News

ತೆಲಂಗಾಣದಲ್ಲಿ ಮಹಿಳೆಯರಿಗೆ ಬಂಪರ್ ಆಫರ್ ಘೋಷಣೆ ಮಾಡಿದ ಕಾಂಗ್ರೇಸ್, ಮದುವೆಯಾಗುವ ಯುವತಿಯರಿಗೆ 1 ಲಕ್ಷ, 10 ಗ್ರಾಂ ಬಂಗಾರವಂತೆ….!

ಇನ್ನೇ ಕೆಲವೇ ದಿನಗಳಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಮಾಡಲಾಗಿದೆ. ಮುಂದಿನ ತಿಂಗಳಲ್ಲೇ ಚುನಾವಣೆ ನಡೆಯಲಿದ್ದು, ಅಧಿಕಾರ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಮತದಾರರನ್ನು ಸೆಳೆಯಲು ಶುರು ಮಾಡಿದ್ದಾರೆ. ಇದೀಗ ಕಾಂಗ್ರೇಸ್ ಪಕ್ಷ ಭಾರಿ ಯೋಜನೆಗಳನ್ನು ಘೋಷಣೆ ಮಾಡಿದೆ.  ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೇ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೇಸ್ ಘೋಷಣೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೇ ಮಹಿಳೆಯರಿಗೆ ಮಹಾಲಕ್ಷ್ಮೀ ಯೋಜನೆಯಡಿ ಮಾಹೆಯಾನ 2500, 500 ರೂಪಾಯಿಗೆ ಗ್ಯಾಸ್ ಸಿಲಂಡರ್‍, ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದೀಗ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಮಹಿಳೆಯರು ವಿವಾಹವಾದ ಸಮಯದಲ್ಲಿ 1 ಲಕ್ಷ ಹಣ ಹಾಗೂ 10 ಗ್ರಾಂ ಚಿನ್ನ ನೀಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾಂಗ್ರೇಸ್ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಶ್ರೀಧರ್‍ ಬಾಬು ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮೀ ಯೋಜನೆಯನ್ನು ಇನಷ್ಟು ವಿಸ್ತರಣೆ ಮಾಡಲು ಬಯಸಿದ್ದು, ಅದರಂತೆ ವಿವಾಹದ ಸಮಯದಲ್ಲಿ 1 ಲಕ್ಷ ಹಣ ಹಾಗೂ 10 ಗ್ರಾಂ ಬಂಗಾರ ನೀಡಲು ಬಯಸಿದ್ದಾಗಿ ಹೇಳಿದ್ದಾರೆ.

ಸದ್ಯ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಬಿ.ಆರ್‍.ಎಸ್ ಪಕ್ಷವು ಕಲ್ಯಾಣ ಲಕ್ಷ್ಮಿ ಹಾಗೂ ಶಾದಿ ಮುಭಾರಕ್ ಯೋಜನೆಯ ಮೂಲಕ ವಿವಾಹವಾಗುವಂತಹ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ 1.16 ಲಕ್ಷ ರೂಪಾಯಿ ನಿಡುತ್ತಿದೆ. ಇದೀಗ ಕಾಂಗ್ರೇಸ್ ಪಕ್ಷ ಸಹ ಹಣ ಹಾಗೂ ಬಂಗಾರ ನೀಡುವ ಘೋಷಣೆ ಮಾಡಿದೆ. ಕಳೆದ ಸೆಪ್ಟೆಂಬರ್‍ ಮಾಹೆಯಲ್ಲಿ 6 ಗ್ಯಾರಂಟಿ ಯೋಜನೆಗಳನ್ನು ಸಹ ಘೋಷಣೆ ಮಾಡಿತ್ತು. ಇದೀಗ ಮಹಾಲಕ್ಷ್ಮೀ ಯೋಜನೆಯನ್ನು ವಿಸ್ತರಣೆ ಮಾಡಲಿದ್ದು ಮಹಿಳೆಯರಿಂದ ಪಕ್ಷಕ್ಕೆ ಉತ್ತಮ ಬೆಂಬಲ ಸಿಗಲಿದೆ ಎಂಬುದು ಕಾಂಗ್ರೇಸ್ ಪಾಳಯದ ಭಾವನೆಯಾಗಿದೆ.

Most Popular

To Top