ಕಠಿಣ ನಿರ್ಧಾರ ತೆಗೆದುಕೊಂಡ ರಶ್ಮಿ, ನನ್ನೊಂದಿಗೆ ಇರೋರು ಇರ್ತಾರೆ ಹೋಗೊವ್ರು ಹೋಗ್ತಾರೆ ಎಂದ ಆಂಕರ್……!

ತೆಲುಗು ಆಂಕರ್‍ ಕಂ ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಶೋಗೆ ಆಕೆ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ಆಕೆಯ ಮಾತುಗಳು, ಸೌಂದರ್ಯದ ಮೂಲಕ, ವಿಭಿನ್ನವಾದ ಡ್ರೆಸ್ ಗಳ ಮೂಲಕ…

ತೆಲುಗು ಆಂಕರ್‍ ಕಂ ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಶೋಗೆ ಆಕೆ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ಆಕೆಯ ಮಾತುಗಳು, ಸೌಂದರ್ಯದ ಮೂಲಕ, ವಿಭಿನ್ನವಾದ ಡ್ರೆಸ್ ಗಳ ಮೂಲಕ ಆಕರ್ಷಣೆ ಮಾಡುತ್ತಿರುತ್ತಾರೆ. ಕಳೆದ ಏ.27 ರಂದು ರಶ್ಮಿ ಹುಟ್ಟುಹಬ್ಬವಾಗಿದ್ದು ಅದ್ದೂರಿಯಾಗಿ ದುಬಾರಿ ಹೋಟೆಲ್ ಒಂದರಲ್ಲಿ ಆಚರಿಸಿಕೊಂಡರು.  ರಶ್ಮಿ ಹತ್ತಿರದ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಆಕೆಯ ಹುಟ್ಟುಹಬ್ಬದ ಪಾರ್ಟಿ ಅದ್ದೂರಿಯಾಗಿ ನಡೆದಿದ್ದು, ಈ ಪಾರ್ಟಿಯ ಕೆಲವೊಂದು ಪೊಟೋಗಳು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಪೊಟೋಗಳು ವೈರಲ್ ಆಗುತ್ತಿವೆ.

ಆಂಕರ್‍ ಕಂ ನಟಿ ರಶ್ಮಿ ಕಿರುತೆರೆ ಶೋ ಗಳು ಹಾಗೂ ಸಿನೆಮಾಗಳ ಮೂಲಕವೂ ಬ್ಯುಸಿಯಾಗಿದ್ದಾರೆ. ಇನ್ನೂ ರಶ್ಮಿಗೆ ತುಂಬಾ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದೇ ಹೇಳಬಹುದಾಗಿದೆ. ಆಕೆ ಕೊನೆಯದಾಗಿ ಬೊಮ್ಮ ಬ್ಲಾಕ್ ಬ್ಲಸ್ಟರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸ್ಪಂದನೆ ಪಡೆದುಕೊಂಡರೂ ಸಹ ಕಮರ್ಷಿಯಲ್ ಆಗಿ ಸಕ್ಸಸ್ ಕಂಡುಕೊಳ್ಳಲಿಲ್ಲ. ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಂಡು ಕೊಳ್ಳದ ರಶ್ಮಿ ಆಂಕರಿಂಗ್ ನಲ್ಲಿ ಮಾತ್ರ ತುಂಭಾ ಫೇಮಸ್ ಆಗುತ್ತಿದ್ದಾರೆ. ಮಲ್ಲೆಮಾಲ ಸಂಸ್ಥೆಗೆ ರಶ್ಮಿ ಮೈನ್ ಆಂಕರ್‍ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಇದೀಗ ಆಕೆಯ ಹುಟ್ಟುಹಬ್ಬದ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಆಂಕರ್‍ ರಶ್ಮಿ ಬರ್ತ್ ಡೇ ಪೊಟೋಗಳ ಜೊತೆಗೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಮಾಡಿದ್ದಾರೆ. ನಿನ್ನೊಂದಿಗೆ ಇರುವವರು ಇರುತ್ತಾರೆ, ಹೋಗುವವರು ಹೋಗುತ್ತಾರೆ. ವಯಸ್ಸು ಮತ್ತೊಂದು ವರ್ಷ ಹೆಚ್ಚಾಗಿದೆ. ಜೀವನದಲ್ಲಿ ಮತಷ್ಟು ಮುಂದೆ ಸಾಗಲು ಪ್ರಯತ್ನಗಳನ್ನು ಮಾಡುತ್ತೇನೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಭಾವಿಸಿ ಶುಭ ಕೋರಿದ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಸ್ನೇಹಿತರು ನನ್ನ ಜೀವನದ ಮೂರು ಪಿಲ್ಲರ್‍ ಗಳು ಎಂದು ರಶ್ಮಿ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ರಶ್ಮಿಕಾ ಇರವವರು ಇರುತ್ತಾರೆ ಹೋಗುವವರು ಹೋಗುತ್ತಾರೆ ಎಂಬ ಕಾಮೆಂಟ್ ಯಾವ ಉದ್ದೇಶದಿಂದ ಮಾಡಿದ್ದಾರೆ ಎಂಬ ವಿಚಾರ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ರಶ್ಮಿ ಮದುವೆ ಸುದ್ದಿ ಸಹ ಆಗಾಗ ಕೇಳಿಬರುತ್ತಲೇ ಇರುತ್ತಾರೆ. ರಶ್ಮಿ 35 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮಿಡಿಯಾ ಮೂಲಕ ಕೇಳುತ್ತಲೇ ಇರುತ್ತಾರೆ. ಇನ್ನೂ ರಶ್ಮಿ ಹಾಗೂ ಸುಡಿಗಾಲಿ ಸುಧೀರ್‍ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆಕೆ ಸಿನೆಮಾಗಳಲ್ಲೂ ಸಹ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡಿದ್ದಾರೆ.