Film News

ಮನೋಜ್ ಮೇಲೆ ವಿಷ್ಣು ದಾಳಿ, ಮನೋಜ್ ಮದುವೆಗಾಗಿ ಈ ಜಗಳ ನಡೀತಾ? ಮೋಹನ್ ಬಾಬು ವಾರ್ನಿಂಗ್….!

ಟಾಲಿವುಡ್ ದೊಡ್ಡ ಕುಟುಂಬಗಳಲ್ಲಿ ಮಂಚು ಕುಟುಂಬ ಸಹ ಒಂದಾಗಿದೆ. ಸೀನಿಯರ್‍ ನಟ ಮೋಹನ್ ಬಾಬು ರವರ ಪುತ್ರರಾದ ಮಂಚು ವಿಷ್ಣು ಹಾಗೂ ಮಂಚು ಮನೋಜ್ ರವರ ನಡುವೆ ಎಲ್ಲಾ ಸರಿಯಿಲ್ಲ ಎಂಬ ರೂಮರ್‍ ಗಳು ಕೇಳಿಬರುತ್ತಿವೆ. ಇದೀಗ ಆ ವಿವಾದಗಳು ಹೆಚ್ಚಾಗಿ ಮಂಚು ವಿಷ್ಣು, ಮನೋಜ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು, ಈ ವಿಡಿಯೋಗೆ ಸಂಬಂಧಿಸಿದಂತೆ ಮೋಹನ್ ಬಾಬು ಸಹ ವಾರ್ನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ತೆಲುಗು ಸಿನಿರಂಗದ ಸ್ಟಾರ್‍ ನಟ ಮೋಹನ್ ಬಾಬು ತೆಲುಗು ಸಿನಿರಂಗದಲ್ಲಿ ಒಳ್ಳೆಯ ಗೌರವ ಹೊಂದಿದ್ದಾರೆ. ಇದೀಗ ಅವರ ಪುತ್ರರಾದ ಮಂಚು ವಿಷ್ಣು ಹಾಗೂ ಮನೋಜ್ ನಡುವೆ ವಿಬೇದಗಳ ಉಂಟಾಗಿ ಒಡೆದುಕೊಳ್ಳುವ ಸ್ಥಿತಿಗೆ ಬಂದಿದ್ದರು. ಅನೇಕ ಬಾರಿ ಅವರ ನಡುವಣ ವಿಬೇದಗಳ ಬಗ್ಗೆ ಕೆಲವೊಂದು ಸನ್ನಿವೇಶಗಳೂ ಸಹ ಉದಾಹರಣೆಯಾಗಿತ್ತು. ಇದೀಗ ಮತ್ತೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಂಚು ವಿಷ್ಣು ತನ್ನ ತಮ್ಮ ಮನೋಜ್ ಮೇಲೆ ದಾಳಿ ಮಾಡಿದ್ದಾರೆ. ಧಾಳಿ ಮಾಡಿ ಸ್ಟ್ರಾಂಗ್ ವಾರ್ನ್ ಕೊಟ್ಟಿದ್ದಾರೆ. ಅವರಿಬ್ಬರ ನಡುವೆ ದೊಡ್ಡ ಮಟ್ಟದಲ್ಲೇ ಗಲಾಟೆಯಾಗಿದೆ. ವಿಷ್ಣು ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದಾಗ ಮನೋಜ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಮಂಚು ವಿಷ್ಣು ಸ್ಟ್ರಾಂಗ್ ವಾರ್ನ್ ಕೊಡುತ್ತಿದ್ದರೇ, ಈ ರೀತಿಯಾಗಿ ನಮ್ಮ ಮನೆಗಳಲ್ಲಿ ಬಂದು, ಸಂಬಂಧಿಕರನ್ನು ಹೊಡೆಯುತ್ತಿದ್ದಾರೆ ಇದು ಸರಿಯಲ್ಲ ಎಂದು ಮನೋಜ್ ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ  ಸಖತ್ ವೈರಲ್ ಆಗಿದೆ. ಇನ್ನೂ ಮನೋಜ್ ಮೋನಿಕಾ ಮದುವೆಯಲ್ಲೂ ಸಹ ವಿಷ್ಣು ಅಷ್ಟೊಂದು ಕಾಣಿಸಿಕೊಂಡಿರಲಿಲ್ಲ. ಇನ್ನೂ ಮನೋಜ್ ಈ ಬಗ್ಗೆ ಪೊಲೀಸರಿಗೂ ಸಹ ದೂರು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ವಿಡಿಯೋ ಮಂಚು ಮನೋಜ್ ರವರೇ ಈ ವಿಡಿಯೋ ಪೋಸ್ಟ್ ಮಾಡಿದ್ದು, ಹಾಟ್ ಟಾಪಿಕ್ ಆಗಿದೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಕುರಿತು ಮೋಹನ್ ಬಾಬು ಸಹ ಕೋಪಗೊಂಡಿದ್ದಾರೆ. ಇಬ್ಬರಿಗೂ ವಾರ್ನ್ ಸಹ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಣ್ಣ ತಮ್ಮ ಈ ಜಗಳಕ್ಕೆ ಮೋಹನ್ ಬಾಬು ರಿಯಾಕ್ಟ್ ಆಗಿದ್ದಾರಂತೆ. ನಿನ್ನೆ ರಾತ್ರಿ ಗಲಾಟೆ ಆಗಿದ್ದರೇ, ಒಂದು ಬೆಳಿಗ್ಗೆ ಮಂಚು ಮನೋಜ್ ವಿಡಿಯೋ ತನ್ನ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಮೋಹನ್ ಬಾಬು ಪೋನ್ ಮಾಡಿ ಇಬ್ಬರಿಗೂ ವಾರ್ನಿಂಗ್ ಕೊಟ್ಟಿದ್ದಾರಂತೆ. ಮನೆಯ ವಿವಾದವನ್ನು ಸೋಷಿಯಲ್ ಮಿಡಿಯಾದಲ್ಲಿ ಹೇಳಿಕೊಳ್ಳುವುದು ಸರಿಯಲ್ಲ ಎಂದು ಬುದ್ದಿ ಹೇಳಿದ್ದಾರಂತೆ. ಇದಾದ ಬಳಿಕ ಕೆಲವೇ ಗಂಟೆಗಳಲ್ಲಿ ಮನೋಜ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಮಂಷು ವಿಷ್ಣು ಸಹ ರಿಯಾಕ್ಟ್ ಆಗಿದ್ದು, ಮನೋಜ್ ಚಿಕ್ಕ ಹುಡುಗ ಆ ರೀತಿಯಲ್ಲಿ ಮಾಡಿದ್ದಾರೆ. ಇದು ನಮ್ಮ ನಡುವೆ ನಡೆದ ಸಾಮಾನ್ಯ ಗಲಾಟೆ. ಮನೋಜ್ ಕೋಪದಲ್ಲಿ ವಿಡಿಯೋ ಶೇರ್‍ ಮಾಡಿದ್ದಾರೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

Most Popular

To Top