Film News

ಸಿನೆಮಾಗಳಲ್ಲಿ ಸದಾ ನಗಿಸುವ ಪೋಸಾನಿ ಜೀವನದಲ್ಲಿ ತೀವ್ರ ವಿಷಾದ, ಕಣ್ಣಿರು ಹಾಕಿದ ಹಾಸ್ಯ ನಟ, ಆತನ ಜೀವನದಲ್ಲಿ ಆಗಿದ್ದು ಏನು?

ತೆಲುಗು ಸಿನಿರಂಗದಲ್ಲಿ ವಿಲಕ್ಷಣ ನಟರಲ್ಲಿ ಪೋಸಾನಿ ಕೃಷ್ಣ ಮುರಳಿ ಸಹ ಒಬ್ಬರಾಗಿದ್ದಾರೆ. ಸದಾ ನಗುತ್ತಾ, ಎಲ್ಲರನ್ನೂ ನಗಿಸುತ್ತಾ ತುಂಬಾ ಲವಲವಿಕೆಯಿಂದ ಇರುತ್ತಾರೆ. ಸಿನಿರಂಗದ ಅನೇಕ ಕಲಾವಿದರ ಜೀವನದಲ್ಲಿ ದುಃಖದ ಘಟನೆಗಳು ತುಂಬಾನೆ ನಡೆದಿರುತ್ತವೆ. ದೊಡ್ಡಪರದೆಯ ಮೇಲೆ ಎಲ್ಲರನ್ನೂ ನಗಿಸಿದರೂ, ಅವರ ನಿಜ ಜೀವನದಲ್ಲಿ ತುಂಬಾನೆ ನೋವು ಪಟ್ಟಿರುತ್ತಾರೆ. ಈ ಹಾದಿಯಲ್ಲೆ ನಟ ಪೋಸಾನಿ ಕೃಷ್ಣ ಮುರಳಿ ಸಹ ತಮ್ಮ ಜೀವನದಲ್ಲಿ ಅನೇಕ ನೋವನ್ನು ಅನುಭವಿಸಿದ್ದಾರಂತೆ. ಸ್ವತಃ ಪೋಸಾನಿ ಯವರೇ ಅದನ್ನು ರಿವೀಲ್ ಮಾಡಿದ್ದಾರೆ.

ತೆಲುಗು ಸಿನಿರಂಗದ ವಿಲಕ್ಷಣ ನಟ ಎಂದೇ ಖ್ಯಾತಿ ಪಡೆದುಕೊಂಡಿರುವ ಪೋಸಾನಿ ತೆಲುಗಿನಲ್ಲಿ ಡೈರೆಕ್ಟರ್ ಆಗಿ, ನಟನಾಗಿ ತನ್ನದೇ ಆದ ಮುದ್ರೆ ಹಾಕಿದ್ದಾರೆ. ಆತನ ಸಿನೆಮಾಗಳಲ್ಲಿ ಕಾಮಿಡಿ, ಸೀರಿಯರ್‍ ಎಲ್ಲವೂ ಇರುತ್ತದೆ. ಆತ ಅಭಿನಯದ ಬಹುತೇಕ ಸಿನೆಮಾಗಳಲ್ಲಿ ಪ್ರೇಕ್ಷಕರನ್ನು ನಗಿಸುತ್ತಾ ರಂಜಿಸಿದ್ದಾರೆ.  ನೆಗೆಟೀವ್ ರೋಲ್ಸ್ ಗಳಲ್ಲಿ ಕಾಣಿಸಿಕೊಂಡರೂ ಸಹ ಕೊಂಚ ನಗು ಮಾತ್ರ ಇರುತ್ತದೆ. ಪೋಸಾನಿ ಎಲ್ಲಿ ಕಾಣಿಸಿಕೊಂಡರೂ ನಗು ಅಲ್ಲಿರುತ್ತದೆ ಅಥವಾ ಕಾಂಟ್ರವರ್ಸಿ ಇರುತ್ತದೆ. ಇನ್ನೂ ಈ ರೀತಿಯ ವ್ಯಕ್ತಿತ್ವ ಹೊಂದಿರುವ ಪೋಸಾನಿ ರವರ ಜೀವನದಲ್ಲೂ ಒಂದು ವಿಷಾದವಿದೆ. ಇನ್ನೂ ಈ ವಿಷಾದ ಬಗ್ಗೆ ಮಾತನಾಡುತ್ತಾ, ಪೋಸಾನಿ ಕಣ್ಣೀರಾಕಿದ್ದಾರೆ. ಅಲ್ಲಿದ್ದವರನ್ನೂ ಸಹ ಎಮೋಷನಲ್ ಆಗುವಂತೆ ಮಾಡಿದ್ದಾರೆ.

ಪೋಸಾನಿ ಕೃಷ್ಣ ಮುರಳಿ ನಟನಾಗಿ, ರಾಜಕೀಯ ನಾಯಕನಾಗಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇದರ ಜೊತೆಗೆ ಕಿರುತೆರೆಯಲ್ಲೂ ಸಹ ಕೆಲವೊಂದು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನೂ ತೆಲುಗಿನ ಸ್ಟಾರ್‍ ಆಂಕರ್‍ ಸುಮಾ ಕನಕಾಲ ಹೋಸ್ಟ್ ಮಾಡುವಂತಹ ಸುಮಾ ಅಡ್ಡ ಎಂಬ ಕಾರ್ಯಕ್ರಮದಲ್ಲಿ ಪೋಸಾನಿ ಹಾಗೂ ಅಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಪೋಸಾನಿ ನಮ್ಮ ತಂದೆ ನನ್ನ ಚಿಕ್ಕಂದಿನಿಂದಲೇ ಮೃತಪಟ್ಟರು. ನಮಗೆ ಬದುಕುವುದು ಹೇಗೆ ಎಂದು ಕಲಿಸಿಕೊಟ್ಟರು. ಅವರಿಗೆ ಯಾವುದೇ ರೀತಿಯ ಅಭ್ಯಾಸ ಇರಲಿಲ್ಲ. ಆದರೆ ಯಾರೋ ಆತನಿಗೆ ಇಸ್ಪೀಟ್ ಕಲಿಸಿದರು. ಅದೇ ನಮ್ಮ ಜೀವನಲ್ಲಿ ಕತ್ತಲು ಆವರಿಸುವಂತೆ ಮಾಡಿತ್ತು. ನಮ್ಮ ತಂದೆಗೆ ಅನೇಕರು ನೀನು ಏಕೆ ಆ ರೀತಿ ಮಾಡುತ್ತಿದ್ದಿಯಾ ಎಂದು ಕೇಳಿದ್ದರು. ಇದರಿಂದ ಮನನೊಂದ ನಮ್ಮ ತಂದೆ ಸುಬ್ಬಾರಾವು ರವರು ಹೊಲದ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಂಡರು. ಈ ಎಲ್ಲಾ ವಿಚಾರಗಳನ್ನು ಹೇಳುತ್ತಾ ಭಾವುಕರಾದರು.

ಇನ್ನೂ ಸದಾ ನಗಿಸುವ ಪೋಸಾನಿ ಜೀವನದಲ್ಲಿ ಈ ರೀತಿಯ ವಿಷಾದ ಇದೆ ಎಂಬುದನ್ನು ಅವರೇ ರಿವೀಲ್ ಮಾಡಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿದ್ದ ಸುಮಾ ಹಾಗೂ ಆಲಿ ಸಹ ಭಾವುಕರಾದರು. ಸದ್ಯ ಪೋಸಾನಿ ತನ್ನ ತಂದೆಯನ್ನು ನೆನಪಿಸಿಕೊಂಡು ಭಾವುಕರಾದ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಪೋಸಾನಿ ಅಭಿಮಾನಿಗಳು ಸಹ ಆತನನ್ನು ಸಂತೈಸುವ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top