ನನ್ನ ಮಗ ಆಕೆಯೊಂದಿಗೆ ಬೇಡ, ನನ್ನ ಆಸ್ತಿಗಾಗಿ ನನ್ನನ್ನು ಕೊಲೆ ಮಾಡೋಕೆ ಸಿದ್ದವಾಗಿದ್ದಳು ಎಂದು ಪತ್ನಿಯ ಬಗ್ಗೆ ಫಿಟಿಷನ್ ಹಾಕಿದ ನರೇಶ್…!

ಕೆಲವು ತಿಂಗಳುಗಳಿಂದ ತೆಲುಗು ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರ ಲೋಕೇಶ್ ಅಫೈರ್‍ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಿದ್ದು, ನೂತನ ವರ್ಷದಂದೇ ನರೇಶ್ ಹಾಗೂ ಪವಿತ್ರಾ ಮದುವೆಯಾಗುವುದಾಗಿ ವಿಡಿಯೋ ಮೂಲಕ ಘೋಷಣೆ ಮಾಡಿದರು.…

ಕೆಲವು ತಿಂಗಳುಗಳಿಂದ ತೆಲುಗು ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರ ಲೋಕೇಶ್ ಅಫೈರ್‍ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಿದ್ದು, ನೂತನ ವರ್ಷದಂದೇ ನರೇಶ್ ಹಾಗೂ ಪವಿತ್ರಾ ಮದುವೆಯಾಗುವುದಾಗಿ ವಿಡಿಯೋ ಮೂಲಕ ಘೋಷಣೆ ಮಾಡಿದರು. ಇನ್ನೂ ಇವರ ಅಫೈರ್‍ ಬಗ್ಗೆ ಸುದ್ದಿ ಹೊರಬಂದಾಗಿನಿಂದ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ನರೇಶ್ ಬಗ್ಗೆ ಅನೇಕ ಆರೋಪಗಳನ್ನು ಮಾಡುತ್ತಿದ್ದರು. ಇದೀಗ ನರೇಶ್ ಸಹ ತನ್ನ ಮೂರನೇ ಪತ್ನಿ ರಮ್ಯಾ ಕುರಿತು ಅನೇಕ ಆರೋಪಗಳನ್ನು ಮಾಡಿ ಕೋರ್ಟ್‌ನಲ್ಲಿ ಫಿಟಿಷನ್ ಹಾಕಿದ್ದಾರೆ ಎನ್ನಲಾಗುತ್ತಿದೆ.

ನರೇಶ್ ತನ್ನ ಮೂರನೇ ಪತ್ನಿ ರಮ್ಯಾ ಕುರಿತು ಅನೇಕ ಆರೋಪಗಳನ್ನು ಮಾಡಿದ್ದಾರೆ. ರಮ್ಯ ರಘುಪತಿ ನನ್ನನ್ನು ಆಸ್ತಿಗಾಗಿ ಸಾಯಿಸೋಕೆ ಸಿದ್ದರಾಗಿದ್ದರು. ಆಕೆಯೊಂದಿಗೆ ನನ್ನ ಮಗ ಇದ್ದರೇ ಆತನ ಭವಿಷ್ಯ ಸಹ ನಾಶವಾಗುತ್ತದೆ ಎಂದು ಆರೋಪಿಸಿದ್ದಾರೆ. ನನ್ನ ಮಗನ ವಿದ್ಯಾಭ್ಯಾಸಕ್ಕಾಗಿ ನಾನು ನಾಲ್ಕು ಲಕ್ಷ ಖರ್ಚು ಮಾಡುತ್ತಿದ್ದೇನೆ.  ಮಗನಿಗೆ ಗಾರ್ಡಿಯನ್ ಆಗಿ ನನಗೆ ಅವಕಾಶ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರಂತೆ ನರೇಶ್. ಇನ್ನೂ ಈಗಾಗಲೇ ಆಸ್ತಿಗಾಗಿ ರಮ್ಯ ನನ್ನನ್ನು ಸಾಯಿಸೋಕೆ ಪ್ರಯತ್ನ ಮಾಡಿದ್ದಾರೆ. ರಮ್ಯ, ರೋಹಿತ್ ಶೆಟ್ಟಿ ಎಂಬುವವರಿಂದ ನನಗೆ ಪ್ರಾಣಹಾನಿ ಇದೆ. ಕಳೆದ 2022 ರ ಏಪ್ರಿಲ್ ಮಾಹೆಯಲ್ಲಿ ನನ್ನ ಮನೆಗೆ ಕೆಲವು ಬಂದು ಧಾಳಿ ಮಾಡಿದ್ದರು, ಈ ಕುರಿತು ಪೊಲೀಸರಿಗೆ ದೂರು ಸಹ ನೀಡಲಾಗಿತ್ತು ಎಂದು ಸಂಚಲನಾತ್ಮಕ ಆರೋಪಗಳನ್ನು ಸಹ ಮಾಡಿದ್ದಾರೆ.

ಅಷ್ಟೇಅಲ್ಲದೇ ನಾನು ರಮ್ಯಾ ಕಾರಣದಿಂದ ತುಂಬಾ ನರಕಯಾತನೆಯನ್ನು ಅನುಭವಿಸಿದ್ದೇನೆ. ನನ್ನನ್ನು ಸಾಯಿಸುತ್ತಾರೆ ಎಂಬ ಭಯದಿಂದ ನಾನು ಒಂಟಿಯಾಗಿ ಎಲ್ಲೀಗೂ ಹೋಗುತ್ತಿರಲಿಲ್ಲ. ನನ್ನ ಪೋನ್ ಸಹ ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಹ್ಯಾಕ್ ಸಹ ಮಾಡಿದ್ದಾಳೆ. ನನ್ನ ಪೋನ್ ಹ್ಯಾಕ್ ಮಾಡಿ ನನ್ನ ವೈಯುಕ್ತಿಕ ಸಂದೇಶಗಳನ್ನು ನೋಡುತ್ತಿದ್ದರು. ರಮ್ಯ ನೀಡುವ ಹಿಂಸೆಯನ್ನು ತಾಳಲು ಆಗುತ್ತಿಲ್ಲ. ನನಗೆ ವಿಚ್ಚೇದನ ಕೊಡಿಸಿ ಎಂದು ಕೋರ್ಟಿನ್ನು ಆಶ್ರಯಿಸಿದ್ದಾರಂತೆ. ಇನ್ನೂ ಈ ಹಿಂದೆ ರಮ್ಯಾ ಸಹ ನರೇಶ್ ವಿರುದ್ದ ಅನೇಕ ಆರೋಪಗಳನ್ನು ಮಾಡಿದ್ದರು. ಇದೀಗ ನರೇಶ್ ಸಹ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಇನ್ನೂ ಕಳೆದ 2010 ಮಾರ್ಚ್ ಮಾಹೆಯಲ್ಲಿ ರಮ್ಯಾ ಹಾಗೂ ನರೇಶ್ ಮದುವೆ ನಡೆದಿದೆ. ಮದುವೆಯ ಸಮಯದಲ್ಲಿ ಯಾವುದೇ ರೀತಿಯ ವರದಕ್ಷಿಣೆಯನ್ನು ಸಹ ಪಡೆದುಕೊಂಡಿರಲಿಲ್ಲವಂತೆ. ಜೊತೆಗೆ ರಮ್ಯಾಗೆ ಮೂವತ್ತು ಲಕ್ಷದ ಬೆಲೆಬಾಳುವ ಬಂಗಾರದ ಆಭರಣಗಳನ್ನು ಸಹ ನೀಡಲಾಗಿತ್ತಂತೆ. ಮದುವೆಯಾದ ಕೆಲವೇ ದಿನಗಳಲ್ಲಿ ನನಗೆ ರಮ್ಯಾ ಹಿಂಸೆ ನೀಡಲು ಶುರು ಮಾಡಿದ್ದರು ಎಂದು ನರೇಶ್ ಆರೋಪಿಸಿದ್ದಾರೆ. ಇನ್ನೂ ಶೀಘ್ರದಲ್ಲೇ ನರೇಶ್ ಹಾಗೂ ಪವಿತ್ರಾ ಮದುವೆಯಾಗುವುದಾಗಿ ಘೋಷಣೆ ಮಾಡಿದ್ದು, ಈ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.