Film News

ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ನಟಿ ಲಾವಣ್ಯ ತ್ರಿಪಾಠಿ….!

ಸೌತ್ ಸಿನಿರಂಗದ ನಟಿ ಲಾವಣ್ಯ ಅಂದಾಲ ರಾಕ್ಷಸಿ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನುರಂಜಿಸಿದ್ದಾರೆ. ಜಯ ಅಪಜಯಗಳನ್ನು ಕಿವಿಗೆ ಹಾಕಿಕೊಳ್ಳದೇ ಸಾಲು ಸಿನೆಮಾಗಳನ್ನು ಮಾಡುವ ಮೂಲಕ ಹಾಗೂ ಒಳ್ಳೆಯ ಪಾತ್ರಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಇದೀಗ ಆಕೆ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ವೈರಲ್ ಆಗುತ್ತಿವೆ.

ಅಂದಾಲ ರಾಕ್ಷಸಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ನಟಿ ಲಾವಣ್ಯ ತ್ರಿಪಾಠಿ ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದರು. ಈ ಸಿನೆಮಾದಲ್ಲಿ ಆಕೆಯ ಅಭಿನಯ ಎಲ್ಲರ ಗಮನ ಸೆಳೆದಿದೆ ಎನ್ನಬಹುದಾಗಿದೆ. ಅದರಲ್ಲೂ ಆಕೆಯ ಕ್ಯೂಟ್ ಅಂಡ್ ಫನ್ನಿ ಡೈಲಾಗ್ ಗಳು ಅನೇಕರ ಹೃದಯ ಗೆದ್ದಿದೆ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ನಟಿಯಾಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಆಕೆ ಸ್ಟಾರ್‍ ನಟಿಯಾಗುವುದರಲ್ಲಿ ವಿಫಲರಾದರು. ಆದರೂ ಸಹ ಆಕೆಗೆ ಒಳ್ಳೆಯ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಸಿಗುತ್ತಿವೆ. ಇನ್ನೂ ಲಾವಣ್ಯ ಸಿನೆಮಾಗಳಲ್ಲಿ ಗ್ಲಾಮರ್‍, ನಟನೆಯ ಪರವಾಗಿ ಅಭಿಮಾನಿಗಳನ್ನು ಮಾತ್ರ ಎಂದಿಗೂ ನಿರಾಸೆಪಡಿಸಿಲ್ಲ ಎನ್ನಬಹುದಾಗಿದೆ. ಇದೀಗ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ ಅಲ್ಲಿ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಟಿ ಲಾವಣ್ಯ ತ್ರಿಪಾಠಿ ಹೈದರಾಬಾದ್ ನ ಎಲ್.ಬಿ ನಗರನಲ್ಲಿ ಮಾರ್ಗಂ ರಾಜೇಶ್ ಎಂಬ ವ್ಯಕ್ತಿ ಅನಾಥಾಶ್ರಮ ಒಂದನ್ನು ನಡೆಸುತ್ತಿದ್ದಾರೆ. ಈ ಅನಾಥಾಶ್ರಮಕ್ಕೆ ಹೋದ ಲಾವಣ್ಯ ತ್ರಿಪಾಠಿ ಅಲ್ಲಿನ ಮಕ್ಕಳೊಂದಿಗೆ ಸಂಭ್ರಮಿಸಿದ್ದಾರೆ. ಅಲ್ಲಿ ಮಕ್ಕಳೊಂದಿಗೆ ಮಾತನಾಡುತ್ತಾ ಅವರೊಂದಿಗೆ ಪ್ರೀತಿಯಿಂದ ಸಮಯ ಕಳೆದಿದ್ದಾರೆ. ಜೊತೆಗೆ ಕೆಲವೊಂದು ಪೊಟೋಗಳನ್ನು ಸಹ ತೆಗೆದುಕೊಂಡಿದ್ದು. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಅಲ್ಲಿನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಮಕ್ಕಳೊಂದಿಗೆ ಆಕೆ ಸಹ ಊಟ ಸವಿದಿದ್ದಾರೆ. ಇನ್ನೂ ಕೆಲವೊಂದು ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಸಹ ತಿಳಿದು ಅವರಿಗೆ ಬೇಕಾದ ಔಷಧಿಗಳನ್ನು ಸಹ ನೀಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸದ್ಯ ಲಾವಣ್ಯ ತ್ರಿಪಾಠಿಗೆ ಅವಕಾಶಗಳು ಹೆಚ್ಚಾಗಿ ಬರುತ್ತಿಲ್ಲ. ಸ್ಟಾರ್‍ ನಟರು ಆಕೆಗೆ ಅವಕಾಶಗಳ್ನು ನೀಡುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಆಕೆಗೆ ಅವಕಾಶಗಳು ಬರುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಆಕೆಯ ಖಾತೆಯಲ್ಲಿ ಭಲೆ ಭಲೆ ಮಗಾಡಿವೋಯ್, ಸೊಗ್ಗಾಡೆ ಚಿನ್ನಿನಾಯನ, ದೂಸುಕೆಳ್ತಾ ಸೇರಿದಂತೆ ಕೆಲವೊಂದು ಹಿಟ್ ಸಿನೆಮಾಗಳಿವೆ.

Most Popular

To Top