Film News

ಒಂದೇ ಕಾರಿನಲ್ಲಿ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ, ವೈರಲ್ ಆದ ಪೊಟೋ….!

ಸಿನೆಮಾ ಸೆಲೆಬ್ರೆಟಿಗಳ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಆಸಕ್ತರಾಗಿರುತ್ತಾರೆ. ಅವರ ಬಗ್ಗೆ ಯಾವುದೇ ಸುದ್ದಿ ಬರಲಿ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಹರಿದಾಡುತ್ತಿರುತ್ತದೆ. ಹೊಸವರ್ಷದ ಆಚರಣೆಯ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಪಾರ್ಟಿಯಲ್ಲಿ ಕಿಸ್ ಮಾಡಿಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಅಲ್ಲಿಂದ ಅವರಿಬ್ಬರ ನಡುವೆ ಗಾಸಿಪ್ ಗಳು ಹರಿದಾಡುತ್ತಲೇ ಇದೆ. ಇದೀಗ ಮತ್ತೊಮ್ಮೆ ಇಬ್ಬರೂ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದು, ಈ ಪೊಟೋ ಸಖತ್  ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ತಮನ್ನಾ ಸುಮಾರು ದಿನಗಳಿಂದ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯೊಂದು ಹರಿದಾಡುತ್ತಿದೆ. ಇನ್ನೂ ಈ ಬಗ್ಗೆ ಅನೇಕ ಬಾರಿ ತಮನ್ನಾ ಕೇವಲ ರೂಮರ್‍ ಗಳೆಂದು ತಳ್ಳಿಹಾಕಿದ್ದಾರೆ. ಆದರೆ ಆಕೆ ಆಗಾಗ ವಿಜಯ್ ವರ್ಮಾ ಜೊತೆಗೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೂಮರ್‍ ಗಳು ಮತಷ್ಟು ಹರಿದಾಡುತ್ತಿವೆ. ಇದೀಗ ತಮನ್ನಾ ಹಾಗೂ ವಿಜಯ್ ವರ್ಮಾ ಮುಂಬೈನಲ್ಲಿ ಒಂದೇ ಕಾರಿನಲ್ಲಿ ಡಿನ್ನರ್‍ ಡೇಟ್ ಗೆ ಹೋಗಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ಪೊಟೊಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.  ಈ ಹಿನ್ನೆಲೆಯಲ್ಲಿ ಅವರಿಬ್ಬರು ಪ್ರೀತಿಯಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ.

ಸುಮಾರು ದಿನಗಳಿಂದ ಮಿಲ್ಕಿ ಬ್ಯೂಟಿ ತಮನ್ನಾ ಮದುವೆ ಯಾವಾಗ ಎಂಬ ಪ್ರಶ್ನೆಗಳು ಕೇಳಿಬರುತ್ತಲೇ ಇತ್ತು. ಈ ವರ್ಷದ ಸಂಭ್ರಮಾಚರಣೆಯ ವೇಳೆ ತಮನ್ನಾ ಗೋವಾದಲ್ಲಿ ವಿಜಯ್ ವರ್ಮಾ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಕಿಸ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಪೊಟೋಗಳು ಹಾಗೂ ವಿಡಿಯೋಗಳು ಸಖತ್ ವೈರಲ್ ಆಗಿತ್ತು. ಬಳಿಕ ಅವರಿಬ್ಬರ ಪ್ರೀತಿಯ ಬಗ್ಗೆ ಬಹಿರಂಗವಾಯ್ತು ಎಂದು ಹೇಳಲಾಗುತ್ತಿದೆ. ಆದರೆ ತಮನ್ನಾ ಮಾತ್ರ ಈ ಬಗ್ಗೆ ಅನೇಕ ಬಾರಿ ಎಲ್ಲವೂ ಸುಳ್ಳು ಸುದ್ದಿಗಳು. ಸಿನೆಮಾದಲ್ಲಿ ನಟಿಸಿದ ಮಾತ್ರಕ್ಕೆ ಲವರ್ಸ್ ಎಂದು ಹೇಳಬಹುದೇ ಎಂದು ರಿಯಾಕ್ಟ್ ಆಗಿದ್ದರು. ಆದರೆ ಆಕೆ ವಿಜಯ್ ವರ್ಮಾ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಏನು ಇಲ್ಲ ಎಂದರೇ ಜಂಟಿಯಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ತಮನ್ನಾ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಜೊತೆಗೆ ಭೋಳಾಶಂಕರ್‍, ತಮಿಳಿನಲ್ಲಿ ರಜನಿಕಾಂತ್ ಜೊತೆಗೆ ಜೈಲರ್‍, ಹಿಂದಿಯಲ್ಲಿ ನವಾಜುದ್ದಿನ್ ಸಿದ್ದಿಖಿ ಜೊತೆಗೆ ಭೋಲೆ ಚುಡಿಯನ್ ಸಿನೆಮಾಗಳಲ್ಲಿ ಹಾಗೂ ವಿಜಯ್ ವರ್ಮಾ ಜೊತೆಗೆ ಗಲ್ಲಿ ಭಾಯ್, ಪಿಂಕ್, ಘೋಸ್ಟ್ ಸ್ಟೋರೀಸ್ ಸೇರಿದಂತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top