Film News

ದುಬಾರಿ ಬೆಲೆಯ ಮನೆ ಖರೀದಿಸಿದ ಸ್ಟಾರ್ ನಟಿ ತ್ರಿಷಾ, ಬೆಲೆ ಕೇಳಿದರೇ ಶಾಕ್ ಆಗ್ತೀರಾ?

ಸುಮಾರು ಎರಡು ದಶಕಗಳ ಕಾಲದಿಂದ ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಜರ್ನಿ ಸಾಗಿಸುತ್ತಿರುವ ನಟಿ ತ್ರಿಷಾ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜ್ ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ತೆರಕಂಡ ಪೊನ್ನಿಯನ್ ಸೆಲ್ವನ್-1 ಸಿನೆಮಾದ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು ಎನ್ನಲಾಗಿದ್ದು, ಆಕೆ ಸಂಭಾವನೆಯನ್ನೂ ಸಹ ಏರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆಕೆ ದುಬಾರಿ ಬೆಲೆಯ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು. ಬರೊಬ್ಬರಿ 35 ಕೋಟಿ ಬೆಲೆಯ ಮನೆಯೊಂದನ್ನು ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಟಿ ತ್ರೀಷಾ ಪೊನ್ನಿಯನ್ ಸೆಲ್ವನ್ ಸಿನೆಮಾದ ಸಕ್ಸಸ್ ಬಳಿಕ ಮತಷ್ಟು ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆಕೆಯ ಸಿನಿ ಕೆರಿಯರ್‍ ಬಗ್ಗೆ ಅವಲೋಕಿಸಿದರೇ ಪೊನ್ನಿಯನ್ ಸೆಲ್ವನ್ ಸಿನೆಮಾ ಬಿಡುಗಡೆಗೂ ಮುನ್ನಾ ಬಿಡುಗಡೆಯಾದ ಬಳಿಕ ಆಕೆಯ ಕ್ರೇಜ್ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ನಲವತ್ತರ ವಯಸ್ಸಿನಲ್ಲಿ ತ್ರಿಷಾಗೆ ನಿರ್ದೇಶಕ ಮಣಿರತ್ಮಂ ಲಕ್ಕಿ ಚಾನ್ಸ್ ನೀಡಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನೆಮಾದಲ್ಲಿ ಕುಂದವೈ ಎಂಬ ಪಾತ್ರದಲ್ಲಿ ತ್ರಿಷಾ ನಟಿಸಿದ್ದು, ಆಕೆ ಈ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ ಎಂಬ ಪ್ರಶಂಸೆಗೂ ಸಹ ಪಾತ್ರರಾಗಿದ್ದಾರೆ. ಇದೀಗ ಪೊನ್ನಿಯನ್ ಸೆಲ್ವನ್ -2 ಸಿನೆಮಾ ಸಹ ಸೆಟ್ಟೇರಿದ್ದು, ಈ ಸಿನೆಮಾದ ಬಳಿಕ ತ್ರಿಷಾ ಖ್ಯಾತಿ ಮತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

ಸದ್ಯ ನಟಿ ತ್ರಿಷಾ ದುಬಾರಿ ಬೆಲೆಯ ಫ್ಲಾಟ್ ಒಂದನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಕಾಲಿವುಡ್ ಸ್ಟಾರ್‍ ನಟ ಅಜಿತ್ ಮನೆಯ ಮುಂಭಾಗದಲ್ಲೇ 5 ಕೋಟಿ ಬೆಲೆಯುಳ್ಳ ಫ್ಲಾಟ್ ಒಂದನ್ನು ಖರೀದಿಸಿದ್ದರು ಎನ್ನಲಾಗಿತ್ತು. ಇದೀಗ ಆಕೆ ಮತ್ತೊರ್ವ ಸ್ಟಾರ್‍ ನಟ ವಿಜಯ್ ಮನೆಯ ಸಮೀಪದಲ್ಲೇ ಆಕೆ ಬರೊಬ್ಬರಿ 35 ಕೋಟಿ ಬೆಲೆಬಾಳುವಂತಹ ಮನೆಯೊಂದನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ.  ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಿಂದೆ ಅಜಿತ್ ರವರ ಮನೆಯ ಮುಂಭಾಗ ಖರೀದಿಸಿದ ಫ್ಲಾಟ್ ನಲ್ಲಿ ಆಕೆ ವಾಸಿಸುತ್ತಿದ್ದಾರೆಯೋ ಇಲ್ಲವೊ ತಿಳಿಯದು, ವಿಜಯ್ ಮನೆಯ ಬಳಿ ಖರೀದಿ ಮಾಡಿದ ಮನೆಯಲ್ಲೇ ತ್ರಿಷಾ ಜೀವಿಸಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲೇ ಸುದ್ದಿ ಕೇಳಿಬರುತ್ತಿದೆ.

ಇನ್ನೂ ನಟಿ ತ್ರಿಷಾ ಇತ್ತೀಚಿಗಷ್ಟೆ ರಾಂಗಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ಆಕ್ಷನ್ ಹಿರೋಯಿನ್ ಆಗಿ ತುಂಬಾನೆ ಅದ್ಬುತವಾಗಿ ನಟಿಸಿದ್ದಾರೆ ಎನ್ನಲಾಗಿದೆ. ಇನ್ನೂ ಆಕೆ ಚತುರಂಗವೆಟ್ಟೈ-2 ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಸಹ ಶೀಘ್ರದಲ್ಲೇ ತೆರೆಕಾಣಲಿದೆ. ರಾಮ್ ಪಾರ್ಟ್-1, ದಿ ರೋಡ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸ್ಟಾರ್‍ ನಟ ವಿಜಯ್ ರವರ 67ನೇ ಸಿನೆಮಾ ಹಾಗೂ ಅಜಿತ್ ರವರ 62ನೇ ಸಿನೆಮಾದಲ್ಲೂ ಸಹ ತ್ರಿಷಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top