ಶಾಕ್ ಆಗುವಂತೆ ತಮ್ಮ ಮದುವೆ ದಿನಾಂಕ ಘೋಷಿಸಿದ ಜೋಡಿ, ಲಿಪ್ ಕಿಸ್ ವಿಡಿಯೋ ಮೂಲಕ ಪವಿತ್ರಾ-ನರೇಶ್ ಮದುವೆ ಡೇಟ್ ಫಿಕ್ಸ್…!

Follow Us :

ಕಳೆದ ವರ್ಷದಲ್ಲಿ (2022) ತೆಲುಗು ಸಿನಿರಂಗದಲ್ಲಿ ತುಂಬಾನೆ ಸದ್ದು ಮಾಡಿದ ವಿಚಾರವೆಂದರೇ ಅದು ಪೋಷಕ ನಟಿ ಪವಿತ್ರ ಹಾಗೂ ನಟ ನರೇಶ್ ರವರ ಬಗೆಗಿನ ಸಂಬಂಧದ ಸುದ್ದಿ. ಸದ್ಯ ಈ ಜೋಡಿ ಸಹಜೀವನ ನಡೆಸುತ್ತಿದ್ದು, ಅವರ ಬಗ್ಗೆ ಅನೇಕ ರೂಮರ್‍ ಗಳು, ಕಥನಗಳು ಕೇಳಿಬರುತ್ತಲೇ ಇತ್ತು. ಜೊತೆಗೆ ಸೂಪರ್‍ ಸ್ಟಾರ್‍ ಕೃಷ್ಣ ಮರಣದ ಸಮಯದಲ್ಲೂ ಸಹ ಪವಿತ್ರಾ ಭಾಗಿಯಾಗಿದ್ದರು. ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಈ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಅದರಲ್ಲೂ ಈ ವಿಡಿಯೋದಲ್ಲಿ ಲಿಪ್ ಕಿಸ್ ಮಾಡುವ ಮೂಲಕ ಮದುವೆಯ ಬಗ್ಗೆ ತಿಳಿಸಿದ್ದು, ಈ ವಿಡಿಯೋ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಈ ಹಿಂದೆ ತೆಲುಗು ನಟ ನರೇಶ್ ಹಾಗೂ ಆತನ ಪತ್ನಿರಮ್ಯಾರಘುಪತಿ ನಡುವೆ ಕೌಟುಂಬಿಕ ಕಲಹ ಬೀದಿಗೆ  ಬಂದಿತ್ತು.  ಈ ಕಲಹಕ್ಕೆ ನೇರ ಕಾರಣ ಪವಿತ್ರಾ ಲೋಕೇಶ್ ಕಾರಣ ಎಂದು ನರೇಶ್ ಪತಿ ರಮ್ಯಾ ಆರೋಪಿಸಿದ್ದರು. ಜೊತೆಗೆ ನರೇಶ್ ಹಾಗೂ ಪವಿತ್ರಾ ರಹಸ್ಯವಾಗಿ ಮದುವೆಯಾಗಿದ್ದು, ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನರೇಶ್ ಹಾಗೂ ಪವಿತ್ರಾ ಇದ್ದರು. ರಮ್ಯಾ ಗೆ ರೆಡ್ ಹ್ಯಾಂಡ್ ಆಗಿ ಸಹ ಇವರು ಸಿಕ್ಕಿಬಿದ್ದಿದ್ದರು. ಈ ಸುದ್ದಿ ಮಾದ್ಯಮಗಳಲ್ಲೂ ಸಹ ಪ್ರಸಾರವಾಗಿತ್ತು.  ಬಳಿಕ ನಟಿ ಪವಿತ್ರಾ ಸಹ ರಮ್ಯಾ ನೀಡಿರುವ ಹೇಳಿಕೆಗಳೆಲ್ಲಾ ಸುಳ್ಳು ಎಂದು ಹೇಳಿದ್ದರು. ಸುಮಾರು ವರ್ಷಗಳಿಂದ ನಾನು ನರೇಶ್ ಪರಿಚಯಸ್ಥರು ಹಾಗೂ ಸ್ನೇಹಿತರು. ಒಂದು ಗಂಡು ಹೆಣ್ಣು ಒಟ್ಟಾಗಿ ಓಡಾಡಿದರೇ ಮದುವೆ ಎನ್ನಲು ಹೇಗೆ ಸಾಧ್ಯ. ಅನಗತ್ಯ ಆರೋಪಗಳನ್ನು ನನ್ನ ವಿರುದ್ದ ಮಾಡುತ್ತಿದ್ದಾರೆ. ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಸಂಬಂಧ ಮಾತ್ರ. ತೆಲುಗಿನಲ್ಲಿ ಅನೇಕ ನಟರೊಂದಿಗೆ ಕೆಲಸ ಮಾಡಿದ್ದೇನೆ. ನರೇಶ್ ಜೊತೆಗೂ ಮಾಡಿದ್ದೇನೆ. ಈ ಮಾತ್ರಕ್ಕೆ ನಾನು ಅವರನ್ನೆಲ್ಲಾ ಕಟ್ಟಿಕೊಳ್ಳಲು ಆಗುತ್ತಾ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದರು.

ಆದರೆ ಇದೀಗ ಪವಿತ್ರ ಹಾಗೂ ನರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಮದುವೆಯ ಮೂಲಕ ಅವರಿಬ್ಬರ ನಡುವಣ ಸಂಬಂಧವನ್ನು ಅಧಿಕೃತ ಗೊಳಿಸಲಿದ್ದಾರೆ. ಇನ್ನೂ ಈ ವಿಚಾರವನ್ನು ಸ್ವತಃ ನರೇಶ್ ರವರೇ ಸೋಷಿಯಲ್ ಮಿಡಿಯಾದಲ್ಲಿ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಶೇರ್‍ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ. ಇನ್ನೂ ಈ ವಿಡಿಯೋದಲ್ಲಿ ಪವಿತ್ರ ಹಾಗೂ ಲೋಕೇಶ್ ಇಬ್ಬರೂ ಇದ್ದಾರೆ. ಕೇಕ್ ಕತ್ತಿರಿಸಿ ಒಬ್ಬರಿಗೊಬ್ಬರು ತಿನ್ನಿಸಿಕೊಂಡಿದ್ದಾರೆ. ಅದು ಸಾಲದು ಎಂಬಂತೆ  ಲಿಪ್ ಕಿಸ್ ಸಹ ಮಾಡಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ #PavitraNaresh ಎಂಬ ಹ್ಯಾಷ್ ಟ್ಯಾಗ್ ಸಹ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ನರೇಶ್ ಪತ್ನಿ ರಮ್ಯಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ 2023 ರಲ್ಲಿ ನರೇಶ್ ಹಾಗೂ ಪವಿತ್ರ ಸಪ್ತಪದಿ ತುಳಿಯುವುದು ಪಕ್ಕಾ ಎನ್ನಲಾಗಿದ್ದು, ಡೇಟ್ ಹಾಗೂ ಪ್ಲೇಸ್ ಶೀಘ್ರದಲ್ಲೇ ರಿವೀಲ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.