Film News

ಮದುವೆಯ ಬಗ್ಗೆ ಕೃತಿ ಸನನ್ ಶಾಕಿಂಗ್ ಕಾಮೆಂಟ್ಸ್, ನಟಿಯರನ್ನು ಮದುವೆಯಾಗಲು ಯಾರು ಇಷ್ಟ ಪಡೊಲ್ಲ ಎಂದ ನಟಿ…..!

ಬಾಲಿವುಡ್ ಹಾಟ್ ಬ್ಯೂಟಿ ಕೃತಿ ಸನನ್ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಸಹ ಆಕೆ ಬಾಲಿವುಡ್ ನಲ್ಲಿ ಪುಲ್ ಫೇಂ ಪಡೆದುಕೊಂಡರು. ತೆಲುಗಿನಲ್ಲಿ ಸಕ್ಸಸ್ ಕಾಣದ ಕೃತಿಗೆ ಬಾಲಿವುಡ್ ನಲ್ಲಿ ಸಾಲು ಸಾಲು ಸಕ್ಸಸ್ ಬಂದವು. ಇದೀಗ ಆಕೆ ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಬಿಗ್ ಬಜೆಟ್ ಸಿನೆಮಾಗಳಿವೆ. ನಟಿ ಕೃತಿ ಸನನ್ ಮದುವೆಯ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಅಂಡ್ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

ಸಾಮಾನ್ಯವಾಗಿ ಸಿನಿರಂಗದಲ್ಲಿ ನಟಿಸಲು ಯಾರಾದರೂ ಮಹಿಳೆಯರು ಹೋದರೇ ಅನೇಕರು ಆಶ್ಚರ್ಯದಿಂದ ನೋಡುತ್ತಾರೆ. ಸಿನಿರಂಗದಲ್ಲಿ ಮಹಿಳೆಯರು ಬಂದರೇ ಕೆಟ್ಟು ಹೋಗುತ್ತಾರೆ ಎಂಬ ಅಭಿಪ್ರಾಯ ಇಂದಿಗೂ ಸಹ ಅನೇಕರಲ್ಲಿದೆ.  ಈ ಕಾರಣದಿಂದಲೇ ಅನೇಕ ಸ್ಟಾರ್‍ ನಟರು ತಮ್ಮ ಹೆಣ್ಣು ಮಕ್ಕಳನ್ನು ಹಿರೋಯಿನ್ ಮಾಡಲು ಇಷ್ಟಪಡುವುದಿಲ್ಲ. ಈ ಹಿಂದೆ ಈ ಭಾವನೆ ಹೆಚ್ಚಾಗಿತ್ತು. ಆದರೆ ಇದೀಗ ನಟನೆ ಎಂಬುದು ಸಹ ಒಂದು ವೃತ್ತಿಯಂತೆ ಭಾವಿಸಿ ಹೆಚ್ಚು ಹೆಚ್ಚು ಯುವತಿಯರು ಹಿರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವೊಂದು ಕಡೆ ಇಂದಿಗೂ ಸಹ ನಟಿಯರ ವಿರುದ್ದ ಕೆಟ್ಟ ಭಾವನೆ ಸಹ ಇದೆ. ಈ ವಿಚಾರವನ್ನು ಕೃತಿ ಸನನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇನ್ನೂ ಸಿನಿರಂಗದಲ್ಲಿ ನಟಿಯರಿಗೆ ಅಷ್ಟೊಂದು ಬೇಗ ಮದುವೆಯಾಗಲ್ಲ. ನಿಜಕ್ಕೂ ಅನೇಕರು ನಟಿಯರನ್ನು ಮದುವೆಯಾಗಲು ಇಷ್ಟ ಪಡುವುದಿಲ್ಲ. ಇದಕ್ಕೆ ಕಾರಣ ಹಿರೋಯಿನ್ ಅನ್ನೋದು ಒಂದು ಉದ್ಯೋಗ ಎಂಬುದನ್ನು ಇನ್ನೂ ಅನೇಕರು ಒಪ್ಪುತ್ತಿಲ್ಲ ಎಂದಿದ್ದಾರೆ.

ಇನ್ನೂ ಸಿನೆಮಾ ರಂಗದಲ್ಲಿ ನಟಿಯಾಗಿರುವುದು ಒಂದು ವೃತ್ತಿಯಂತೆ ಯಾರು ನೋಡುವುದಿಲ್ಲ. ಈ ಕಾರಣದಿಂದಲೇ ಹಿರೋಯಿನ್ ಗಳಿಗೆ ಮದುವೆಯಾಗುವುದು ತುಂಬಾನೆ ಕಷ್ಟ. ಅಷ್ಟೇಅಲ್ಲದೇ ಸಿನಿರಂಗದಲ್ಲಿ ಎಂಟ್ರಿ ಕೊಟ್ಟ ಸಮಯದಲ್ಲಿ ಅನೇಕರು ನನಗೂ ಸಹ ಇದೇ ರೀತಿಯಲ್ಲಿ ಭಯಪಡಿಸಿದ್ದರು. ಆದರೆ ನಾನು ಅಂತಹ ವಿಚಾರಗಳನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ನಾನು ತುಂಬಾ ಇಷ್ಟಪಟ್ಟು ಈ ವೃತ್ತಿಯನ್ನು ಆರಿಸಿಕೊಂಡೆ. ಈ ವೃತ್ತಿಯ ಬಗ್ಗೆ ಸಮಾಜದಲ್ಲಿ ಎಂತಹುದೇ ತಪ್ಪು ಅಭಿಪ್ರಾಯಗಳಿದ್ದರೂ ಸಹ ನಾನು ಅದರ ಬಗ್ಗೆ ಚಿಂತೆಯೇ ಮಾಡೊಲ್ಲ ಎಂದು ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಕೃತಿ ಸನನ್ ಪ್ರಭಾಸ್ ಜೊತೆಗೆ ಆದಿಪುರುಷ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಗೆ ಬರಲಿದೆ. ಈ ಸಿನೆಮಾದ ಶೂಟಿಂಗ್ ಸಮಯದಲ್ಲಿ ಪ್ರಭಾಸ್ ಹಾಗೂ ಕೃತಿ ಸನನ್ ನಡುವೆ ಪ್ರೇಮಾಂಕುರ ಆಗಿದೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳೂ ಸಹ ಜೋರಾಗಿಯೇ ಕೇಳಿಬರುತ್ತಿವೆ. ಆದರೆ ಈ ರೂಮರ್‍ ಬಗ್ಗೆ ಕೃತಿ ಸುಳ್ಳು ಸುದ್ದಿ ಎಂದು ಅನೇಕ ಬಾರಿ ಕ್ಲಾರಿಟಿ ಕೊಟ್ಟಿದ್ದಾರೆ. ಆದರೂ ಸಹ ಆಗಾಗ ರೂಮರ್‍ ಗಳು ಕೇಳಿಬರುತ್ತಲೇ ಇದೆ.

Most Popular

To Top