Film News

ಆ ಸೀನಿಯರ್ ನಟ ನನ್ನ ಕ್ರಷ್ ಎಂದ ಆಂಕರ್ ವಿಷ್ಣು ಪ್ರಿಯಾ, ಪ್ರಪೋಸ್ ಮಾಡಿದ್ದೀನಿ ಆತನ ರಿಯಾಕ್ಷನ್ ಗಾಗಿ ವೈಟಿಂಗ್ ಎಂದ ನಟಿ……!

ತೆಲುಗು ಕಿರುತೆರೆಯ ಮೂಲಕ ಫೇಂ ಪಡೆದುಕೊಂಡವರಲ್ಲಿ ಆಂಕರ್‍ ವಿಷ್ಣುಪ್ರಿಯಾ ಸಹ ಒಬ್ಬರಾಗಿದ್ದಾರೆ. ಅನೇಕ ಕಿರುತೆರೆ ಕಾರ್ಯಕ್ರಮಗಳ ಮೂಲಕ ಫೇಂ ಪಡೆದುಕೊಂಡ ಈಕೆ ಸಿನೆಮಾಗಳಲ್ಲೂ ಸಹ ಟ್ರೈ ಮಾಡುತ್ತಿದ್ದಾರೆ. ಈಗಾಗಲೇ ಆಕೆ ಒಂದೆರಡು ಸಿನೆಮಾಗಳಲ್ಲಿ ನಟಿಸಿದ್ದರು, ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಇದರ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ತಾನೂ ಸ್ಟಾರ್‍ ನಟಿಯರಿಂಗಿಂತಲೂ ಕಡಿಮೆಯಿಲ್ಲ ಎಂಬಂತೆ ಸ್ಕಿನ್ ಶೋ ಮಾಡುತ್ತಿರುತ್ತಾರೆ. ಇದೀಗ ಆಕೆ ತನ್ನ ಕ್ರಷ್ ಬಗ್ಗೆ ಕಾಮೆಂಟ್ಸ್ ಮಾಡಿದ್ದು, ವೈರಲ್ ಆಗುತ್ತಿದೆ.

ಟಾಲಿವುಡ್ ಹಾಟೆಸ್ಟ್ ಆಂಕರ್‍ ಗಳಲ್ಲಿ ಒಬ್ಬರಾದ ವಿಷ್ಣುಪ್ರಿಯಾ ಕೆಲವೊಂದು ಶೋ ಗಳ ಮೂಲಕ ಯುವಕರಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಆಗಿ ಪೋಸ್ ಕೊಡಲು ಸಹ ಸಿದ್ದರಾಗಿದ್ದಾರೆ. ಈಗಾಗಲೇ ಆಕೆ ಅನೇಕ ಬೋಲ್ಡ್ ಪೊಟೋಗಳ ಮೂಲಕ ಯುವಕರ ಹೃದಯ ಕದ್ದಿದ್ದಾರೆ. ಇದೀಗ ವಿಷ್ಣುಪ್ರಿಯಾ ತನ್ನ ಲವ್ ಅಫೈರ್‍ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು ಅವರು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ತೆಲುಗಿನಲ್ಲಿ ಓಂಕಾರ್‍ ಹೋಸ್ಟ್ ಮಾಡುತ್ತಿರುವ ಸಿಕ್ಸ್ತ್ ಸೆನ್ಸ್ ಸೀಸನ್-5 ಒಳ್ಳೆಯ ಕ್ರೇಜ್ ಪಡೆದುಕೊಂಡಿದೆ. ಈ ಫನ್ ಗೇಂ ಶೋ ನಲ್ಲಿ ವಿಷ್ಣುಪ್ರಿಯಾ ಹಾಗೂ ರವಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ವಿಷ್ಣುಪ್ರಿಯಾ ತನ್ನ ಲವ್ ಅಫೈರ್‍ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಕಂ ಆಂಕರ್‍ ವಿಷ್ಣುಪ್ರಿಯಾ ಸಿಕ್ಸ್ತ್ ಸೆನ್ಸ್ ಹೋಸ್ಟ್ ಮಾಡುವಂತಹ ಓಂಕಾರ್‍ ಲವರ್‍ ಅಫೈರ್‍ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಆಕೆ ಒಪೆನ್ ಆಗಿ ತನ್ನ ಲವ್ ಅಫೈರ್‍ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸಾಮಾನ್ಯವಾಗಿ ಸಿನಿರಂಗದಲ್ಲಿನ ಅನೇಕರ ನಟಿಯರು ಇಂತಹ ಪ್ರಶ್ನೆ ಎದುರಾದರೇ ತಾನು ಸಿಂಗಲ್ ಆಗಿದ್ದೇನೆ ಎಂದು ಹೇಳುತ್ತಾರೆ. ಆದರೆ ವಿಷ್ಣುಪ್ರಿಯಾ ಮಾತ್ರ ನೇರವಾಗಿಯೇ ತನ್ನ ಲವ್ ಬಗ್ಗೆ ಹೇಳಿದ್ದಾರೆ. ಆಕೆ ಇಷ್ಟಪಟ್ಟಿದ್ದು ಬೇರೆ ಯಾರನ್ನೂ ಅಲ್ಲ ಸೀನಿಯರ್‍ ನಟ ಜೆ.ಡಿ.ಚಕ್ರವರ್ತಿಯರವರನ್ನಂತೆ. ಒಂದು ವೆಬ್ ಸಿರೀಸ್ ಗಾಗಿ ಮಂಗಳೂರಿನಲ್ಲಿ ಆತನೊಂದಿಗೆ ನಲವತ್ತು ದಿನಗಳ ಕಾಲ ಜರ್ನಿ ಮಾಡಿದ್ದರಂತೆ. ಈ ವೇಳೆ ಹತ್ತನೇ ದಿನಕ್ಕೆ ಆತನ ವ್ಯಕ್ತಿತ್ವಕ್ಕೆ ಆಕೆ ಫಿದಾ ಆಗಿದ್ದರಂತೆ. ಕಳೆದ ವರ್ಷವೇ ಆತನಿಗೆ ಪ್ರಪೋಸ್ ಸಹ ಮಾಡಿದ್ದಾರಂತೆ. ಆದರೆ ಆಕೆಯ ಪ್ರಪೋಸಲ್ ಗೆ ಇನ್ನೂ ಉತ್ತರ ಬರಲಿಲ್ಲವಂತೆ.

ಇನ್ನೂ ಈಗಾಗಲೇ ಜೆ.ಡಿ. ಚಕ್ರವರ್ತಿ ಮದುವೆಯಾಗಿದ್ದಾರೆ. ಕಳೆದ 2016ರಲ್ಲೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಜೀವನ ಸಾಗಿಸುತ್ತಿದ್ದಾರೆ. ಆದರೆ ವಿಷ್ಣು ಪ್ರಿಯಾ ಅವರನ್ನು ಲವ್ ಮಾಡುತ್ತಿರುವುದಾಗಿ ಹೇಳಿ ಬಾಂಬ್ ಸಿಡಿಸಿದ್ದಾರೆ. ಆಕೆ ಬೇಕು ಎಂತಲೇ ಎಲ್ಲರ ಗಮನ ಸೆಳೆಯಲು ಈ ರೀತಿಯಾಗಿ ಹೇಳಿದ್ದಾರೆ ಎಂದರೇ ಮತ್ತೆ ಕೆಲವರು ನಿಜ ಸಹ ಆಗಿರಬಹುದು ಎಂದು ಅನುಮಾನ ಸಹ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top