ಎರಡನೇ ಮದುವೆ ರೂಮರ್ ಬಗ್ಗೆ ರಿಯಾಕ್ಟ್ ಆದ ಮೀನಾ, ಧನುಷ್, ರಾಜಕಾರಣಿ ಅಂದ್ರು ಅನೇಕರೊಂದಿಗೆ ಲಿಂಕ್ ಮಾಡಿದ್ರು ಎಂದ ಸೀನಿಯರ್ ನಟಿ….!

Follow Us :

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ಬಗ್ಗೆ ಹೆಚ್ಚು ಪರಿಚಯದ ಅವಶ್ಯಕತೆಯಿಲ್ಲ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಹಿರೋಯಿನ್ ಆಗಿ ಫೇಂ ಪಡೆದುಕೊಂಡು, ಸೌತ್ ಸಿನಿರಂಗದ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದರು. ಸುಮಾರು ಮೂರು ದಶಕಗಳ ಕಾಲ ಸ್ಟಾರ್‍ ನಟಿಯಾಗಿದ್ದರು. ಕೆರಿಯರ್‍ ಉತ್ತುಂಗದಲ್ಲಿರುವಾಗಲೇ ಉದ್ಯಮಿ ವಿದ್ಯಾಸಾಗರ್‍ ಎಂಬಾತನನ್ನು ಮದುವೆಯಾದರು. ಅವರಿಗೆ ನೈನಿಕಾ ಎಂಬ ಹೆಣ್ಣು ಮಗಳಿದ್ದಾಳೆ. ಕಳೆದ ವರ್ಷ ಅನಾರೋಗ್ಯದಿಂದ ಮೀನಾ ಪತಿ ಮೃತಪಟ್ಟರು. ಆ ನೋವಿನಿಂದ ಹೊರಬಂದ ಮೀನಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ. ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೀನಾ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ. ನನ್ನ ಪತಿಗೆ ಲಂಗ್ಸ್ ಟ್ರಾನ್ಸ್ ಫ್ಲಾಂಟ್ ಮಾಡಬೇಕಾಗಿತ್ತು. ಚಿಕಿತ್ಸೆ ತಡವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಜಾರಿ ಆತ ಮೃತಪಟ್ಟ. ನನ್ನ ಪತಿ ಇಲ್ಲದ ನೋವಿನಿಂದ ಈಗಷ್ಟೆ ಚೇತರಿಕೆಯಾಗುತ್ತಿದ್ದೇನೆ. ಆತ ಮೃತಪಟ್ಟ ಎರಡು ತಿಂಗಳಲ್ಲೇ ನಾನು ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಪ್ರಚಾರ ಶುರು ಮಾಡಿದರು. ನಟ ಧನುಷ್ ಜೊತೆಗೆ ಲಿಂಕ್ ಮಾಡಿದ್ದರು, ಬಳಿಕ ರಾಜಕಾರಣಿಯೊಬ್ಬರೊಂದಿಗೆ ಲಿಂಕ್ ಮಾಡಿದ್ದರು. ಆ ಸುದ್ದಿಯನ್ನು ಕೇಳಿ ನನ್ನ ಫ್ಯಾಮಿಲಿ ತುಂಬಾನೆ ನೋವನ್ನು ಅನುಭವಿಸುತ್ತದೆ ಎಂದು ಯೋಚನೆ ಮಾಡಿರಲಿಲ್ಲ. ಒಂದು ಸಮಯದಲ್ಲಿ ನನಗೆ ತುಂಬಾನೆ ಕೋಪ ಸಹ ಬಂದಿತ್ತು. ಮಿಡಿಯಾ ಮುಂದೆ ಬರೋಕೂ ಸಹ ಇಷ್ಟಪಡಲಿಲ್ಲ. ಸದ್ಯ ನನಗೆ ಮತ್ತೆ ಮದುವೆಯಾಗಬೇಕೆಂಬ ಉದ್ದೇವಿಲ್ಲ. ಹಾಗಂದ ಮಾತ್ರಕ್ಕೆ ಜೀವನ ಪೂರ್ತಿ ಒಂಟಿಯಾಗಿರುತ್ತೇನೆ ಎಂದು ಸಹ ಅಂದುಕೊಂಡಿರಲಿಲ್ಲ. ಏನಾಗುತ್ತೋ ನೋಡೋಣ ಎಂದು ಹೇಳಿದ್ದಾರೆ.

ಅಂದಿನ ಕಾಲದಲ್ಲಿ ಅನೇಕ ಹಿರೋಯಿನ್ ಗಳು ಗ್ಲಾಮರಸ್ ಪಾತ್ರಗಳನ್ನು ಮಾಡುತ್ತಿದ್ದರು. ನಾನೂ ಸಹ ಅಂತಹ ಪಾತ್ರಗಳಲ್ಲಿ ನಟಿಸಬೇಕು ಎಂದಿದೆ. ಆದರೆ ಅದು ನನಗೆ ಅಷ್ಟೊಂದು ಕಂಫರ್ಟ್ ಅನ್ನಿಸಿರಲಿಲ್ಲ. ಒಂದು ಬಾರಿ ಟ್ರೈ ಮಾಡೋಣ ಅಂತಾ ತಮಿಳು ಸಿನೆಮಾದಲ್ಲಿ ಒಂದೇ ಒಂದು ಬಾರಿ ಬಿಕಿನಿ ಹಾಕಿಕೊಂಡಿದೆ. ಆದರೆ ಆಗ ತುಂಬಾನೆ ಕಿರಿಕಿರಿ ಅನುಭವಿಸಿದ್ದೆ. ಆದ್ದರಿಂದ ಮತ್ತೆ ಅಂತಹ ಡ್ರೆಸ್ ಹಾಕಿಕೊಳ್ಳಲಿಲ್ಲ. ಸೌತ್ ನಲ್ಲಿ ಅವಕಾಶಗಳು ಹೆಚ್ಚಾಗಿ ನಾನು ಬ್ಯುಸಿಯಾಗಿದ್ದ ಕಾರಣ ಬಾಲಿವುಡ್ ನಿಂದ ಅವಕಾಶ ಬಂದರೂ ಹೋಗಲಿಲ್ಲ. ಗೀತಾಂಜಲಿ ಸಿನೆಮಾದಲ್ಲಿ ಬಾಲನಟಿಯಾಗಿ ನಾನು ನಟಿಸಬೇಕಿತ್ತು. ಆದರೆ ಆಗ ನನಗೆ ಪರೀಕ್ಷೆಗಳು ಇದ್ದ ಕಾರಣ ನಮ್ಮ ತಾಯಿ ಒಪ್ಪಿಕೊಳ್ಳಲಿಲ್ಲ. ಜೊತೆಗೆ ನಾಗಾರ್ಜುನ್ ರವರ ನಿನ್ನೇ ಪೆಳ್ಳಾಡತ ಹಾಗೂ ರಜನಿಕಾಂತ್ ರವರ ನರಸಿಂಹ ಸಿನೆಮಾದಲ್ಲೂ ನಟಿಸಬೇಕಿತ್ತು, ಡೇಟ್ಸ್ ಖಾಲಿಯಿಲ್ಲದ ಕಾರಣದಿಂದ ಮಿಸ್ ಆದೆ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.