Film News

ರಸ್ತೆ ಮೇಲೆ ವಾಂತಿ ಮಾಡಿಕೊಂಡರೇ ಅದನ್ನು ಚಿಕ್ಕಪ್ಪ ಕ್ಲೀನ್ ಮಾಡಿದ್ರು ಎಂದ ರಾಮ್ ಚರಣ್…!

ತೆಲುಗಿನಲ್ಲಿ ಇತ್ತೀಚಿಗೆ ತುಂಬಾ ಫೇಮಸ್ ಆಗುತ್ತಿರುವ ಕಿರುತೆರೆಯ ಶೋಗಳಲ್ಲಿ ಅನ್ ಸ್ಟಾಪಬುಲ್ ವಿತ್ ಎನ್.ಬಿ.ಕೆ ಶೋ ಒಂದಾಗಿದೆ. ಈ ಶೋ ಅನ್ನು ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುತ್ತಾರೆ. ಈ ಶೋ ನಲ್ಲಿ ಇದೀಗ ಪವನ್ ಕಲ್ಯಾಣ್ ಭಾಗಿಯಾಗಿದ್ದು, ಈ ಎಪಿಸೋಡ್ ನಂಬರ್‍ 1 ಆಗಿ ಟ್ರೆಂಡಿಂಗ್ ನಲ್ಲಿದೆ. ಬಿಡುಗಡೆಯಾದ ಕಡಿಮೆ ಸಮಯದಲ್ಲೇ ಮಿಲಿಯನಗಟ್ಟಲೇ ವ್ಯೂವ್ಸ್ ಗಳಿಸಿದೆ. ಇದೀಗ ಈ ಶೋ ನಲ್ಲಿ ನಟ ರಾಮ್ ಚರಣ್ ಸಹ ಭಾಗಿಯಾಗಿದ್ದು ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.  ಇದೀಗ ರಾಮ್ ಚರಣ್ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುವ ಅನ್ ಸ್ಟಾಪಬುಲ್ ವಿತ್ ಎನ್.ಬಿ.ಕೆ ಇತ್ತೀಚಿಗೆ ಸಖತ್ ಸದ್ದು ಮಾಡುತ್ತಿರುವ ಶೋಗಳಲ್ಲಿ ಒಂದಾಗಿದೆ. ಈ ಶೋ ನಲ್ಲಿ ಇದೀಗ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಸಹ ಅತಿಥಿಯಾಗಿ ಭಾಗಿಯಾಗಿದ್ದಾರೆ. ಈ ಎಪಿಸೋಡ್ ಎರಡು ಭಾಗಗಳಂತೆ ಪ್ರಸಾರವಾಗಲಿದೆ. ಇದೀಗ ಮೊದಲ ಭಾಗ ರಿಲೀಸ್ ಆಗಿದೆ. ಆಹಾ ಒಟಿಟಿನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಶೋನಲ್ಲಿ ಪವನ್ ಕಲ್ಯಾಣ್ ಸಹ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಕಾರ್ಯಕ್ರಮದ ಭಾಗವಾಗಿ ರಾಮ್ ಚರಣ್ ಗಿ ಕರೆ ಮಾಡಿದ ಬಾಲಕೃಷ್ಣ ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ಇದೀಗ ರಾಮ್ ಚರಣ್ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಂದಮೂರಿ ಬಾಲಕೃಷ್ಣ ನಟ ರಾಮ್ ಚರಣ್ ಗೆ ಕರೆ ಮಾಡಿ ನಿಮ್ಮ ಚಿಕ್ಕಪ್ಪ ನೊಂದಿಗೆ ನಿನಗಿರುವಂತಹ ಅನುಬಂಧ ಹೇಗೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರಾಮ್ ಚರಣ್  ನನಗೆ ಹಾಗೂ ನನ್ನ ಚಿಕ್ಕಪ್ಪನೊಂದಿಗೆ ತುಂಭಾ ಒಳ್ಳೆಯ ಅನುಬಂಧವಿದೆ. ನಾನು ಚಿಕ್ಕಂದಿನಲ್ಲಿ ತಾಯಿಗಿಂತ ಚಿಕ್ಕಪ್ಪನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದೆ ಎಂದಿದ್ದಾರೆ. ಬಳಿಕ ನಿಮ್ಮ ಚಿಕ್ಕಪ್ಪನ ಬಗ್ಗೆ ಯಾರಿಗೂ ತಿಳಿಯದ ಸೀಕ್ರೆಟ್ ಹೇಳು ಎಂದು ಬಾಲಯ್ಯ ಕೇಳಿದ್ದಾರೆ. ಇದಕ್ಕೆ ನಮ್ಮ ಚಿಕ್ಕಪ್ಪನಿಗೆ ಹೈದರಾಬಾದ್ ಬಿರಿಯಾನಿ ಎಂದರೇ ತುಂಬಾನೆ ಇಷ್ಟ. ವಾರ ಪೂರ್ತಿ ಬಿರಿಯಾನಿ ತಿಂದಿದ್ದೇವು ಎಂದು ಚರಣ್ ಹೇಳಿದ್ದಾರೆ. ಮತ್ತೆ ಬಾಲಯ್ಯ ಪ್ರಶ್ನೆ ಕೇಳಿದ್ದಾರೆ. ನಿಮ್ಮ ತಂದೆ ಚಿರಂಜೀವಿಗೆ ತಿಳಿಯದ ನೀವಿಬ್ಬರೂ ಮಾಡಿದ ಫನ್ನಿ ಕೆಲಸ ಏನು ಎಂದು ಪ್ರಶ್ನಿಸಿದ್ದಾರೆ. ಬಳಿಕ ಪವನ್ ಕಲ್ಯಾಣ್ ಸಿಂಗಪೂರ್‍ ಟ್ರಿಪ್ ಬಗ್ಗೆ ಹೇಳು ಎಂದು ಹಿಂಟ್ ಕೊಟ್ಟಿದ್ದಾರೆ. ನಾನು ಸಿಂಗಪೂರ್‍ ನಲ್ಲಿ ಚಿಕ್ಕಪ್ಪನಿಗೆ ತುಂಬಾ ನರಕ ತೋರಿಸಿದ್ದೆ. ಅಮ್ಮ ನಮ್ಮೊಂದಿಗೆ ಇಲ್ಲ ಎಂದು ರಸ್ತೆ ಮೇಲೆ ಫ್ರೆಂಚ್ ಪ್ರೈಸ್, ಬರ್ಗರ್‍ ತಿಂದು ರಸ್ತೆಯಲ್ಲೇ ವಾಂತಿ ಮಾಡಿಕೊಂಡಾಗ ಚಿಕ್ಕಪ್ಪ ಕ್ಲೀನ್ ಮಾಡಿದ್ದರು ಎಂದು ರಾಮ್ ಚರಣ್ ಹೇಳಿದ್ದಾರೆ.

ಈ ಸಮಯದಲ್ಲಿ ನಿನ್ನ ವಯಸ್ಸು ಎಷ್ಟು ಎಂತಲೂ ಬಾಲಯ್ಯ ಕೇಳಿದ್ದಾರೆ ಅದಕ್ಕೆ ನನಗೆ ನಾಲ್ಕೈದು ವರ್ಷಗಳು ಇರಬಹುದು ಎಂದು ಚರಣ್ ಉತ್ತರ ನೀಡಿದ್ದಾರೆ. ಇದಕ್ಕೆ ಬಾಲಕೃಷ್ಣ ಐದು ವರ್ಷದ ಪುಟ್ಟ ಮಗುವನ್ನು ಕರೆದುಕೊಂಡು ಸಿಂಗಪೂರ್‍ ಗೆ ಹೋಗುವುದು ಏನಮ್ಮ ಎಂದು ಫನ್ನಿಯಾಗಿ ಆಟ ಆಡಿಸಿದ್ದಾರೆ. ಇನ್ನೂ ರಾಮ್ ಚರಣ್ ಪವನ್ ಕಲ್ಯಾಣ್ ರವರ ಬಗ್ಗೆ ನೀಡಿದ ಹೇಳಿಕೆಗಳು ಇದೀಗ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಶೋ ಸ್ಟ್ರೀಮೀಂಗ್ ಆಗಿದ 14 ಗಂಟೆಗಳಲ್ಲೇ ನೂರು ಮಿಲಿಯನ್ ವೀವ್ಸ್ ಕಂಡು ದಾಖಲೆ ಸೃಷ್ಟಿಸಿದೆ.

Most Popular

To Top