Film News

ಅಕ್ಕಿನೇನಿ ನಾಗಚೈತನ್ಯ ಜೊತೆಗಿನ ಅಫೈರ್ ಬಗ್ಗೆ ಪ್ರಶ್ನೆಗೆ ಶೋಭಿತಾ ಧೂಳಿಪಾಲ ರಿಯಾಕ್ಷನ್ ಏನು ಗೊತ್ತಾ?

ತೆಲುಗು ಸಿನಿರಂಗದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಪಡೆದುಕೊಂಡ ಬಳಿಕ ನಾಗಚೈತನ್ಯ ಹಾಗೂ ಯಂಗ್ ನಟಿ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಸುಮಾರು ದಿನಗಳಿಂದ ಕೇಳಿಬರುತ್ತಿವೆ. ಇನ್ನೂ ಈ ಬಗ್ಗೆ ಶೋಭಿತಾಗೆ ಅನೇಕ ಬಾರಿ ಈ ಬಗ್ಗೆ ಪ್ರಶ್ನೆಗಳು ಎದುರಾಗಿದೆ. ಅನೇಕ ಬಾರಿ ಸರಿಯಾದ ಉತ್ತರ ನೀಡಿಲ್ಲ. ಇದೀಗ ಮತ್ತೊಮ್ಮೆ ಶೋಭಿತಾಗೆ ಅದೇ ಪ್ರಶ್ನೆ ಎದುರಾಗಿದ್ದು, ಆಕೆ ಉತ್ತರ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶವೊಂದು ಪಿ.ಎಸ್-2 ಸಿನೆಮಾ ಪ್ರಮೋಷನ್ ವೇಳೆ ನಡೆದಿದೆ.

ತೆಲುಗು ಬ್ಯೂಟಿ ಶೋಭಿತಾ ಧೂಳಿಪಾಲ ಈಗಷ್ಟೆ ಸಿನೆಮಾಗಳಲ್ಲಿ ಸ್ಟಾರ್‍ ಡಮ್ ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಗೂಢಾಚಾರಿ, ಕುರುಪ್, ಮೇಜರ್‍ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಈಕೆ ಕಳೆದ ವರ್ಷ ಪೊನ್ನಿಯನ್ ಸೆಲ್ವನ್ ಸಿನೆಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ಅಭಿನಯಕ್ಕೆ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡಿ‌ದ್ದಾರೆ. ಇನ್ನೂ ಪಿ.ಎಸ್-2 ಸಿನೆಮಾದಲ್ಲೂ ಸಹ ಶೋಭಿತಾ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇದೀಗ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿದೆ.

ಇನ್ನೂ ಪೊನ್ನಿಯನ್ ಸೆಲ್ವನ್-2 ಸಿನೆಮಾದ ಪ್ರಮೋಷನ್ ನಲ್ಲಿ ಇಡೀ ಚಿತ್ರತಂಡ ಭಾಗಿಯಾಗುತ್ತಾ ರಂಜಿಸುತ್ತಿದ್ದಾರೆ. ಪ್ರಮೋಷನ್ ನಲ್ಲಿ ಐಶ್ವರ್ಯರೈ, ತ್ರಿಷಾ, ಐಶ್ವರ್ಯ ಲಕ್ಷ್ಮೀ ರವರ ಜೊತೆಗೆ ಶೋಭಿತಾ ಸಹ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಶೋಭಿತಾಗೆ ಕೆಲವೊಂದು ಪ್ರಶ್ನೆಗಳು ಎದುರಾಗುತ್ತಿವೆ. ಅದರಲ್ಲೂ ಹೆಚ್ಚಾಗಿ ನಾಗಚೈತನ್ಯ ಜೊತೆಗಿನ ಅಫೈರ್‍ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತಿವೆ. ಸುಮಾರು ದಿನಗಳಿಂದ ಶೋಭಿತಾ ಹಾಗೂ ನಾಗಚೈತನ್ಯ ನಡುವಣ ಅಫೈರ್‍ ಬಗ್ಗೆ ಸದಾ ಸುದ್ದಿಯಾಗುತ್ತಲೇ ಇದೆ. ಈ ಬಗ್ಗೆ ಈಗಾಗಲೇ ನಾಗಚೈತನ್ಯ ನಮ್ಮ ನಡುವೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೂ ಸಹ ಈ ಸುದ್ದಿಗಳು ನಿಲ್ಲುತ್ತಿಲ್ಲ. ಇದೀಗ ಮತ್ತೆ ಶೋಭಿತಾಗೆ ಅಫೈರ್‍ ಬಗ್ಗೆ ಪ್ರಶ್ನೆ ಎದುರಾಗಿದೆ.

ಇನ್ನೂ ಪ್ರಮೋಷನ್ ವೇಳೆ ಶೋಭಿತಾಗೆ ಪದೇ ಪದೇ ಅಫೈರ್‍ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಆದರೆ ಆ ಪ್ರಶ್ನೆಯನ್ನು ಆಕೆ ಸ್ಕಿಪ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಹ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಶೋಭಿತಾ ಅದೇ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲೂ ಸಹ ಆಕೆ ಉತ್ತರ ನೀಡದೇ ಮಧ್ಯೆಯೇ ಎದ್ದು ಹೋಗಿದ್ದರು. ಈ ಬಗ್ಗೆ ಆಕೆ ಮಾತನಾಡದೇ ಇರುವ ಕಾರಣ ಅವರ ನಡುವೆ ಸಂಬಂಧ ಇದೆ ಎಂಬ ರೂಮರ್‍ ಮತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ.

Most Popular

To Top