ಮತ್ತೊಮ್ಮೆ ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ ಕಲ್ಯಾಣ್ ದೇವ್, ಮಾಡಿದ ತಪ್ಪುಗಳಿಂದ ಅದನ್ನು ಕಲಿತೆ ಎಂದ ಕಲ್ಯಾಣ್ ದೇವ್….!

Follow Us :

ಟಾಲಿವುಡ್ ಮೆಗಸ್ಟಾರ್‍ ಚಿರಂಜೀವಿ ಕಿರಿಯ ಮಗಳು ಶ್ರೀಜಾ ಈ ಹಿಂದೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಬಳಿಕ ನಟ ಕಲ್ಯಾಣ್ ದೇವ್ ಎಂಬಾತನೊಂದಿಗೆ ಶ್ರೀಜಾ ಮದುವೆ ನಡೆದಿತ್ತು. ಆದರೆ ಸುಮಾರು ದಿನಗಳಿಂದ ಅವರಿಬ್ಬರು ಬೇರೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಶ್ರೀಜಾ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಗಳಿಂದ ಕಲ್ಯಾಣ್ ದೇವ್ ಹೆಸರನ್ನು ತೊಲಗಿಸಿದ್ದರು. ಆ ಕಾರಣದಿಂದ ಅವರಿಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಗೆ ಮತಷ್ಟು ಬಲ ಬಂದಿದೆ.

ಇನ್ನೂ ಕಲ್ಯಾಣ್ ದೇವ್ ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕಲ್ಯಾಣ್ ದೇವ್ ತನ್ನ ಮಗಳನ್ನು ನೆನೆದು ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದರು. ಶ್ರೀಜಾಗೆ ಇಬ್ಬರು ಹೆಣ್ಣು ಮಕ್ಕಳು. ಚಿಕ್ಕಮಗಳು ಶ್ರೀಜಾ ಹಾಗೂ ಕಲ್ಯಾಣ್ ದೇವ್ ಗೆ ಹುಟ್ಟಿದ ಮಗಳು. ನವಿಷ್ಕಾ ಎಂದು ಆಕೆಗೆ ನಾಮಕರಣ ಸಹ ಮಾಡಲಾಗಿದೆ. ಐದು ವರ್ಷದ ನವಿಷ್ಕಾ ಸದ್ಯ ತಾಯಿ ಶ್ರೀಜಾ ಜೊತೆಯಲ್ಲೇ ಇದ್ದಾಳೆ. ಆದರೆ ಆಗಾಗ ಕಲ್ಯಾಣ್ ದೇವ್ ನವಿಷ್ಕ ಳನ್ನು ಭೇಟಿಯಾಗುತ್ತಿರುತ್ತಾರೆ. ಕಳೆದ ಡಿ.25 ರಂದು ನವಿಷ್ಕ ಹುಟ್ಟುಹಬ್ಬದಂದು ಕಲ್ಯಾಣ್ ದೇವ್ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮಗಳಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುವುದರ ಜೊತೆಗೆ ಎಮೋಷನಲ್ ಪೋಸ್ಟ್ ಸಹ ಹಂಚಿಕೊಂಡಿದ್ದರು. ನಿನ್ನನ್ನು ತುಂಬಾ ಮಿಸ್ ಆಗುತ್ತಿದ್ದೇನೆ. ನಿನ್ನ ನೋಡಿ ತುಂಬಾ ದಿನಗಳಾಗಿದೆ ಎಂದು ಎಮೋಷನಲ್ ಆಗಿದ್ದರು. ಇದರ ಜೊತೆಗೆ ನವಿಷ್ಕಾ ಜೊತೆಗಿನ ಕೆಲವೊಂದು ಪೊಟೋಗಳನ್ನೂ ಸಹ ಕಲ್ಯಾಣ್ ದೇವ್ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ನಟ ಕಲ್ಯಾಣ್ ದೇವ್ ತನ್ನ ಸೋಷಿಯಲ್ ಮಿಡಿಯಾದಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 2022 ವರ್ಷದ ಕೊನೆಯ ದಿನದಂದು ಕಲ್ಯಾಣ್ ದೇವ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 2022 ವರ್ಷ ನನಗೆ ತುಂಬಾನೆ ಕಲಿಸಿದೆ. ಈ ವರ್ಷ ನನ್ನ ಅಭಿವೃದ್ದಿಗೆ ಅನೇಕ ಅವಕಾಶಗಳನ್ನು ನೀಡಿದೆ. ಜೊತೆಗೆ ಸಹನೆಯಿಂದ ಹೇಗೆ ಜೀವಿಸಬೇಕೆಂದು ಕಲಿತಿದ್ದೇನೆ. ಅವಕಾಶಗಳು ಪಡೆದುಕೊಂಡೆ, ಅನೇಕ ರಿಸ್ಕ್ ಗಳನ್ನು ಎದುರಿಸಿದೆ. ನನ್ನ ತಪ್ಪುಗಳಿಂದ ನಾನು ತುಂಬಾನೆ ಕಲಿತಿದ್ದೇನೆ. ಬೇರೆಯವರ ತಪ್ಪುಗಳನ್ನು ಕ್ಷಮಿಸುವುದನ್ನು ಅಳವಡಿಸಿಕೊಂಡೆ. ಎಂತಹುದೇ ಪರಿಸ್ಥಿತಿಗಳು ಬಂದರೂ ನನ್ನ ಪ್ರಯತ್ನಗಳನ್ನು ನಿಲ್ಲಿಸುವುದಿಲ್ಲ. ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಷಯಗಳು ಎಂದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನಲ್ಲಿ ಕಲ್ಯಾಣ್ ದೇವ್ ಶ್ರೀಜಾ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಇನ್ನೂ ಕಲ್ಯಾಣ್ ದೇವ್ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಲ್ಯಾಣ್ ದೇವ್ ಹಾಗೂ ಅವಿಕಾ ಗೌರ್‍ ಜೊತೆಗೆ ಸಿನೆಮಾ ಒಂದನ್ನು ಮಾಡುತ್ತಿದ್ದಾರೆ. ಇದೀಗ ಕಲ್ಯಾಣ್ ದೇವ್ ಹೊಸ ಪೋಸ್ಟ್ ಗೆ ಅವಿಕಾ ರಿಪ್ಲೇ ಕೊಟ್ಟಿದ್ದಾರೆ. ಹಗ್ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಕಲ್ಯಾಣ್ ದೇವ್ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.