ಅಭಿಮಾನಿಗೆ ಪ್ರಪೋಸ್ ಮಾಡುವ ಪಾಠ ಹೇಳಿಕೊಟ್ಟ ರಶ್ಮಿಕಾ, ವೈರಲ್ ಆದ ವಿಡಿಯೋ…!

ಕನ್ನಡದ ಸಿನೆಮಾದ ಮೂಲಕ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿರುತ್ತಾರೆ. ಇನ್ನೂ ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವರು…

ಕನ್ನಡದ ಸಿನೆಮಾದ ಮೂಲಕ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿರುತ್ತಾರೆ. ಇನ್ನೂ ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವರು ರಶ್ಮಿಕಾ ನಡೆಯನ್ನು ಟೀಕಿಸಿದರೇ, ಕೆಲವರು ಬೆಂಬಲ ನೀಡುತ್ತಿರುತ್ತಾರೆ. ಇನ್ನೂ ರಶ್ಮಿಕಾ ಇತ್ತಿಚಿಗೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಅಭಿಮಾನಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆತನೊಂದಿಗೆ ಮಾತನಾಡುತ್ತಾ ಲವ್ ಪ್ರಪೋಸ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ರಶ್ಮಿಕಾ.

ಸೌತ್ ಅಂಡ್ ನಾರ್ತ್ ನಲ್ಲಿ ಬಹುಬೇಡಿಕೆಯುಳ್ಳ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದರು. ಇನ್ನೂ ರಶ್ಮಿಕಾ ಬಗ್ಗೆ ಸದಾ ಟ್ರೋಲ್ ಗಳು ಎದುರಾಗುತ್ತಲೇ ಇರುತ್ತವೆ. ಆದರೆ ಆ ಟ್ರೋಲ್ ಗಳಿಗೆ ಆಕೆ ಕಿವಿಗೊಡುವುದೇ ಇಲ್ಲ. ಆದರೆ ಆಕೆ ಯಾವುದಾದರೂ ಕಾರ್ಯಕ್ರಮಗಳಲ್ಲಿ ಕಾಣಿಸಿದರೇ ಸೆಲ್ಫಿಗಾಗಿ ಮುಗಿಬೀಳುತ್ತಿರುತ್ತಾರೆ. ಈ ಹಾದಿಯಲ್ಲೇ ಕಾರ್ಯಕ್ರಮದವೊಂದರಲ್ಲಿ ಭಾಗಿಯಾಗಲು ಬಂದಿದ್ದ ರಶ್ಮಿಕಾ ಜೊತೆಗೆ ಸೆಲ್ಫಿಗಾಗಿ ಓರ್ವ ಅಭಿಮಾನಿ ಬಂದಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಭಿಮಾನಿಗೆ ಪ್ರಪೋಸ್ ಮಾಡುವುದು ಹೇಗೆ ಎಂದು ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಅಭಿಮಾನಿ ರಶ್ಮಿಕಾ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದಾನೆ. ಈ ವೇಳೆ ರಶ್ಮಿಕಾ ಜೊತೆಗೆ ಆತ ಮಾತನಾಡಿದ್ದಾರೆ. ಅಭಿಮಾನಿ ರಶ್ಮಿಕಾಗೆ ಯಾವುದಾದರೂ ಹುಡುಗಿಗೆ ಪ್ರಪೋಸ್ ಮಾಡಬೇಕು ಎಂಬುದನ್ನು ತೆಲುಗಿನಲ್ಲಿ ಹೇಗೆ ಹೇಳಬೇಕು ಎಂದು ಕೇಳಿದ್ದಾನೆ. ಅದಕ್ಕೆ ರಶ್ಮಿಕಾ ಉತ್ತರ ನೀಡಿದ್ದು, ಯಾರಾದರೂ ಇದ್ದಾರಾ ಎಂದು ನಗುತ್ತಾ ಕೇಳಿದ್ದಾರೆ. ಆದರೂ ಸಹ ಅಭಿಮಾನಿ ಹೇಳಿ ಏನು ಹೇಳಬೇಕು ಎಂದು ಪೀಡಿಸಿದ್ದಾನೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ನೀವು ಚೆನ್ನಾಗಿ ಕಾಣುತ್ತಿದ್ದೀರಾ, ಐ ಲವ್ ಯೂ ಎಂದು ಹೇಳಬೇಕು ಎಂದು ಪ್ರಪೋಸ್ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

https://www.instagram.com/p/CoDGYWrIXsj/

ಸದ್ಯ ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ, ಆಕೆಯ ಕೈಯಲ್ಲಿ ಪುಷ್ಪಾ-2 ಪ್ಯಾನ್ ಇಂಡಿಯಾ ಸಿನೆಮಾ ಇದೆ. ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲೂ ಸಹ ಬ್ಯುಸಿಯಾಗಿದ್ದಾರೆ.  ಈ ವರ್ಷದ ಆರಂಭದಲ್ಲಿ ಆಕೆ ಕಾಲಿವುಡ್ ಸ್ಟಾರ್‍ ನಟ ವಿಜಯ್ ಜೊತೆಗೆ ವಾರಿಸು ಸಿನೆಮಾ ಹಾಗೂ ಬಾಲಿವುಡ್ ನ ಮಿಷನ್ ಮಜ್ನು ಎಂಬ ಸಿನೆಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಎರಡೂ ಸಿನೆಮಾಗಳು ಅಷ್ಟೊಂದು ಸಕ್ಸಸ್ ಆಗದೇ ಇದ್ದರು ಒಳ್ಳೆಯ ಕಲೆಕ್ಷನ್ ಮಾಡಿದೆ.