Film News

ಪತಿಯನ್ನು ನೆನೆದು ಎಮೋಷನಲ್ ಪೋಸ್ಟ್ ಹಂಚಿಕೊಂಡ ನಟಿ ಮೇಘನಾ, ಚಿರು ಹುಟ್ಟುಹಬ್ಬದಂದು ಭಾವುಕ ಪೋಸ್ಟ್….!

ಕನ್ನಡ ಸಿನಿರಂಗದ ಸರ್ಜಾ ಕುಟುಂಬಕ್ಕೆ ಅ.17 ತುಂಬಾ ವಿಶೇಷವಾದ ದಿನವಾಗಿದೆ. ಅ.17 ದಿವಂಗತ ಚಿರು ಸರ್ಜಾ ರವರ ಹುಟ್ಟುಹಬ್ಬವಾಗಿದೆ. ಅವರು ಇಹಲೋಕ ತ್ಯೆಜಿಸಿದರೂ ಸಹ ಅವರ ಕುಟುಂಬ ಅವರ ಹುಟ್ಟುಹಬ್ಬವನ್ನು ವಿಶೇಷ ವಾಗಿ ಆಚರಿಸುತ್ತಾರೆ. ಚಿರು ರವರ ನೆನಪುಗಳು ಅವರ ಕುಟುಂಬದೊಂದಿಗೆ ಶಾಶ್ವತವಾಗಿ ನೆಲೆಸಿರುತ್ತವೆ. ಇನ್ನೂ ಚಿರು ಪತ್ನಿ ಮೇಘನಾ ಸಹ ತನ್ನ ಪ್ರೀತಿಯ ಪತಿಯನ್ನು ನೆನೆದು ಭಾವುಕ ಪೋಸ್ಟ್ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತನ್ನ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ನಿಮಿತ್ತ ವಿಶೇಷ ಶುಭಾಷಯಗಳನ್ನು ಹಂಚಿಕೊಂಡಿದ್ದಾರೆ. ಚಿರು ಭೌತಿಕವಾಗಿ ಇಲ್ಲದೇ ಇದ್ದರೂ ಸಹ ಸಿನೆಮಾಗಳ ಮೂಲಕ ಅವರ ನೆನಪುಗಳನ್ನು ಅವರಲ್ಲೇ ಉಳಿಸಿಕೊಂಡು ಸದಾ ಅವರ ನೆನಪಿನಲ್ಲೇ ಇರುತ್ತಾರೆ ಮೇಘನಾ ಹಾಗೂ ಅವರ ಕುಟುಂಬ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಚಿರು ಜೊತೆಗಿನ ವಿಶೇಷವಾದ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಹ್ಯಾಪಿ ಬರ್ತ್ ಡೇ ಹಸ್ಬೆಂಡ್ ಎಂದು ಅವರಿಬ್ಬರ ಹಳೇಯ ಕ್ಯೂಟ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಆಕೆ ಹಂಚಿಕೋಂಡ ಪೊಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಚಿರು ಅಭಿಮಾನಿಗಳೂ ಸಹ ಅವರು ಹುಟ್ಟುಹಬ್ಬದಂದು ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಸೋಷಿಯಲ್ ಮಿಡಿಯಾ ಮೂಲಕ ಶುಭಾಷಯಗಳನ್ನು ಸಹ ಹರಿಬಿಡುತ್ತಿದ್ದಾರೆ.

ಇನ್ನೂ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ಮೂರು ವರ್ಷಗಳು ಕಳೆದಿದೆ. ಕಳೆದ 2020 ಜೂನ್ 7 ರಂದು ಹೃದಯಾಘಾತದಿಂದ ಇಹಲೋಕ ತ್ಯೆಜಿಸಿದಾಗ ಇಡೀ ಚಿತ್ರರಂಗ ಶಾಕ್ ಆಗಿತ್ತು. ಚಿರು ಸರ್ಜಾ ರವರು ಬದುಕಿದ್ದರೇ ಇಂದು ಅವರು 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಆ ವಿಧಿಯಾಟಕ್ಕೆ ಚಿರು ಸರ್ಜಾ ಎಲ್ಲರನ್ನೂ ಬಿಟ್ಟು ದೇವರಲ್ಲಿ ಲೀನವಾಗಬೇಕಾಗಿತ್ತು. ಇನ್ನೂ ಚಿರು ಸರ್ಜಾ ಹಾಗೂ ಧ್ರುವಾ ಸರ್ಜಾ ಅಣ್ಣ ತಮ್ಮಂದಿರಂತೆ ಇದಿದ್ದಕ್ಕಿಂತ ಸ್ನೇಹಿತರಾಗಿಯೇ ಇದ್ದರು. ಕೆಲವು ದಿನಗಳ ಹಿಂದೆಯಷ್ಟೆ ಧ್ರುವಸರ್ಜಾ ಕನಕಪುರದ ರಸ್ತೆಯ ನೆಲಗುಳಿಯ ಬಳಿಯಿರುವ ಅವರ ಫಾರ್ಮ್ ಹೌಸ್ ಗೆ ತೆರಳಿ ಅಲ್ಲಿದ್ದ ಚಿರು ಸರ್ಜಾ ಸಮಾಧಿಯ ಪಕ್ಕದಲ್ಲಿ ಬೆಡ್ ಶೀಟ್ ಹಾಕಿಕೊಂಡು ಮಲಗಿದ್ದರು.

ಇನ್ನೂ ಚಿರು ಸರ್ಜಾ ಅಭಿನಯದ ಕೊನೆಯ ಚಿತ್ರ ರಾಜಮಾರ್ತಾಂಡ ಸಿನೆಮಾ ಸಹ ಅ.6 ರಂದು ಬಿಡುಗಡೆಯಾಗಿದ್ದು, ಸಿನೆಮಾ ನೋಡಿದ ಬಹುತೇಕ ಎಲ್ಲರೂ ಭಾವುಕರಾಗಿದ್ದರು. ಈ ಸಿನೆಮಾಗೆ ಚಿರು ಸರ್ಜಾರವರಿಗೆ ಧ್ರುವಾ ಸರ್ಜಾ ಧ್ವನಿ ನೀಡಿದ್ದಾರೆ. ಇನ್ನೂ ಧ್ರುವಾ ಸರ್ಜಾ, ಚಿರು ಹಾಗೂ ಚಿರು ಮಗನ ಹುಟ್ಟುಹಬ್ಬ ಸಹ ಅಕ್ಟೋಬರ್‍ ಮಾಹೆಯಲ್ಲೇ ಇರುವುದು ವಿಶೇಷ ಎನ್ನಬಹುದಾಗಿದೆ.

Most Popular

To Top