ಅವನನ್ನು ಕುರುಡಿಯಂತೆ ನಂಬಿ ಬಲಿಯಾದ್ಲು ಎಂದು ಸಿಲ್ಕ್ ಸ್ಮಿತಾ ಮರಣದ ಬಗ್ಗೆ ಸೀನಿಯರ್ ನಟಿ ಜಯಮಾಲಿನಿ ಕಾಮೆಂಟ್ಸ್…..!

ಸೌತ್ ಸಿನಿರಂಗದಲ್ಲಿ ಮಾದಕ ನಟಿ ಎಂಬ ಖ್ಯಾತಿ ಪಡೆದುಕೊಂಡು ಅನೇಕ ಸಿನೆಮಾಗಳ ಮೂಲಕ ಸದ್ದು ಮಾಡಿದ ನಟಿ ಸಿಲ್ಕ್ ಸ್ಮಿತಾ, ಗ್ರಾಮೀಣ ಭಾಗದಿಂದ ಬಂದು ಇಡೀ ಸೌತ್ ಸಿನಿರಂಗವನ್ನು ಶೇಕ್ ಮಾಡಿದ್ದರು. ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಪಾತ್ರಗಳ ಮೂಲಕವೇ ಸ್ಟಾರ್‍ ಡಮ್ ಪಡೆದುಕೊಂಡರು. ಭಾರಿ ನಿರೀಕ್ಷೆಯಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ವಯಸ್ಸಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟರು. ಈಗಲೂ ಸಹ ಆಕೆಯ ಮರಣದ ಬಗ್ಗೆ ಹಲವರು ಕಾಮೆಂಟ್ ಮಾಡುತ್ತಿರುತ್ತಾರೆ. ಇದೀಗ ಸೀನಿಯರ್‍ ನಟಿ ಜಯಮಾಲಿನಿ ಸಿಲ್ಕ್ ಸ್ಮಿತಾ ಮರಣದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ದಿವಂಗತ ಸಿಲ್ಕ್ ಸ್ಮಿತಾ ಜೀವನ ಸಿನೆಮಾಗಿಂತ ಮೀರಿದ ನಾಟಕದಂತಿದೆ ಎನ್ನಬಹುದು. ತುಂಬಾ ಬಡ ಕುಟುಂಬದಿಂದ ಬಂದಂತಹ ಸಿಲ್ಕ್ ಸ್ಮಿತಾ ಸಣ್ಣ ವಯಸ್ಸಿನಲ್ಲೇ ಮದುವೆಯಾದರು. ಅತ್ತೆ ಮನೆಯಲ್ಲಿ ಕಾಟ ತಾಳಲಾರದೇ, ಮದ್ರಾಸ್ ರೈಲನ್ನು ಏರಿ ಓಡಿಹೋಗಿದ್ದರು. ಕನಿಷ್ಟ ವಿದ್ಯಾರ್ಹತೆ ಸಹ ಇಲ್ಲದೇ ಆಕೆ ಮೆಕಪ್ ಆರ್ಟಿಸ್ಟ್ ಆಗಿ ಕೆರಿಯರ್‍ ಆರಂಭಿಸಿ, ಬಳಿಕ ಭಾರಿ ಡಿಮ್ಯಾಂಡ್ ಇರುವಂತಹ ನಟಿಯಾದರು. ಸೌತ್ ಅಂಡ್ ನಾರ್ತ್ ನಲ್ಲಿ ನೂರಾರು ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಣೆ ಮಾಡಿದ್ದರು. ಕೆರಿಯರ್‍ ಪೀಕ್ಸ್ ನಲ್ಲಿರುವಾಗಲೇ ಸಿಲ್ಕ್ ಸ್ಮಿತಾ 1996 ರಲ್ಲಿ ಚೆನೈನಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದರು. ಕೋಟ್ಯಂತರ ಅಭಿಮಾನಿಗಳಿದ್ದರೂ ಸಹ ಆಕೆಯ ಅಂತ್ಯ ಸಂಸ್ಕಾರ ಮಾತ್ರ ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿದ ರೀತಿಯಲ್ಲಿ ನಡೆದಿತ್ತು.  ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯೇ ಅಂತ್ಯಕ್ರಿಯೆಗಳನ್ನು ಮಾಡಿದ್ದಾರೆ ಎಂದೂ ಸಹ ಹೇಳಲಾಗಿತ್ತು. ಆಕೆಯ ಅಂತ್ಯಕ್ರಿಯೆಯಲ್ಲಿ ನಟ ಅರ್ಜುನ್ ಸರ್ಜಾ ರವರು ಮಾತ್ರ ಹಾಜರಾಗಿದ್ದರಂತೆ.

ಇನ್ನೂ ಸಿಲ್ಕ್ ಸ್ಮಿತಾ ಮರಣದ ಬಗ್ಗೆ ಸೀನಿಯರ್‍ ನಟಿ ಜಯಲಲಿತಾ ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ್ದಾರೆ. ಸಿಲ್ಕ್ ಸ್ಮಿತಾ ಕಡಿಮೆ ಸಮಯದಲ್ಲೇ ಹೆಸರಿನ ಜೊತೆಗೆ ಹಣ ಸಹ ಸಂಪಾದನೆ ಮಾಡಿದ್ದರು. ಶೂಟಿಂಗ್ ಸೆಟ್ ನಲ್ಲಿ ಆಕೆ ನನ್ನ ಜೊತೆ ಮಾತನಾಡುತ್ತಿರಲಿಲ್ಲ. ಒಂದು ಸಿನೆಮಾದಲ್ಲಿ ಸಿಲ್ಕ್ ಸ್ಮಿತಾ ಹಾಗೂ ನಾನು ನಮ್ಮ ಅಕ್ಕ ಜ್ಯೋತಿ ಲಕ್ಷ್ಮೀ ನಟಿಸಿದ್ದೆವು. ಫಾರ್ಮ್ ನಲ್ಲಿರವ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದು ತಪ್ಪು, ಪ್ರೀತಿಸುವುದು ಆಕೆಯ ತಪ್ಪು ಅಲ್ಲ ಆದರೆ ಪೋಷಕರಿಗೆ ದೂರ ಇರುವುದು ಆಕೆಯ ತಪ್ಪು. ಪ್ರಿಯಕರನನ್ನು ಆಕೆ ತುಂಬಾನೆ ನಂಬಿದ್ದಳು. ಆಕೆಯ ನಂಬಿಕೆ ಆತ ಮೋಸ ಮಾಡಿದೆ. ಆ ಸಮಯದಲ್ಲಿ ಪೋಷಕರು ಆಕೆಯೊಂದಿಗೆ ಇದ್ದಿದ್ದರೇ ಆಕೆಗೆ ಸಮಾಧಾನ ಹೇಳ್ತಾ ಇದ್ದರು. ಈ ಕಾರಣದಿಂದ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಳು ಎಂದು ಜಯಲಲಿತಾ ಹೇಳಿದ್ದಾರೆ. ಇನ್ನೂ ಜಯಮಾಲಿನಿ ಹಂಚಿಕೊಂಡ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.