News

ನ್ಯೂಜಿಲ್ಯಾಂಡ್ ಟೀಂ ಅನ್ನು ಮಣಿಸಿದ ಟೀಂ ಇಂಡಿಯಾ, ಫೈನಲ್ ಅಂಗಳಕ್ಕೆ ಕಾಲಿಟ್ಟ ಭಾರತ…..!

ಟೀಂ ಇಂಡಿಯಾ ವರ್ಲ್ಡ್ ಕಪ್ ಗೆಲ್ಲಬೇಕೆಂಬ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಸೆಗೆ ಮತಷ್ಟು ಬಲ ಬಂದಂತಾಗಿದೆ. ನ.15 ರಂದು ನ್ಯೂಜಿಲ್ಯಾಂಡ್ ಹಾಗೂ ಇಂಡಿಯಾ ನಡುವೆ ನಡೆದ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಫೈನಲ್ ಅಂಗಳ ತಲುಪಿದೆ. ಆರಂಭದಿಂದ ಈ ಪಂದ್ಯ ಭಾರಿ ಕುತೂಹಲ ಮೂಡಿಸಿತ್ತು. ಇಂಡಿಯಾ ಬೌಲರ್‍ ಗಳ ದಾಳಿಗೆ ನ್ಯೂಜಿಲ್ಯಾಂಡ್ ಸೋಲನ್ನು ಒಪ್ಪಿಕೊಂಡಿದೆ. ನ್ಯೂಜಿಲ್ಯಾಂಡ್ ತಂಡದ ಬ್ಯಾಟ್ಸ್ ಮೆನ್ ಗಳ ಸೆಂಚುರಿಯ ನಡುವೆಯೂ ಭಾರತದ ದಾಳಿಗೆ ಮಣಿಯಲೇ ಬೇಕಾಯಿತು ಎನ್ನಬಹುದಾಗಿದೆ. ನ್ಯೂಜಿಲ್ಯಾಂಡ್ ತಂಡವನ್ನು 327 ರನ್ ಗಳಿಗೆ ಆಲ್ ಔಟ್ ಮಾಡಿ 70 ರನ್ ಗಳಿಂದ ಭಾರತ ಗೆಲುವು ಸಾಧಿಸಿದೆ.

ಟಿಂ ಇಂಡಿಯಾ ಸ್ಪೋಟಕ ಬ್ಯಾಟಿಂಗ್ ಮೂಲಕ 397 ರನ್ ಗಳನ್ನು ಪಡೆದುಕೊಂಡು, ಎದುರಾಳಿ ತಂಡ ನ್ಯೂಜಿಲ್ಯಾಂಡ್ ಗೆ 398 ರನ್ ಗಳ ಟಾರ್ಗೆಟ್ ನೀಡಿತ್ತು. ವಿರಾಟ್, ಶ್ರೇಯಸ್ ಸೆಂಚುರಿ ಬಾರಿಸಿದರೇ, ಶುಭಮನ್ ಗಿಲ್ 80 ರನ್ ಪಡೆದುಕೊಂಡರು. ಬ್ಯಾಟಿಂಗ್ ಶುರು ಮಾಡಿದ ನ್ಯೂಜಿಲ್ಯಾಂಡ್ ತಂಡಕ್ಕೆ ಆರಂಭದಲ್ಲೇ ಶಾಕ್ ಕೊಡಲಾಯಿತು. 30 ರನ್ ಗಳಲ್ಲೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ಮೊಹಮ್ಮದ್ ಶಮಿ ದಾಳಿಗೆ ಡೆವೋನ್ ವಿಕೆಟ್ ಪತನವಾಯ್ತು. ಮತ್ತೆ ದಾಳಿ ಮುಂದುವರೆಸಿದ ಮೊಹಮದ್ ಶಮಿ ರಚಿನ್ ರವೀಂದ್ರ ವಿಕೆಟ್ ಕಬಳಿಸಿದರು. ಆದರೆ ಕೇನ್ ವಿಕಿಯಮ್ಸ್ ಹಾಗೂ ಡರಿಲ್ ಮೆಚೆಲ್ ಪಾಟರ್ನರ್‍ ಶಿಪ್  ಟೀಂ ಇಂಡಿಯಾಗೆ ಟೆನ್ಷನ್ ಹೆಚ್ಚಾಗುವಂತೆ ಮಾಡಿತ್ತು. ಮೊದಲ ಬಾರಿಗೆ ಟೀಂ ಇಂಡಿಯಾ ಬೌಲರ್ಸ್ ಸುಸ್ತಾದರು. ಡರಿಲ್ ಮಿಚೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದರು.

ವಿಲಿಯಮ್ಸ್ ಹಾಗೂ ಮಿಚೆಲ್ ಪಾಟರ್ನರ್‍ ಶಿಪ್ ಆಟದಿಂದ ನ್ಯೂಜಿಲ್ಯಾಂಡ್ ಆತ್ಮವಿಶ್ವಾಸ ಸಹ ಹೆಚ್ಚಾಗಿತ್ತು. ಮತ್ತೇ ಮೊಹಮದ್ ಶಮಿ ದಾಳಿ ಮಾಡಿದರು. ಕೇನ್ ವಿಲಿಯಮ್ಸ್ 69 ರನ್ ಸಿಡಿಸಿ ನಿರ್ಗಮಿಸಿದರು. ಡರಿಲ್ ಮಿಚೆಲ್ ಹಾಗೂ ಗ್ಲೇನ್ ಫಿಲಿಪ್ಸ್ ಪಾಟರ್ನರ್‍ ಶಿಪ್ ಬೂಮ್ರಾ ಬ್ರೇಕ್ ಮಾಡಿದರು. ಆದರೆ ಡರಿಲ್ ಮಿಚೆಲ್ ಭಾರತಕ್ಕೆ ಆತಂಕ ಹೆಚ್ಚಿಸುತ್ತಲೇ ಇದ್ದರು. ಆದರೆ ಮೊಹಮದ್ ಶಮಿ ಮಿಚೆಲ್ ವಿಕೆಟ್ ಪಡೆದುಕೊಂಡರು. ಮಿಚೆಲ್, ಟಿಮ್ ಸೌಥಿ ಹಾಗೂ ಫರ್ಗ್ಯೂಸನ್ ವಿಕೆಟ್ ಕಬಳಿಸಿದ ಶಮಿ ನ್ಯೂಜಿಲ್ಯಾಂಡ್ ತಂಡವನ್ನು 48.5 ಓವರ್‍ ಗಳಲ್ಲಿ 327 ರನ್ ಗಳಿಗೆ ಆಲ್ ಔಟ್ ಮಾಡಿದರು. ಭಾರತ 70 ರನ್ ಗಳ ಗೆಲುವು ಪಡೆದುಕೊಂಡು ಫೈನಲ್ ಪ್ರವೇಶಿಸಿದೆ.

ಇನ್ನೂ ಈ ಮ್ಯಾಚ್ ನಲ್ಲಿ ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ 50 ಶತಕ ಸಿಡಿಸಿ ವಿಶ್ವದಾಖಲೆ ಮಾಡಿದ್ದಾರೆ. ಕೊಹ್ಲಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹಾಗೂ ಕ್ರಿಕೆಟ್ ಅಭಿಮಾನಿಗಳು ಶುಭಾಷಯಗಳನ್ನು ಕೋರಿದ್ದಾರೆ. ಇನ್ನೂ ಮೊಹಮದ್ ಶಮಿ ಸಹ 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಕಡಿಮೆ ಇನ್ನಿಂಗ್ಸ್ ನಲ್ಲಿ 50 ವಿಕೆಟ್ ಪಡೆದುಕೊಂಡ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. 17 ಇನ್ನಿಂಗ್ಸ್ ನಲ್ಲಿ 50 ವಿಕೆಟ್ ಗಳನ್ನು ಪಡೆದುಕೊಂಡು ರೆಕಾರ್ಡ್ ಮಾಡಿದ್ದಾರೆ.

Most Popular

To Top