Film News

ನಯನತಾರಾ ಬಗ್ಗೆ ಪರೋಕ್ಷವಾಗಿ ಶಾಕಿಂಗ್ ಹೇಳಿಕೆಗಳನ್ನು ಕೊಟ್ಟ ಮಮತಾ ಮೋಹನ್ ದಾಸ್, ವೈರಲ್ ಆದ ಕಾಮೆಂಟ್ಸ್….!

ನಟಿ ಮಮತಾ ಮೋಹನ್ ದಾಸ್ ನಟಿಯಾಗಿ, ಪ್ಲೇ ಬ್ಯಾಕ್ ಸಿಂಗರ್‍ ಆಗಿ, ಪ್ರೊಡ್ಯೂಸರ್‍ ಆಗಿಯೂ ಸಹ ಮಲ್ಟಿ ಟ್ಯಾಲೆಂಟೆಡ್ ನಟಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಮಲಯಾಳಂ, ತಮಿಳು, ತೆಲುಗು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನೇಕ ಹಾಡುಗಳನ್ನು ಹಾಡಿದ್ದಾರೆ ಸ್ಪೇಷಲ್ ಸಾಂಗ್ ಗಳಲ್ಲೂ ಸಹ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಸಿನಿರಂಗದಲ್ಲಿ ಅನೇಕ ರಾಜಕೀಯಗಳು ನಡೆಯುತ್ತಿರುತ್ತವೆ. ಸಿನಿ ಕಲಾವಿದರು ಅಂತಹ ರಾಜಕೀಯದಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದೀಗ ಮಮತಾ ಮೋಹನ್ ದಾಸ್ ಸಹ ಸ್ಟಾರ್‍ ನಟಿ ನಯನತಾರಾ ಕುರಿತು ಪರೋಕ್ಷವಾಗಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಸಿನೆಮಾ ರಂಗದಲ್ಲಿ ನಟಿ ನಟರಿಗೆ ಸಂಬಂಧಿಸಿದಂತೆ ಅನೇಕ ರೀತಿಯಲ್ಲಿ ರಾಜಕೀಯಗಳು ನಡೆಯುತ್ತಿರುತ್ತವೆ. ಅದರಲ್ಲಿ ಕೆಲ ಸ್ಟಾರ್‍ ಗಳ ಮಕ್ಕಳಿಗೆ ನಟನೆ, ಸೌಂದರ್ಯ ಇಲ್ಲದೇ ಇದ್ದರೂ ಸಹ ಅವಕಾಶಗಳು ಸಿಗುತ್ತವೆ. ನೆಪೊಟೀಸಂ ಎಂಬೆಲ್ಲಾ ಮಾತುಗಳನ್ನು ನಾವು ಕೇಳಿರುತ್ತೇವೆ. ಈ ಹಾದಿಯಲ್ಲೇ ಮಮತಾ ಮೋಹನ್ ದಾಸ್ ಸಹ ಅಂತಹ ಅನುಭವವನ್ನು ಎದುರಿಸಿದ್ದಾರಂತೆ. ರಜನಿಕಾಂತ್ ಸಿನೆಮಾವೊಂದರಲ್ಲಿ ಆಕೆಗೆ ಅವಕಾಶ ಸಿಕ್ಕಿದ್ದು, ಒಂದು ಹಾಡಿಗಾಗಿ ಆ ಸಿನೆಮಾ ತಂಡ ಆಕೆಯನ್ನು ಸಂಪರ್ಕ ಮಾಡಿತ್ತಂತೆ. ಸುಮಾರು ನಾಲ್ಕು ದಿನಗಳ ಕಾಲ ಈ ಹಾಡಿನ ಶೂಟಿಂಗ್ ಸಹ ನಡೆದಿತ್ತಂತೆ. ಬಳಿಕ ಶೂಟಿಂಗ್ ಸಮಯದಲ್ಲೇ ಆಕೆ ಆ ಫ್ರೇಂ ನಲ್ಲಿಲ್ಲ. ಕೇವಲ ಒಂದು ಶಾಟ್ ನಲ್ಲಿ ಮಾತ್ರ ಹಿಂದೆ ಕಾಣಿಸುತ್ತೇನೆ ಎಂದು ಮಮತಾ ಮೋಹನ್ ದಾಸ್ ಗೆ ತಿಳಿಯಿತ್ತಂತೆ.

ಇನ್ನೂ ನನಗೆ ಹೇಳಿದಂತೆ ಆ ಹಾಡಿನ ಚಿತ್ರೀಕರಣ ನಡೆಯಿಲ್ಲ. ಯಾರು ಆ ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸಿದ್ದಾರೆಯೋ ಆಕೆಯ ಕಾರಣದಿಂದಲೇ ನನಗೆ ಈ ರೀತಿ ಆಗಿತ್ತು. ಆ ಹಾಡಿನಲ್ಲಿ ಮತ್ತೋರ್ವ ಹಿರೋಯಿನ್ ಇದ್ದರೇ ನಾನು ಶೂಟಿಂಗ್ ಗೆ ಬರುವುದಿಲ್ಲ ಎಂದು ಆ ಹಿರೋಯಿನ್ ಹೇಳಿದ ಕಾರಣಕ್ಕಾಗಿ ನನ್ನ ಪಾರ್ಟ್‌ನ ಶೂಟಿಂಗ್ ನಡೆಯಲಿಲ್ಲ ಎಂದು ಮಮತಾ ಮೋಹನ್ ದಾಸ್ ಹೇಳಿದ್ದಾರೆ. ಇನ್ನೂ ಆಕೆ ಮಾತನಾಡಿರುವುದು ರಜನಿಕಾಂತ್ ರವರ ಕಥಾನಾಯಕುಡು ಸಿನೆಮಾ ಬಗ್ಗೆ. ಇನ್ನೂ ಮಮತಾ ಮೋಹನ್ ಪರೋಕ್ಷವಾಗಿ ನಯನತಾರಾ ಹೆಸರು ಹೇಳದೇ ಈ ಹೇಳಿಕೆಗಳನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ನೂ ಕಥಾನಾಯಕುಡು ಸಿನೆಮಾದ ದೇವುಡೇ ಸ್ವರ್ಗಂ ಎಂಬ ಹಾಡಿನಲ್ಲಿ ಮಮತಾ ಮೋಹನ್ ದಾಸ್ ಕೆಲವೊಂದು ಸೆಕೆಂಡ್ ಗಳು ಕಾಣಿಸಿಕೊಂಡಿದ್ದಾರೆ. ನಯನತಾರಾ ರವರಿಂದಲೇ ಆಕೆಗೆ ಸಮಸ್ಯೆಯಾಯಿತು ಎಂದು ಪರೋಕ್ಷವಾಗಿ ಮಮತಾ ಮೋಹನ್ ದಾಸ್ ಕಾಮೆಂಟ್ ಗಳನ್ನು ಮಾಡಿದ್ದು, ಈ ಬಗ್ಗೆ ನಯನತಾರಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top