ನಟಿ ಅರ್ಚನಾ ಸಂಚಲನಾತ್ಮಕ ಹೇಳಿಕೆಗಳು, ಆ ನಟರು ಹುಡುಗಿಯರನ್ನು ಟ್ಯ್ರಾಪ್ ಮಾಡುತ್ತಾರೆ ಎಂದ ನಟಿ…!

Follow Us :

ಟಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿ ಅರ್ಚನಾ. ನೇನು ಎಂಬ ತೆಲುಗು ಸಿನೆಮಾದ ಮೂಲಕ ಒಳ್ಳೆಯ ಪಾಪ್ಯುಲಾರಿಟಿ ದಕ್ಕಿಸಿಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ನಟಿ ಅರ್ಚನಾ ಮದುವೆಯಾದರು. ಮದುವೆಯಾದ ಬಳಿಕ ಕುಟುಂಬದೊಂದಿಗೆ ಬ್ಯುಸಿಯಾದರು. ಇದೀಗ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ದವಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಅರ್ಚನಾ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳು ಇದಿಗ ಸಖತ್ ವೈರಲ್ ಆಗುತ್ತಿವೆ.

ತೆಲುಗು ಸಿನಿರಂಗದಲ್ಲಿ ನಟಿಯಾಗಿ ಒಳ್ಳೆಯ ಫೇಂ ಇದ್ದರೂ ಸಹ ಸಕ್ಸಸ್ ಕಾಣದ ಅನೇಕ ನಟಿಯರಿದ್ದಾರೆ ಅವರ ಪೈಕಿ ಅರ್ಚನಾ ಸಹ ಒಬ್ಬರಾಗಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಅನೇಕ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಧಾ ಗೋಪಾಲಂ ಸಿನೆಮಾದಲ್ಲಿ ನನಗೆ ಚಾನ್ಸ್ ಮಿಸ್ ಆಯ್ತು. ಒಂದು ಸಿನೆಮಾದಲ್ಲಿ ನಾನು ಕ್ಯಾರೆಕ್ಟರ್‍ ರೋಲ್ ಮಾಡಿದ ಕಾರಣ ನನಗೆ ಹಿರೋಯಿನ್ ಚಾನ್ಸ್ ಹೋಯಿತು. ಈ ಬಳಿಕವೇ ನನಗೆ ಸಿನಿರಂಗ ಅಂದರೇ ಏನು ಎಂದು ಅರ್ಥವಾಗಿದೆ. ಆ ಸಿನೆಮಾದಲ್ಲಿ ನಾನು ನಟಿಸಿದ್ದರೇ ನನ್ನ ಕೆರಿಯರ್‍ ಬೇರೆಯಾಗಿರುತ್ತಿತ್ತು. ಕೆಲವರು ಕ್ಯಾರೆಕ್ಟರ್‍ ಹಿರೋಗಳಾಗಿ ಸಕ್ಸಸ್ ಆಗಿದ್ದಾರೆ. ಆದರೆ ನಾನು ಹಾಗಲ್ಲ. ಎಂಬೆಲ್ಲಾ ಕಾಮೆಂಟ್ ಗಳನ್ನು ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಇನ್ನೂ ತೆಲುಗಿನವರು ನಾನು ಎಲ್ಲಿಗೆ ಹೋದರು ನನಗೆ ಮತಷ್ಟು ಆಫರ್‍ ಗಳು ಬರಬೇಕೆಂದು ಹೇಳುತ್ತಾರೆ. ಯಮದೊಂಗ ಸಿನೆಮಾದಲ್ಲಿ ಚಾನ್ಸ್ ನನಗೆ ಪ್ಲಸ್ ಆಗಿತ್ತು. ಸದ್ಯ ನಾನು ವಿಭನ್ನ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ರಂಗಸ್ಥಳಂ ಸಿನೆಮಾದಲ್ಲಿ ಅನಸೂಯ ಪೋಷಣೆ ಮಾಡಿದ ರಂಗಮ್ಮತ್ತ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಯಾವುದೇ ಹುಡುಗಿ ವೀಕ್ ಆಗಿದ್ದರೇ ಆಕೆಯ ಮೈಂಡ್ ಕ್ಯಾಪ್ಚರ್‍ ಮಾಡಲು ಅನೇಕರು ಕಾಯುತ್ತಿರುತ್ತಾರೆ. ಒಬ್ಬ ಹಿರೋ ಮಾತ್ರ ನನಗೆ ತಿಳಿಯದೇ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ಆ ನಟನ ಬುದ್ದಿ ಸರಿಯಿಲ್ಲ. ಸಿನಿರಂಗದಲ್ಲಿ ಕೆಲವು ಹಿರೋಗಳು ಯಾವುದೇ ಸಪೋರ್ಟ್ ಇಲ್ಲದಂತಹ ಹುಡುಗಿಯರನ್ನು ಟ್ಯ್ರಾಪ್ ಮಾಡುತ್ತಾರೆ. ನಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ನಮಗೆ ತಿಳಿಯುತ್ತದೆ. ನನಗೆ ನಮ್ಮ ಪೋಷಕರ ಸಪೋರ್ಟ್ ಇದೆ ಎಂದೆಲ್ಲಾ ಹೇಳಿದ್ದಾರೆ.

ಇನ್ನೂ ಅರ್ಚನಾ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನಟಿ ಅರ್ಚನಾ ಈ ಹಿಂದೆ ಸಹ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಸಿನಿರಂಗದಲ್ಲಿ ನಟಿಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಮಾತನಾಡಿದ್ದರು. ಜೊತೆಗೆ ಸಿನಿರಂಗದಲ್ಲಿ ಪುರುಷರ ಆಧಿಪತ್ಯದ ಬಗ್ಗೆ ಸಹ ಮಾತನಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ.