Film News

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಸ್ಟೈಲಿಷ್ ಲುಕ್ಸ್, ರೊಮ್ಯಾಂಟಿಕ್ ಸೆಲ್ಫಿ ವೈರಲ್….!

ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಹಾಗೂ ಅಲ್ಲು ಸ್ನೇಹಾ ಆಗಾಗ ವಿದೇಶಗಳನ್ನು ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಲ್ಲು ಸ್ನೇಹಾ, ಆಗಾಗ ಕೆಲವೊಂದು ಪೊಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪತಿ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರವರ ರೊಮ್ಯಾಂಟಿಕ್ ಸೆಲ್ಫಿಯೊಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೊಟೋದಲ್ಲಿ ಸ್ನೇಹಾ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ನಟ ಅಲ್ಲು ಅರ್ಜುನ್ ರವರಂತೆ ಆತನ ಪತ್ನಿ ಸ್ನೇಹ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆಯನ್ನು ಫ್ಯಾಷನ್ ಐಕಾನ್ ಎಂದೂ ಸಹ ಕರೆಯಲಾಗುತ್ತದೆ. ಸ್ನೇಹಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅನೇಕ ಪೋಸ್ಟ್ ಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಆಗಾಗ ಆಕೆ ಕೆಲವೊಂದು ಗ್ಲಾಮರಸ್ ಪೊಟೋಗಳನ್ನು ಸಹ ಹಂಚಿಕೊಂಡು ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸ್ನೇಹ ಅಲ್ಲು ಅರ್ಜುನ್, ಮಕ್ಕಳ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಸಮಯ ಸಿಕ್ಕರೇ ಸಾಕು ಅಲ್ಲು ಅರ್ಜುನ್ ತನ್ನ ಕುಟುಂಬದೊಂದಿಗೆ ವೆಕೇಷನ್ ಗೆ ಹಾರುತ್ತಿರುತ್ತಾರೆ.

ಅಲ್ಲು ಅರ್ಜುನ್ ಹಾಗೂ ಸ್ನೇಹಾ ವೆಡ್ಡಿಂಗ್ ಸೆಲೆಬ್ರೇಷನ್ ಗೆ ಸಂಬಂಧಿಸಿದಂತೆ ಕೆಲವೊಂದು ಪೊಟೋಗಳು ವೈರಲ್ ಆಗುತ್ತಿರುತ್ತಿವೆ.  ಸ್ನೇಹಾ ಈ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನವಾದ ಟ್ರೆಂಡಿ ವೇರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಬುತವಾದ ಲೆಹಾಂಗಾ ಧರಿಸಿ ಅಲ್ಲು ಅರ್ಜುನ್ ಜೊತೆಗೆ ಕ್ಯೂಟ್ ಅಂಡ್ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಸ್ನೇಹಾ ಜೊತೆಗೆ ಅವರ ಸ್ನೇಹಿತರೂ ಸಹ ಈ ಸೆಲೆಬ್ರೇಷನ್ ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೊಮ್ಯಾಂಟಿಕ್ ಪೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಈ ಪೊಟೋಗಳಲ್ಲಿ ಸ್ನೇಹಾ ತುಂಬಾನೆ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳನ್ನು ನೋಡಿದ ಪ್ರತಿಯೊಬ್ಬರೂ ಸ್ನೇಹಾ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ಇನ್ನೂ ಸ್ನೇಹಾ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ಸ್ಟಾರ್‍ ನಟಿಯರನ್ನೂ ಸಹ ಮೀರಿಸುವಂತಹ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಸಹ ಸ್ಟಾರ್‍ ನಟಿಯರಂತೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುವ ಪೊಟೊಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಇನ್ನೂ ಆಕೆ ಶೀಘ್ರದಲ್ಲೇ ಸಿನೆಮಾಗಳಲ್ಲೂ ಸಹ ನಟಿಸಲಿದ್ದಾರೆ ಎಂಬ ರೂಮರ್‍ ಸಹ ಹರಿದಾಡುತ್ತಿದೆ.

Most Popular

To Top