Film News

ಆ ಸ್ಟಾರ್ ನಟಿಯೊಂದಿಗೆ ಡೇಟಿಂಗ್ ಗೆ ಹೋಗಬೇಕೆಂದ ನಟ ಅಖಿಲ್ ಅಕ್ಕಿನೇನಿ…..!

ತೆಲುಗು ಸಿನಿರಂಗದ ಅಕ್ಕಿನೇನಿ ಕುಟುಂಬದ ನಟ ಅಕ್ಕಿನೇನಿ ಅಖಿಲ್ ಕೆಲವು ದಿನಗಳ ಹಿಂದೆಯಷ್ಟೆ ಏಜೆಂಟ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಸ್ಪೈ ಆಕ್ಷನ್ ಸಿನೆಮಾ ಆಗಿರುವ ಏಜೆಂಟ್ ಅಂದುಕೊಂಡಂತೆ ಸಕ್ಸಸ್ ಕಾಣಲಿಲ್ಲ. ರಿಲೀಸ್ ಆದ ಮೊದಲನೇ ದಿನವೇ ಭಾರಿ ನೆಗೆಟೀವ್ ಟಾಕ್ ಸಹ ಪಡೆದುಕೊಂಡಿದ್ದು, ಅಖಿಲ್ ಕೆರಿಯರ್‍ ನಲ್ಲಿ ಡಿಜಾಸ್ಟರ್‍ ಪಟ್ಟಿಗೆ ಈ ಸಿನೆಮಾ ಸಹ ಸೇರಿದೆ. ಇದೀಗ ಅಖಿಲ್ ನೀಡಿದ ಕಾಮೆಂಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಿನಿಮಾ ಸೆಲೆಬ್ರೆಟಿಗಳು ನೀಡುವಂತಹ ಕೆಲವೊಂದು ಹೇಳಿಕೆಗಳು ಕಡಿಮೆ ಸಮಯದಲ್ಲೇ ಹಾಟ್ ಟಾಪಿಕ್ ಆಗಿರುತ್ತವೆ. ಅದರಲ್ಲೂ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ಯಂತೂ ಬಿರುಗಾಳಿಯಂತೆ ಹರಿದಾಡುತ್ತದೆ. ಈ ಹಾದಿಯಲ್ಲೇ ಅಖಿಲ್ ನೀಡಿದ ಹೇಳಿಕೆಯೊಂದು ಸಖತ್ ವೈರಲ್ ಆಗಿದೆ. 29 ವರ್ಷ ವಯಸ್ಸಿನ ಅಕ್ಕಿನೇನಿ ಅಖಿಲ್ ಇನ್ನೂ ಮದುವೆಯಾಗಿಲ್ಲ. ಇಲ್ಲಿಯವರೆಗೂ ಅಖಿಲ್ ಲವ್ ಅಫೈರ್‍ ಬಗ್ಗೆ ಸುದ್ದಿಗಳು ಸಹ ಕೇಳಿಬಂದಿಲ್ಲ. ಇದೀಗ ಆತ ಕಾರ್ಯಕ್ರಮವೊಂದರಲ್ಲಿ ಇಂಟ್ರಸ್ಟಿಂಗ್ ಕಾಮೆಂಟ್ ಒಂದನ್ನು ಮಾಡಿದ್ದಾರೆ. ಇತ್ತೀಚಿಗೆ ತೆಲುಗು ಕಿರುತೆರೆಯಲ್ಲಿ ಸುಮಾ ಅಡ್ಡಾ ಎಂಬ ಟಾಕ್ ಶೋ ಸಖತ್ ಸದ್ದು ಮಾಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಅಖಿಲ್ ಭಾಗವಹಿಸಿದ್ದಾರೆ. ಈ ವೇಳೆ ಆತ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದು ಹಾಟ್ ಟಾಪಿಕ್ ಆಗಿದೆ.

ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಸುಮಾ ಹೋಸ್ಟ್ ಮಾಡುವಂತಹ ಸುಮಾ ಅಡ್ಡಾ ಎಂಬ ಕಾರ್ಯಕ್ರಮ ಈಗಾಗಲೇ ಭಾರಿ ಕ್ರೇಜ್ ಪಡೆದುಕೊಂಡಿದೆ. ಈ ಶೋ ನಲ್ಲಿ ಈಗಾಗಲೇ ಅನೇಕ ಸ್ಟಾರ್‍ ಗಳು ಭಾಗವಹಿಸಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಇಂಟ್ರಸ್ಟಿಂಗ್ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಇದೀಗ ಈ ಶೋನಲ್ಲಿ ಅಕ್ಕಿನೇನಿ ಅಖಿಲ್ ಸಹ ಭಾಗಿಯಾಗಿದ್ದಾರೆ. ಈ ವೇಳೆ ಸುಮಾ ಜೊತೆ ಮಾತನಾಡುತ್ತಾ ಅನೇಕ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ವೇಳೆ ಸುಮಾ ನಿಮಗೆ ಡೇಟ್ ಮಾಡಲು ಅವಕಾಶ ಕೊಟ್ಟರೇ ಯಾವ ನಟಿಯೊಂದಿಗೆ ಹೋಗುತ್ತಿರಾ ಎಂದ ಕೂಡಲೇ  ಆತ ಹಿಂದೆ ಮುಂದೆ ನೋಡದೇ ಥಟ್ ಅಂತಾ ಪೂಜಾ ಹೆಗ್ಡೆ ಎಂದು ಹೇಳಿದ್ದಾರೆ. ಇದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಅಕ್ಕಿನೇನಿ ಅಖಿಲ್ ಹಾಗೂ ಪೂಜಾ ಹೆಗ್ಡೆ ಮೋಸ್ಟ್ ಎಲಿಜಿಬಲ್ ಬ್ಯಾಚಲರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಅಖಿಲ್ ಪೂಜಾ ಹೆಗ್ಡೆ ಜೊತೆ ಡೇಟ್ ಗೆ ಹೋಗುತ್ತೇನೆ ಎಂದು ಹೇಳಿರುವುದು ಹಾಟ್ ಟಾಪಿಕ್ ಆಗಿದೆ. ಇನ್ನೂ ಇದೇ ಸಮಯದಲ್ಲಿ ಅಖಿಲ್ ತನಗೆ ರಾಮ್ ಚರಣ್ ಎಂದರೇ ತುಂಬಾ ಇಷ್ಟ, ಆತ ನನ್ನ ಹಾರ್ಟ್ ಬೀಟ್ ಎಂದು ಸಹ ಹೇಳಿದ್ದರು. ಇದರ ಜೊತೆಗೆ ಒಂದೊಮ್ಮೆ ಅಖಿಲ್ ತನ್ನ ತಂದೆ ನಾಗಾರ್ಜುನ್ ರವರಿಗೆ ತಿಳಿಯದಂತೆ ಗೋಡೆ ಹಾರಿ ಹೋಗಿದ್ದಾಗಿ ಸಹ ಹೇಳಿದ್ದರು. ಏಜೆಂಟ್ ಸಿನೆಮಾದ ಪ್ರಮೋಷನ್ ವೇಳೆ ಸಹ ಅನೇಕ ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದರು.

Most Popular

To Top