ನಿನ್ನ ನೆನಪುಗಳಲ್ಲೇ ಜೀವನ ಪರ್ಯಂತ ಬದುಕು ಬಿಡುತ್ತೀನಿ ಎಂದ ದಿವಂಗತ ನಟ ತಾರಕರತ್ನ ಪತ್ನಿ ಅಲೇಖ್ಯ…..!

ಟಾಲಿವುಡ್ ನ ನಂದಮೂರಿ ಕುಟುಂಬದ ತಾರಕರತ್ನ ಅನಾರೋಗ್ಯದಿಂದ ಫೆ.18 ರಂದು ಇಹ ಲೋಕ ತ್ಯೆಜಿಸಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿ ಸುಮಾರು ದಿನಗಳ ಕಾಲ ಚಿಕಿತ್ಸೆಯನ್ನು ಸಹ ಪಡೆದುಕೊಂಡರು. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರು ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ಪ್ರಾರ್ಥನೆಗಳನ್ನು ಮಾಡಿದರು. ಆದರೆ ವಿಧಿಯಾಟಕ್ಕೆ ತಾರಕರತ್ನ ಬಲಿಯಾದರು. ಇನ್ನೂ ತಾರಕರತ್ನರವರ ಮರಣವನ್ನು ಇನ್ನೂ ಆತನ ಪತ್ನಿ ಅಲೇಖ್ಯರೆಡ್ಡಿ ಮರೆತಿಲ್ಲ. ಎಮೋಷನಲ್ ಆಗಿ ಪೋಸ್ಟ್ ಗಳ ಮೂಲಕ ತನ್ನ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.

ನಂದಮೂರಿ ತಾರಕರತ್ನ ಮರಣದ ಬಳಿಕ ಆತನ ಪತ್ನಿ ಅಲೇಖ್ಯಾರೆಡ್ಡಿ ಒಂಟಿಯಾಗಿದ್ದಾರೆ. ಆತನನ್ನು ನೆನಪಿಸಿಕೊಂಡು ಸದಾ ನೋವು ಪಡುತ್ತಿದ್ದಾರೆ. ತಾರಕರತ್ನ ತನ್ನ ಜೀವನದಲ್ಲಿ ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲಾಗದೆ ನೋವನ್ನು ಪಡುತ್ತಿದ್ದಾರೆ. ಇನ್ನೂ ಸೊಷಿಯಲ್ ಮಿಡಿಯಾ ಮೂಲಕ ತನ್ನ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಆಕೆ ತಾರಕರತ್ನ ರವರ ಮೇಲಿನ ಪ್ರೀತಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ತನ್ನ ಪ್ರೀತಿಯನ್ನು ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ. ಅಲೇಖ್ಯಾ ತನ್ನ ಪತಿಯೊಂದಿಗೆ ಇರುವಂತಹ ಪೊಟೋ ಒಂದನ್ನು ಹಂಚಿಕೊಂಡು ಭಾವೋದ್ವೇಗದ ಕ್ಯಾಪ್ಷನ್ ಹಾಕಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅಲೇಖ್ಯಾ ರೆಡ್ಡಿ ಹಂಚಿಕೊಂಡ ಪೋಸ್ಟ್ ನಲ್ಲಿರುವಂತೆ ಈ ಜೀವನದಲ್ಲಿ ನೀನು ಹಾಗೂ ನಾನು ಮಾತ್ರ. ನೀವು ನೀಡಿದಂತಹ ಜ್ಞಾಪಕಗಳೊಂದಿಗೆ ಇಡೀ ಜೀವನ ಕಳೆಯುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ನಿನ್ನನ್ನು ಪ್ರೀತಿ ಮಾಡುತ್ತಲೇ ಇರುತ್ತೇನೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಇನ್ನೂ ಅಲೇಖ್ಯಾ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೋಸ್ಟ್ ಅನೇಕರ ಹೃದಯ ಕರಗುವಂತೆ ಮಾಡಿದೆ. ಸೊಷಿಯಲ್ ಮಿಡಿಯಾದಲ್ಲಿ ಜೈ ಬಾಲಯ್ಯ, ನಂದಮೂರಿ ಎಂಬ ಹ್ಯಾಷ್ ಟ್ಯಾಗ್ ಮೂಲಕ ಪೋಸ್ಟ್ ಮಾಡಿದ್ದು, ನಂದಮೂರಿ ಅಭಿಮಾನಿಗಳು ಈ ಪೋಸ್ಟ್ ಗೆ ರಿಯಾಕ್ಟ್ ಆಗುತ್ತಿದ್ದಾರೆ. ಅಲೇಖ್ಯಾಗೆ ಧೈರ್ಯ ತುಂಬುತ್ತಿದ್ದಾರೆ. ತಾರಕರತ್ನ ನಿಮ್ಮೊಂದಿಗೆ ಇರುತ್ತಾರೆ.  ನಿಮ್ಮನ್ನು ನೋಡುತ್ತಲೇ ಇರುತ್ತಾರೆ ಎಂದು ಧೈರ್ಯ ತುಂಬುವ ಮಾಡುಗಳನ್ನು ಹೇಳುತ್ತಿದ್ದಾರೆ.

ತಾರಕರತ್ನ ಜೊತೆಗೆ ಅಲೇಖ್ಯಾಗೆ ಎರಡನೇ ಮದುವೆ. ಕಳೆದ 2012 ರಲ್ಲಿ ಅಲೇಖ್ಯಾ ರೆಡ್ಡಿ ಹಾಗೂ ತಾರಕರತ್ನ ದೇವಾಲಯದಲ್ಲಿ ವಿವಾಹವಾದರು. ಅವರಿಗೆ ಮೂರು ಮಂದಿ ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಈ ಮಕ್ಕಳ ಜವಾಬ್ದಾರಿಯನ್ನು ನಂದಮೂರಿ ಬಾಲಕೃಷ್ಣ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ದಿವಂಗತ ನಟ ತಾರಕರತ್ನ ಮರಣದ ಸುದ್ದಿಯನ್ನು ಇಂದಿಗೂ ಸಹ ಅವರ ಅಭಿಮಾನಿಗಳು ಜೀರ್ಣಿಸಿಕೊಳ್ಳುತ್ತಿಲ್ಲ ಎಂದೇ ಹೇಳಲಾಗುತ್ತಿದೆ.