ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶ ಬಂದರೂ ನೋ ಎನ್ನುತ್ತೇನೆ ಎಂದ ತೆಲುಗು ನಟಿ ಪ್ರಿಯಾಂಕಾ….!

Follow Us :

ತೆಲುಗು ಸಿನಿರಂಗದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಒಬ್ಬರಾಗಿದ್ದಾರೆ. ಸಿನಿರಂಗದಲ್ಲಿ ಅನೇಕ ಸೆಲೆಬ್ರೆಟಿಗಳೂ ಸಹ ಆತನಿಗೆ ಅಭಿಮಾನಿಗಳಾಗಿದ್ದಾರೆ. ಜೊತೆಗೆ ಕೆಲವು ನಟಿಯರು ಆತನೊಂದಿಗೆ ನಟಿಸಲು ತುದಿಗಾಲಿನ ಮೇಲೆ ನಿಂತಿರುತ್ತಾರೆ. ಆದರೆ ತೆಲುಗು ಯಂಗ್ ಬ್ಯೂಟಿ ಪ್ರಿಯಾಂಕಾ ಜವಾಲ್ಕರ್‍ ಮಾತ್ರ ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶ ಬಂದರೇ ನೋ ಎನ್ನುತ್ತೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ನಟಿ ಪ್ರಿಯಾಂಕಾ ಜವಾಲ್ಕರ್‍ ಆಂಧ್ರದ ಅನಂತಪುರ ಪ್ರಾಂತ್ಯದಲ್ಲಿ ಜನ್ಮಿಸಿದ್ದಾರೆ. ಡಿಗ್ರಿ ಕಂಪ್ಲೀಟ್ ಆದ ಬಳಿಕ ಫ್ಯಾಷನ್ ಡಿಸೈನಿಂಗ್ ಸಹ ಮಾಡಿದ್ದರು. ಬಳಿಕ ಅಮೇರಿಕಾಗೆ ಹಾರಿದ ಈಕೆ ಅಲ್ಲಿ ಸಾಫ್ಟವೇರ್‍ ಕಂಪನಿಯೊಂದರಲ್ಲಿ ಕೆಲಸ ಸಹ ಮಾಡಿದರು. ಮೊದಲಿನಿಂದಲೂ ಸಿನಿರಂಗ ಅಂದರೇ ಆಕೆಗೆ ತುಂಬಾ ಇಷ್ಟವಾದ ಹಿನ್ನೆಲೆಯಲ್ಲಿ ಕೆಲಸವನ್ನು ಬಿಟ್ಟು ಸಿನಿರಂಗಕ್ಕೆ ಎಂಟ್ರಿ ಕೊಡಲು ಹೈದರಾಬಾದ್ ಗೆ ಮರಳಿದರು. ಬಳಿಕ ಕೆಲವೊಂದು ಶಾರ್ಟ್ ಸಿನೆಮಾಗಳಲ್ಲಿ ನಟಿಸಿದರು.  ಸದ್ಯ ಸಿನಿರಂಗದಲ್ಲಿ ಕ್ರೇಜ್ ಅಂಡ್ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಯಂಗ್ ನಟರೊಂದಿಗೆ ಸಿನೆಮಾಗಳಲ್ಲಿ ನಟಿಸುತ್ತಿದ್ದರೂ ಸಹ ಆಕೆಗೆ ಬಿಗ್ ಬ್ರೇಕ್ ನೀಡುವ ಸಿನೆಮಾ ಯಾವುದೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದೀಗ ಆಕೆ ಮತ್ತೊಂದು ಶಾಕಿಂಗ್ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ.

ನಟಿ ಪ್ರಿಯಾಂಕ ಜವಾಲ್ಕರ್‍ ಇದೀಗ ಪವನ್ ಕಲ್ಯಾಣ್ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆತನೊಂದಿಗೆ ನಟಿಸುವ ಅವಕಾಶ ಬಂದರೇ ನೋ ಎಂದು ಹೇಳುತ್ತೇನೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ತಾನು ಪವನ್ ಕಲ್ಯಾಣ್ ರವರಿಗೆ ದೊಡ್ಡ ಅಭಿಮಾನಿಯಾಗಿದ್ದೇನೆ. ಇತ್ತೀಚಿಗೆ ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆಗೆ ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶ ಬಂದರೇ ನಟಿಸುತ್ತೀರಾ ಎಂದು ಪ್ರಶ್ನೆ ಎದುರಾಗಿದೆ. ನಾನು ಪವನ್ ಕಲ್ಯಾಣ್ ರವರಿಗೆ ವೀರ ಅಭಿಮಾನಿ. ಆತನನ್ನು ದೂರದಿಂದಲೇ ನೋಡುತ್ತಾ ಸಂಭ್ರಮಿಸುತ್ತೇನೆ. ಅಂದಕ್ಕಿಂತಲೂ ನನಗೇ ಏನು ಬೇಡ. ಆತನೊಂದಿಗೆ ನಟಿಸುವ ಅವಕಾಶ ಬಂದರೂ ಸಹ ನಾನು ಒಪ್ಪುವುದಿಲ್ಲ. ಆತನೊಂದಿಗೆ ನನಗೆ ನಟಿಸಲು ಆಗುವುದಿಲ್ಲ. ನನಗೆ ಬಾಲ್ಯದಿಂದಲೂ ಪವನ್ ಕಲ್ಯಾಣ್ ಅಂದರೇ ತುಂಬಾನೆ ಇಷ್ಟ. ಆತನನ್ನು ನೋಡುತ್ತಲೇ ಬೆಳೆದಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ ಜವಾಲ್ಕರ್‍.

ಇನ್ನೂ ಪವನ್ ಕಲ್ಯಾಣ್ ರವರ ಖುಷಿ ಸಿನೆಮಾ ಎಷ್ಟು ಬಾರಿ ನೋಡಿದ್ದೇನೋ ನನಗೆ ತಿಳಿಯದು. ಅದೇ ರೀತಿ ತಮ್ಮುಡು ಸಿನೆಮಾ ಸುಮಾರು ಇಪ್ಪತ್ತು ಬಾರಿ ನೋಡಿದ್ದೇನೆ. ಈ ಸಿನೆಮಾದಲ್ಲಿ ಪ್ರತಿಯೊಂದು ಡೈಲಾಗ್ ಗಳನ್ನು ನಾನು ಸುಲಭವಾಗಿ ಹೇಳಿಬಡುತ್ತೇನೆ. ಪವನ್ ಕಲ್ಯಾಣ್ ರವರು ದೊಡ್ಡ ಸ್ಟಾರ್‍ ಆದರೂ ಸಹ ಅವರು ತುಂಬಾ ಸರಳವಾಗಿ ಅದು ಹೇಗೆ ಇರುತ್ತಾರೋ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.  ಸದ್ಯ ಪ್ರಿಯಾಂಕಾ ಜವಾಲ್ಕರ್‍ ಗೆ ಅನೀಲ್ ರಾವಿಪೂಡಿ ಹಾಗೂ ಬಾಲಕೃಷ್ಣ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.