Film News

ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ವಿದೇಶಗಳಿಗೆ ತಾರಕರತ್ನ?

ತೆಲುಗು ಸಿನಿರಿಂಗದ ನಂದಮೂರಿ ಕುಟುಂಬದ ನಟ ತಾರಕರತ್ನ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಲೋಕೇಶ್ ಪಾದಯಾತ್ರೆ ನಡೆಯುತ್ತಿದ್ದಾಗ  ಈ ಘಟನೆ ಸಂಭವಿಸಿತ್ತು. ತಾರಕರತ್ನ ರವರಿಗೆ ಹೃದಯಾಘಾತ ಆಗಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಇದಾಗಿ ವಾರ ಕಳೆದರೂ ಸಹ ಇನ್ನೂ ತಾರಕರತ್ನ ಆಸ್ಪತ್ರೆಯಲ್ಲೇ ಇದ್ದಾರೆ. ಆತನ ಆರೋಗ್ಯದ ಬಗ್ಗೆ ಆಗಾಗ ಆಸ್ಪತ್ರೆಯ ಕಡೆಯಿಂದ ಸಮಾಚಾರ ದೊರೆಯುತ್ತಿದೆ. ಇದೀಗ ತಾರಕರತ್ನ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿದೇಶಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ತೆಲುಗುದೇಶಂ ಪಾರ್ಟಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಪಾದಯಾತ್ರೆ ಶುರು ಮಾಡಿದ್ದರು.  ಈ ಯಾತ್ರೆ ಕುಪ್ಪಂ ನಲ್ಲಿ ಆರಂಭವಾಗಿದ್ದು, ಈ ವೇಳೆ ನಂದಮೂರಿ ಕುಟುಂಬದ ಅನೇಕರು ಭಾಗಿಯಾಗಿದ್ದರು. ಈ ಯಾತ್ರೆಯಲ್ಲಿ ತಾರಕರತ್ನ ಸಹ ಭಾಗಿಯಾಗಿದ್ದರು. ಈ ವೇಳೆ ದಿಢೀರ್‍ ನೇ ತಾರಕರತ್ನ ಕುಸಿದು ಬಿದ್ದಿದ್ದರು. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಅವರನ್ನು ಬೆಂಗಳೂರಿಗೆ ರವಾನಿಸಿದರು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ಕರ್ನಾಟಕ ಸರ್ಕಾರದ ಮಂತ್ರಿಗಳೂ ಸಹ ತಾರಕರತ್ನರವರಿಗೆ ಹತ್ತಿರವಿದ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನೂ ಬೆಂಗಳೂರಿಗೆ ಜೂನಿಯರ್‍ ಎನ್.ಟಿ.ಆರ್‍ ಹಾಗೂ ನಂದಮೂರಿ ಕಲ್ಯಾಣ್ ರಾಮ್ ಸಹ ಬಂದಿದ್ದರು. ಇನ್ನೂ ನಂದಮೂರಿ ಬಾಲಕೃಷ್ಣ ರವರೂ ಸಹ ಹತ್ತಿರವಿದ್ದುಕೊಂಡೆ ತಾರಕರತ್ನ ಆರೋಗ್ಯದ ಬಗ್ಗೆ ನೋಡಿಕೊಳ್ಳುತ್ತಿದ್ದಾರೆ.

ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ತಾರಕರತ್ನ ಆರೋಗ್ಯದ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಿವೆ. ಈ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ನಂದಮೂರಿ ಕುಟುಂಬ ಸಹ ಹೇಳುತ್ತಿದ್ದಾರೆ. ಆದರೆ ತಾರಕರತ್ನ ಆರೋಗ್ಯ ಇನ್ನೂ ಕ್ಷೀಣವಾಗಿಯೇ ಇದೆ. ಆತ ಸಂಪೂರ್ಣವಾಗಿ ಗುಣ ಮುಖರಾಗಲು ಮತಷ್ಟು ಸಮಯ ಬೇಕಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಅವಶ್ಯಕತೆ ಬಿದ್ದರೇ ವಿದೇಶಗಳಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಆತನಿಗೆ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿದೆ.  ಇಲ್ಲಿ ಗುಣಮುಖರಾಗದೇ ಇದ್ದರೇ ಆತನನ್ನು ವಿದೇಶಗಳಿಗೆ ಕರೆದುಕೊಂಡು ಹೋಗಬಹುದು ಎಂದು ಸಹ ಹೇಳಲಾಗುತ್ತಿದೆ.

ಇನ್ನೂ ತಾರಕರತ್ನ ಮೆದುಳಿನ ಸ್ಕ್ಯಾನ್ ಸಹ ಮಾಡಿದ್ದು, ಬರುವ ವರದಿಯನ್ನು ಆಧರಿಸಿ ಅವಶ್ಯಕತೆ ಬಿದ್ದರೇ ಆತನನ್ನು ವಿದೇಶಗಳಿಗೆ ಕರೆದುಕೊಂಡು ಹೋಗಬಹುದು ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ತಾರಕರತ್ನ ಶೀಘ್ರವಾಗಿ ಗುಣಮುಖರಾಗಲಿ ಎಂದು ನಂದಮೂರಿ ಅಭಿಮಾನಿಗಳೂ ಸೇರಿದಂತೆ ಅನೇಕರು ಪ್ರಾರ್ಥನೆ ಮಾಡುತ್ತಿದ್ದಾರೆ.

Most Popular

To Top