Film News

ಸ್ಲೀವ್ ಲೆಸ್ ಫ್ರಾಕ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಪೂಜಾ, ಕ್ಯೂಟ್ ಸ್ಮೈಲ್ ಮೂಲಕ ಯುವಕರ ನಿದ್ದೆ ಕದ್ದ ಬುಟ್ಟ ಬೊಮ್ಮ…..!

ಸೌತ್ ಇಂಡಿಯನ್ ಸ್ಟಾರ್‍ ನಟಿ ಪೂಜಾ ಹೆಗ್ಡೆ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ ಈ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಪ್ರಮೋಷನ್ ಅಂಗವಾಗಿ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡಿದ್ದರು. ಈ ಸಿನೆಮಾ ಇದೇ ಏ.21 ರಂದು ಬಿಡುಗಡೆಯಾಗಿದ್ದು, ಒಳ್ಳೆಯ ಟಾಕ್ ಪಡೆದುಕೊಂಡಿದೆ. ಇದೀಗ ಆಕೆಯ ಕ್ಯೂಟ್ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಪೂಜಾ ಹೆಗ್ಡೆ ಮೊದಲಿಗೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಅಂತಹ ಸಮಯದಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಅಲಾ ವೈಕಂಟಪುರಂಲೋ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಬಳಿಕ ಆಕೆಯ ಸಿನೆಮಾಗಳು ಭಾರಿ ಸಕ್ಸಸ್ ಕಂಡುಕೊಂಡವು. ಆದರೆ ಕಳೆದ ವರ್ಷ ಮಾತ್ರ ಪೂಜಾ ಹೆಗ್ಡೆಗೆ ಭಾರಿ ನಿರಾಸೆ ಮೂಡಿದೆ ಎಂದು ಹೇಳಬಹುದಾಗಿದೆ. ಕಳೆದ ವರ್ಷ ಪೂಜಾ ಹೆಗ್ಡೆ ನಟಿಸಿದ ಬಿಗ್ ಬಜೆಟ್ ಸಿನೆಮಾಗಳಾದ ರಾಧೆಶ್ಯಾಮ್, ಬೀಸ್ಟ್, ಆಚಾರ್ಯ, ಸರ್ಕಸ್ ಸಿನೆಮಾಗಳು ಬಾಕ್ಸ್  ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಆದರೂ ಸಹ ಆಕೆ ಅವಕಾಶಗಳನ್ನು ಪಡೆದುಕೊಂಡರು. ಈ ಹಾದಿಯಲ್ಲೇ ಆಕೆ ಬಾಲಿವುಡ್ ನಲ್ಲಿ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಸಹ ಆಕೆ ಅಂದುಕೊಂಡಷ್ಟು ಹಿಟ್ ಪಡೆದುಕೊಳ್ಳಲಿಲ್ಲವಾದರೂ ಪರವಾಗಿಲ್ಲ ಎಂಬ ಟಾಕ್ ಪಡೆದುಕೊಂಡಿದೆ.

ಇನ್ನೂ ಪೂಜಾ ಹೆಗ್ಡೆ ಈ ಸಿನೆಮಾದ ಪ್ರಮೋಷನ್ ನಲ್ಲಿ ಸಹ ಸಕ್ರಿಯರಾಗಿ ಭಾಗಿಯಾಗಿದ್ದರು. ಸಿನೆಮಾ ಪ್ರಮೋಷನ್ ಗಾಗಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಸಹ ಹಂಚಿಕೊಂಡರು. ಇದೀಗ ಪೂಜಾ ಹೆಗ್ಡೆ ಕೆಲವೊಂದು ಕ್ಯೂಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಋಎ. ಸ್ಲೀವ್ ಲೆಸ್ ಫ್ರಾಕ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸೋಫಾ ಮೇಲೆ ಕುಳಿತು ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಕ್ಯೂಟ್ ಅಂಡ್ ಫನ್ನಿ ಪೋಸ್ ಗಳಿಗೆ ಯುವಕರ ಹೃದಯ ಗಾಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕ್ಯೂಟ್ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸದ್ಯ ಪೂಜಾಹೆಗ್ಡೆ ಮತ್ತೊಮ್ಮೆ ತ್ರಿವಿಕ್ರಮ್ ರವರ ಸಿನೆಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ SSMB28 ಸಿನೆಮಾದಲ್ಲಿ ಪೂಜಾ ಮೈನ್ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ಮುಂದಿನ ವರ್ಷ ಜ.13 ರಂದು ವಿಶ್ವವ್ಯಾಪಿ ರಿಲೀಸ್ ಆಗಲಿದೆ.

Most Popular

To Top