳಿಸುವುದು ನನ್ನ ಕರ್ತವ್ಯ, ಆದ್ದರಿಂದ ಆ ರೀತಿ ಮಾಡಿದೆ ಎಂದು ಹೇಳಿದ್ದಾರೆ. ಮಾ.18 ರಂದು ಈ ಸಿನೆಮಾದ ಹೋ ಮೈ ಲಿಲ್ಲಿ ಎಂಬ ಹಾಡು ಸಹ ರಿಲೀಸ್ ಆಗಿದ್ದು, ಒಳ್ಳೆಯ ಸ್ಪಂದನೆ ಪಡೆದುಕೊಳ್ಳುತ್ತಿದೆ.