ನಾಯಿ ಧಾಳಿ ಪ್ರಕರಣ, ಪೊಲೀಸರ ಮುಂದೆ ಹೇಳಿಕೆ ಕೊಟ್ಟ ದರ್ಶನ್, ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುವೆ ಎಂದ ನಟ….!

Follow Us :

ಕೆಲವು ದಿನಗಳ ಹಿಂದೆಯಷ್ಟೆ ನಟ ದರ್ಶನ್ ರವರ ನಾಯಿಗಳು ಮಹಿಳೆಯೊಬ್ಬರಿಗೆ ಕಚ್ಚಿದ್ದು, ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಹಾಜರಾದ ದರ್ಶನ್ ಕೆಲವೊಂದು ವಿಚಾರಗಳನ್ನು ತಿಳಿಸಿದ್ದಾರೆ. ನಮ್ಮ ಸಾಕು ನಾಯಿ ಮಹಿಳೆಗೆ ಕಚ್ಚಿದಾಗ ಅಂದು ಸಿಸಿಟಿವಿ ಕೆಲಸ ಮಾಡುತ್ತಿರಲಿಲ್ಲ. ನಮ್ಮ ನಾಯಿಗಳನ್ನು ನಮ್ಮ ಹುಡುಗರು ಸರಿಯಾಗಿ ನೋಡಿಕೊಂಡಿಲ್ಲ ಎಂದು ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.

ಅಮಿತಾ ಜಿಂದಾಲ್ ಎಂಬ ಮಹಿಳೆ ದರ್ಶನ್ ರವರ ಮನೆಯ ನಾಯಿ ಕಚ್ಚಿದೆ ಎಂದು ಅಮಿತಾ ಆರ್‍.ಆರ್‍. ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಅ.28 ರಂದು ದೂರುದಾರ ಮಹಿಳೆ ಅಮಿತಾ ಸ್ವರ್ಶ ಆಸ್ಪತ್ರೆಯಲ್ಲಿ ವಿಶ್ವಪಾಶ್ವರ್ಯವಾಯು ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಮಹಿಳೆ ಭಾಗವಹಿಸಲು ಆಸ್ಪತ್ರೆಯ ಬಳಿ ಹೋಗಿದ್ದರು. ಈ ಸಮಯದಲ್ಲಿ ಅಮಿತಾ ಕಾರನ್ನು ದರ್ಶನ್ ರವರ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದ ಮುಂಭಾಗದ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ವಾಪಸ್ಸು ಹೋಗಲು ಮಹಿಳೆ ಕಾರಿನ ಬಳಿ ಬಂದಾಗ ರಸ್ತೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮೂರು ನಾಯಿಗಳಿದ್ದು, ಅದರಲ್ಲಿ ಎರಡು ನಾಯಿಗಳನ್ನು ಕಟ್ಟಿಹಾಕಿದ್ದಾಗ ನಾಯಿಯೊಂದು ಮಹಿಳೆಯ ಮೇಲೆ ಎರಗಿ ನೆಲದ ಮೇಲೆ ಬಿದ್ದಿದೆ. ಕಟ್ಟಿ ಹಾಕಿದ ಮತ್ತೊಂದು ನಾಯಿ ಸಹ ಕಚ್ಚಲು ಮುಂದಾಗಿತ್ತಂತೆ. ನಾಯಿಗಳು ಕಚ್ಚುತ್ತವೆ ಎಂದು ಗೊತ್ತಿದ್ದರೂ ಸಹ ಆತ ನಾಯಿಗಳನ್ನು ಹಿಡಿದುಕೊಳ್ಳಲು ಮುಂದಾಗಿಲ್ಲ. ಬೇಜವಾಬ್ದಾರಿಯಿಂದ ನಾಯಿಗಳನ್ನು ಕಚ್ಚು ಬಿಟ್ಟಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ರವರಿಗೆ ಎರಡು ಬಾರಿ ನೊಟೀಸ್ ಸಹ ನೀಡಿದ್ದರು. ಬಳಿಕ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಹಾಜರಾದ ನಟ ದರ್ಶನ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ನಮ್ಮ ಮನೆಯ ಸಾಕು ನಾಯಿ ಕಚ್ಚಿದ ಸಮಯದಲ್ಲಿ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ನಾನು ಗುಜರಾತಿಗೆ ಶೂಟಿಂಗ್ ನಿಮಿತ್ತ ಹೋಗಿದ್ದೆ. ನಮ್ಮ ಹುಡುಗರಿಗೆ ನಾಯಿಗಳನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿದ್ದೆ, ಆದರೆ ಅವರು ಸರಿಯಾಗಿ ನೋಡಿಕೊಂಡಿಲ್ಲ. ಆದರೆ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಿ ಎಂತಲೂ ಹೇಳಿದ್ದೆ ಎಂದು ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಘಟನೆಯ ದಿನದ ಸಿಸಿಟಿವಿ ಪೂಟೇಜ್ ಸಹ ಪೊಲೀಸರು ಕೇಳಿದ್ದು, ಆ ದಿನ ಸಿಸಿಟಿವಿ ವರ್ಕ್ ಆಗಿಲ್ಲ ಎಂದೂ, ಆ ನಿವಾಸದಲ್ಲಿ ನಾನು ಹೆಚ್ಚಾಗಿ ಇರುವುದಿಲ್ಲ. ಹುಟ್ಟುಹಬ್ಬದ ಸಮಯದಲ್ಲಿ ಮಾತ್ರ ಸಿಸಿಟಿವಿ ಹಾಕಿಸುತ್ತಿದ್ದೆ. ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ನಟ ದರ್ಶನ್ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಆಗಿಮಿಸಿದ ಸಮಯದಲ್ಲಿ ಅಭಿಮಾನಿಗಳ ದಂಡು ಆಗಮಿಸಿತ್ತು. ಅನೇಕ ಅಭಿಮಾನಿಗಳು ಹೂಗುಚ್ಚಗಳನ್ನು ಹಿಡಿದು ಕಾದಿದ್ದರು. ಆದರೆ ಯಾರೋಂದಿಗೂ ಮಾತನಾಡದೇ ಸೀದಾ ಠಾಣೆಯೊಳಗೆ ಹೋಗಿ 15 ನಿಮಿಷದಲ್ಲಿ ವಿಚಾರಣೆ ಮುಗಿಸಿ ಹೊರಟರು. ಮಾದ್ಯಮಗಳೊಂದಿಗೂ ಸಹ ಅವರು ಮಾತನಾಡಿಲ್ಲ.