Film News

ನಂದಮೂರಿ ತಾರಕರತ್ನ ರವರಿಗೆಗೆ ಹೃದಯಾಘಾತ, ಐಸಿಯುನಲ್ಲಿ ಚಿಕಿತ್ಸೆ, ಆರೋಗ್ಯದ ಬಗ್ಗೆ ಬಾಲಯ್ಯ, ಎನ್.ಟಿ.ಆರ್ ವಿವರಣೆ..!

ತೆಲುಗು ಸಿನರಿಂಗದ ನಂದಮೂರಿ ಕುಟುಂಬದ ನಟ ತಾರಕರತ್ನ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಲೋಕೇಶ್ ಪಾದಯಾತ್ರೆ ನಡೆಯುತ್ತಿದ್ದಾಗ  ಈ ಘಟನೆ ಸಂಭವಿಸಿದೆ. ತಾರಕರತ್ನ ರವರಿಗೆ ಹೃದಯಾಘಾತ ಆಗಿದ್ದು, ಅವರನ್ನು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಆತನಿಗೆ ಕಾರ್ಡಿಯಕ್ ಅರೆಸ್ಟ್ ಆದ ಕಾರಣದಿಂದ ಕೊಂಚ ಅಪಾಯವಿದೆ. 24 ಗಂಟೆಗಳು ಕಳೆಯುವುದರ ವರೆಗೂ ಏನು ಹೇಳಲು ಸಾಧ್ಯವಿಲ್ಲ ಎಂದು ಕೆಲ ವೈದ್ಯರು ತಿಳಿಸುತ್ತಿದ್ದಾರೆ. ಇನ್ನೂ ಈ ಬಗ್ಗೆ ಜೂನಿಯರ್‍ ಎನ್.ಟಿ.ಆರ್‍  ಹಾಗೂ ಬಾಲಕೃಷ್ಣ ರವರು ಸಹ ತಾರಕರತ್ನ ರವರ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದಾರೆ.

ಆಂಧ್ರದ ತೆಲುಗುದೇಶಂ ಪಾರ್ಟಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಪಾದಯಾತ್ರೆ ಶುರು ಮಾಡಿದ್ದಾರೆ. ಈ ಯಾತ್ರೆ ಕುಪ್ಪಂ ನಲ್ಲಿ ಆರಂಭವಾಗಿದ್ದು, ಈ ವೇಳೆ ನಂದಮೂರಿ ಕುಟುಂಬದ ಅನೇಕರು ಭಾಗಿಯಾಗಿದ್ದರು. ಈ ಯಾತ್ರೆಯಲ್ಲಿ ತಾರಕರತ್ನ ಸಹ ಭಾಗಿಯಾಗಿದ್ದರು. ಈ ವೇಳೆ ದಿಢೀರ್‍ ನೇ ತಾರಕರತ್ನ ಕುಸಿದು ಬಿದ್ದಿದ್ದಾರೆ.  ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಗೆ ಹೋಗುವ ಸಮಯದಲ್ಲೇ ತಾರಕರತ್ನಗೆ ಪಲ್ಸ್ ಇರಲಿಲ್ಲವಂತೆ. ದೇಹ ನೀಲಿ ಬಣ್ಣಕ್ಕೆ ತಿರುಗಿತ್ತಂತೆ. ಕೂಡಲೇ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು 45 ನಿಮಿಷಗಳ ಬಳಿಕ ಹೃದಯ ಬಡಿತ ಶುರುವಾಗಿತ್ತಂತೆ. ಮೊದಲಿಗೆ ಆತನ ಸ್ಥಿತಿ ನೋಡಿ ಎಲ್ಲರೂ ತುಂಬಾನೆ ಗಾಬರಿಯಾಗಿದ್ದರಂತೆ. ಆದರೆ ವೈದ್ಯರು ಆತನ ಹೃದಯ ಕೆಲಸ ಮಾಡುವಂತೆ ಮಾಡಿದ್ದಾರೆ. ಸದ್ಯ ಐಸಿಯುನಲ್ಲಿ ತಾರಕರತ್ನ ರವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಪಾದಯಾತ್ರೆ ಆರಂಭವಾಗುತ್ತಿದ್ದಂತೆ ತಾರಕರತ್ನ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ಆದರೆ ಅದನ್ನು ಆತ ಅಷ್ಟೊಂದು ಹಿಡಿಸಿಕೊಂಡಿರಲಿಲ್ಲವಂತೆ. ಬಳಿಕ ನೋವು ಹೆಚ್ಚಾಗುತ್ತಾ ಹೃದಯಘಾತ ಸಂಭವಿಸಿದೆ. ಈ ವೇಳೆ ಒಂದೇ ಸಮನೆ ಅವರು ಕುಸಿದು ಬಿದ್ದಿದ್ದಾರೆ.  ಇನ್ನೂ ಅವರ ಆರೋಗ್ಯದ ಬಗ್ಗೆ ವೈದ್ಯರು ಹೇಳುವ ಪ್ರಕಾರ ಎದೆಯಲ್ಲಿ ನೋವು ಬಂದ ಕೂಡಲೇ ಅವರು ಚಿಕಿತ್ಸೆ ಪಡೆದುಕೊಂಡಿದ್ದರೇ ಈ ರೀತಿಯಲ್ಲಿ ಆಗುತ್ತಿರಲಿಲ್ಲ. ಆತ ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣದಿಂದ ಕಾರ್ಡಿಯಕ್ ಅರೆಸ್ಟ್ ವರೆಗೂ ಹೋಗಿದೆ ಎನ್ನಬಹುದಾಗಿದೆ. ಜೊತೆಗೆ 45 ನಿಮಿಷಗಳ ಬಳಿಕ ಪಲ್ಸ್ ಬಂದಿದ್ದು ದೊಡ್ಡ ವಿಚಾರ ಎನ್ನಲಾಗುತ್ತಿದೆ. ಇನ್ನೂ 24 ಗಂಟೆಗಳು ಕಳೆಯುವ ವರೆಗೂ ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೂ ಆತ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನೂ ತಾರಕರತ್ನ ಆರೋಗ್ಯದ ಬಗ್ಗೆ ನಂದಮೂರಿ ಕುಟುಂಬಸ್ಥರು ಹಾಗೂ ರಾಜಕೀಯ ನಾಯಕರೂ ಸಹ ವಿಚಾರಣೆ ನಡೆಸುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಈ ವಿಚಾರವನ್ನು ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾಹಿತಿ ಪಡೆದುಕೊಂಡಿದ್ದಾರೆ. ತಾರಕರತ್ನ ರವರಿಗೆ ಚಿಕಿತ್ಸೆ ನಿಡುತ್ತಿದ್ದು, ಅವಶ್ಯಕತೆ ಬಿದ್ದರೇ ತಾರಕರತ್ನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತದೆ. ಸದ್ಯ ಆತನ ಆರೋಗ್ಯದ ಬಗ್ಗೆ ಯಾರು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಎಲ್ಲರೂ ಧೈರ್ಯವಾಗಿ ಇರಿ ಎಂದು ಕುಟುಂಬಸ್ಥರಿಗೂ ಹಾಗೂ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

Most Popular

To Top