Film News

ತೆಲುಗು ನಿರ್ಮಾಪಕರ ಮೇಲೆ ಈಷಾ ರೆಬ್ಬಾ ಫೈರ್, ಹೊರ ರಾಜ್ಯದ ನಟಿಯರ ಮೇಲೆ ಆಸಕ್ತಿ ಏಕೆ ಎಂದ ನಟಿ…..!

ತೆಲುಗು ಸಿನೆಮಾ ರಂಗದಲ್ಲಿ ಸಾಮಾನ್ಯವಾಗಿ ಸ್ಥಳೀಯ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಈಗಾಗಲೇ ತೆಲುಗು ಸಿನಿರಂಗದಿಂದ ಅನೇಕರು ಪ್ಯಾನ್ ಇಂಡಿಯಾ ಸ್ಟಾರ್‍ ಗಳಾಗಿದ್ದಾರೆ. ತೆಲುಗು ನಿರ್ಮಾಪಕರು ಹಾಗೂ ನಿರ್ಮಾಪಕರು ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ತೆಲುಗು ಹಿರೋಯಿನ್ ವಿಚಾರದಲ್ಲಿ ಮಾತ್ರ ಇದು ನಡೆಯುತ್ತಿಲ್ಲ. ಅನೇಕ ಟಾಲಿವುಡ್ ನಟಿಯರು ತುಂಬಾನೆ ಕಷ್ಟಪಟ್ಟರೂ ಅವರನ್ನು ಬಿಟ್ಟು ಕೆಲವ ನಿರ್ಮಾಪಕರು ಪಕ್ಕ ರಾಜ್ಯಗಳ ಹಿರೋಯಿನ್ಸ್ ಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಯಂಗ್ ನಟಿ ಈಷಾ ರೆಬ್ಬಾ ಸಹ ಈ ಕುರಿತು ಫೈರ್‍ ಆಗಿದ್ದಾರೆ.

ಯಂಗ್ ಬ್ಯೂಟಿ ಈಶಾ ರೆಬ್ಬಾ ಲೈಫ್ ಈಸ್ ಬ್ಯೂಟಿಪುಲ್ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಪರಿಚಯವಾದ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಿನೆಮಾಗೂ ಎಂಟ್ರಿ ಕೊಡುವ ಮುಂಚೆ ಆಕೆ ಮಾಡಲಿಂಗ್ ಮೂಲಕ ರಂಜಿಸುತ್ತಿದ್ದರು. ಕೆರಿಯರ್‍ ಆರಂಭದಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡ ಈಕೆಯ ಕೆರಿಯರ್‍ ಇದೀಗ ಕೊಂಚ ಸ್ಟ್ರಗಲ್ ನಲ್ಲಿದೆ ಎನ್ನಲಾಗಿದೆ. ಆಕೆಗೆ ಆಫರ್‍ ಗಳು ಕಡಿಮೆಯಾಗಿದೆ. ತೆಲುಗು ನಟಿಯೆಂಬ ಕಾರಣದಿಂದ ಆಕೆಗೆ ಅವಕಾಶಗಳು ಬರುತ್ತಿಲ್ಲವೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ತೆಲುಗು ಹಿರೋಯಿನ್ ಗಳಲ್ಲಿ ಟ್ಯಾಲೆಂಟ್, ಗ್ಲಾಮರ್‍ ಇದ್ದರೂ ಸಹ ಅವಕಾಶಗಳು ಸಿಗುತ್ತಿಲ್ಲ. ಆದರೆ ಈಷಾರೆಬ್ಬಾ ಮಾತ್ರ ಸ್ಟಾರ್‍ ನಟಿಯರಿಗಿಂತ ತಾನೂ ಕಡಿಮೆಯಿಲ್ಲ ಎಂಬಂತೆ ತನ್ನನ್ನು ತಾನು ನಿರೂಪಿಸಿಕೊಂಡಿದ್ದಾರೆ. ತೆಲುಗಿನಲ್ಲೇ ಸಿನೆಮಾಗಳನ್ನು ಮಾಡಲು ಇಷ್ಟಪಡುತ್ತಾರೆ. ಅವಕಾಶಗಳಿಗಾಗಿ ಆಕೆ ತುಂಬಾ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ  ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ನಟನೆ, ಸೌಂದರ್ಯ ಎರಡೂ ಇದ್ದರೂ ಸರಿಯಾದ ಈಷಾ ರೆಬ್ಬಾಗೆ ಅವಕಾಶಗಳು ಕಡಿಮೆ. ಇದರಿಂದ ತೆಲುಗು ಮೇಕರ್ಸ್ ಮೇಲೆ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಈಷಾರೆಬ್ಬಾ ಟಾಲಿವುಡ್ ಮೇಕರ್ಸ್ ಕುರಿತಂತೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ನಾನು ಬೇರೆ ಭಾಷೆಗಳ ಸಿನೆಮಾಗಳಲ್ಲಿ ನಟಿಸುವಾಗ ಅಲ್ಲಿನವರು ತೆಲುಗು ಸಿನೆಮಾಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಮಾತನಾಡುತ್ತಾರೆ. ಅದನ್ನು ನೋಡಿ ನಾನು ಗರ್ವಿಸುತ್ತಿದ್ದೆ. ಆದರೆ ನಮ್ಮ ತೆಲುಗು ಹಿರೋಯಿನ್ ಗಳನ್ನು ಬಿಟ್ಟು ಬೇರೆ ಭಾಷೆಯ ಹಿರೋಯಿನ್ ಗಳನ್ನೆ ತೆಲುಗು ಮೇಕರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬೇರೆ ಭಾಷೆಯ ಹಿರೋಯಿನ್ ಗಳು ಬೇಕು ಎಂದು ಪ್ರೇಕ್ಷಕರು ಏನಾದರೂ ಡಿಮ್ಯಾಂಡ್ ಮಾಡುತ್ತಾರೆಯೇ, ಅಂತಹುದರಲ್ಲಿ ಈ ರೀತಿ ಮಾಡುವುದು ಏಕೆ ಎಂದು ಈಷಾರೆಬ್ಬಾ ಫೈರ್‍ ಆಗಿದ್ದಾರೆ.

ಇನ್ನೂ ಯಂಗ್ ಬ್ಯೂಟಿ ಈಷಾರೆಬ್ಬಾ ಅರವಿಂದ ಸಮೇತ ವೀರ ರಾಘವ, ಮೋಸ್ಟ್ ಎಲಿಜಿಬುಲ್ ಬ್ಯಾಚಿಲರ್‍ ಮೊದಲಾದ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಮಾಯಾ ಮಶ್ಚಿಂದ್ರ ಸೇರಿದಂತೆ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top