Film News

ಬಾಲಿವುಡ್ ಸೆಲೆಬ್ರೆಟಿಗಳ ಮದುವೆಯ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟ ಸ್ಟಾರ್ ಡ್ಯಾನ್ಸರ್ ನೋರಾ ಫತೇಹಿ, ವೈರಲ್ ಆದ ಕಾಮೆಂಟ್ಸ್….!

ಬಾಲಿವುಡ್ ಹಾಟ್ ಬ್ಯೂಟಿ ನೋರಾ ಫತೇಹಿ ಬಾಲಿವುಡ್ ನ ಅನೇಕ ಸಿನೆಮಾ ಗಳಲ್ಲಿ ಹಾಟ್ ಹಾಡುಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿ. ಅತೀ ಕಡಿಮೆ ಸಮಯದಲ್ಲೆ ದೊಡ್ಡ ಖ್ಯಾತಿ ಗಳಿಸಿಕೊಂಡ ಈಕೆ ಬಾಹುಬಲಿ ಸಿನೆಮಾದಲ್ಲಿ ಮನೋಹರಿ ಎಂಬ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದರು. ಐಟಂ ಡ್ಯಾನ್ಸ್ ಗಳ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯೆಂದೇ ಹೇಳಬಹುದು. ಇದೀಗ ಸಂದರ್ಶನವೊಂದರಲ್ಲಿ ಆಕೆ ಸೆಲೆಬ್ರೆಟಿಗಳ ಮದುವೆಯ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಹಾಟ್ ಬ್ಯೂಟಿ ನೋರಾ ಫತೇಹಿ ಬಾಲಿವುಡ್ ನಲ್ಲಿ ನಡೆಯುವಂತಹ ಈವೆಂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ವಿವಿಧ ಈವೆಂಟ್ ಗಳಲ್ಲಿ ವಿವಿಧ ರೀತಿಯ ಡ್ರೆಸ್ ಗಳನ್ನು ಧರಿಸಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಎಲ್ಲರನ್ನೂ ಸೆಳೆಯುವ ನಿಟ್ಟಿನಲ್ಲಿ ಕೆಲವೊಮ್ಮೆ ವಿಚಿತ್ರವಾದ ಡ್ರೆಸ್ ಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿರುತ್ತಾರೆ. ಹಿಂದಿ ಸಿನೆಮಾಗಳ ಜೊತೆಗೆ ಕೆಲವೊಂದು ಸೌತ್ ಸಿನೆಮಾಗಳಲ್ಲೂ ಸಹ ಕೆಲವೊಂದು ಐಟಂ ಸಾಂಗ್ ಗಳಲ್ಲಿ ನೃತ್ಯ ಮಾಡಿ ಸೌತ್ ನಲ್ಲೂ ಫೇಂ ಸಂಪಾದಿಸಿಕೊಂಡರು.  ತೆಲುಗಿನ ಟೆಂಪರ್‍, ಕಿಕ್ 2, ಊಪಿರಿ, ಬಾಹುಬಲಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಸಖತ್ ಸದ್ದು ಮಾಡಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

ಇನ್ನೂ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನೋರಾ ಫತೇಹಿ ಕೆಲವೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬಾಲಿವುಡ್ ನಲ್ಲಿ ಸೆಲೆಬ್ರೆಟಿಗಳು ಲಾಭಕ್ಕಾಗಿ ಮದುವೆಯಾಗುತ್ತಾರೆ ಎಂದು ನೋರಾ ಹೇಳಿದ್ದಾರೆ. ಬಾಲಿವುಡ್ ನಲ್ಲಿ ಸುದ್ದಿಯಲ್ಲಿರಲು, ಹಣ ಗಳಿಸಲು ಮದುವೆ ಆಗುತ್ತಾರೆ. ಫೇಮಸ್ ಆಗಿರುವಂತಹ ವ್ಯಕ್ತಿಯನ್ನು ಮದುವೆಯಾದರೇ ಹಣ, ಹೆಸರು ಬರುತ್ತದೆ. ಆ ವ್ಯಕ್ತಿಯ ಬಳಿ ಸಿನೆಮಾಗಳಿರುತ್ತವೆ. ಆ ಸಿನೆಮಾಗಳು ಸೂಪರ್‍ ಹಿಟ್ ಆದರೇ ಅದರ ಬೆನ್ನಲ್ಲೇ ಅವರೂ ಸಹ ಫೇಮಸ್ ಆಗಬಹುದು. ದುಡ್ಡಿಗಾಗಿ ಇದನ್ನೆಲ್ಲಾ ಮಾಡುತ್ತಾರೆ. ಹಣಕ್ಕಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಹಣಕ್ಕಾಗಿ ಇಷ್ಟವಿಲ್ಲದ ವ್ಯಕ್ತಿಯನ್ನು ಮದುವೆಯಾಗಿ ಜೀವನ ಮಾಡುವುದಕ್ಕಿಂತ ಕೆಟ್ಟದ್ದು ಬೇರೆ ಏನಿದೆ. ಮಾನಸಿಕ ಆರೋಗ್ಯ, ಸಂತೋಷದ ವೈಯುಕ್ತಿಕ ಜೀವನ ತ್ಯಾಗ ಮಾಡುವುದರಲ್ಲಿ ಅರ್ಥವಿಲ್ಲ ಎಂದು ನೋರಾ ಫತೇಹಿ ಕಾಮೆಂಟ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

Most Popular

To Top