Film News

ಈವೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ತಮನ್ನಾ ಹಾಗೂ ಆಕೆಯ ಪ್ರಿಯಕರ, ವೈರಲ್ ಆದ ಪೊಟೋಸ್….!

ಸೌತ್ ಸಿನಿರಂಗದಲ್ಲಿ ಸುಮಾರು ದಶಕಗಳಿಂದ ಬಹುಬೇಡಿಕೆ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. ತಮನ್ನಾ ಎಂದರೇ ಅನೇಕ ಯುವಕರ ಕ್ರಷ್ ಎಂದೇ ಕರೆಯಲಾಗುತ್ತದೆ. ಗ್ಲಾಮರಸ್ ಡ್ಯಾನ್ಸ್ ಗೆ ಸಂಬಂಧಿಸಿದಂತೆ ಯುವಕರಲ್ಲಿ ತಮನ್ನಾ ತಂದುಕೊಂಡಷ್ಟು ಕ್ರೇಜ್ ಬೇರೆ ಯಾವುದೇ ನಟಿ ಪಡೆದುಕೊಳ್ಳಲಿಲ್ಲ ಎನ್ನಬಹುದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ತಮನ್ನಾ ಭಾಟಿಯಾ ಪ್ರೀತಿಯ ಬಗ್ಗೆ ರೂಮರ್‍ ಶುರುವಾಗಿದ್ದು, ಇದೀಗ ಮತ್ತೊಂದು ಈವೆಂಟ್ ನಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದು ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ನಟಿ ತಮನ್ನಾ ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿಕೊಂಡರು. ಪಾರ್ಟಿಯಲ್ಲಿ ತಮನ್ನಾ ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಮುತ್ತಿಟ್ಟಿರುವ ಪೊಟೋ ಒಂದು ವೈರಲ್ ಆಗಿದೆ. ಆಕೆ ರೂಮರ್‍ ಬಾಯ್ ಫ್ರೆಂಡ್ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಹಗ್ ಮಾಡಿಕೊಳ್ಳುತ್ತಾ ಎಂಜಾಯ್ ಮಾಡಿದ್ದರು. ಈ ಸಂಬಂಧ ವಿಡಿಯೋ ಒಂದು ಹೊರಬಂದಿದ್ದು, ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಶುರುವಾಯಿತು. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಿನಿವಲಯದಲ್ಲಿ ಜೋರಾಗಿ ಕೇಳಿಬಂತು. ಇದೀಗ ಮತ್ತೊಮ್ಮೆ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಅವರ ಲವ್ ಅಫೈರ್‍ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಮುಂಬೈನಲ್ಲಿ ನಡೆದ ಎಲ್ಲೆ ಅವಾರ್ಡ್ ಈವೆಂಟ್ ನಲ್ಲಿ ನಟ ವಿಜಯ್ ವರ್ಮಾ ಜೊತೆಗೆ ತಮನ್ನಾ ಕಾಣಿಸಿಕೊಂಡಿದ್ದಾರೆ. ಕಣ್ಣು ಕುಕ್ಕುವಂತಹ ಔಟ್ ಫಿಟ್ ನಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇಡೀ ಈವೆಂಟ್ ಗೆ ಈ ಜೋಡಿ ಹೈಲೈಟ್ ಆಗಿದೆ ಎನ್ನಲಾಗುತ್ತಿದೆ. ಇಬ್ಬರೂ ಈವೆಂಟ್ ನಲ್ಲಿ ಹಾಜರಾಗಿ, ಒಂದೇ ಕಾರಿನಲ್ಲಿ ಹೋಗಿದ್ದಾರೆ. ಈ ಅವಾರ್ಡ್ ಫಂಕ್ಷನ್ ನಲ್ಲಿ ಇಬ್ಬರೂ ಕ್ಯಾಮೆರಾಗೆ ಪೋಸ್ ಗಳನ್ನು ಸಹ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅವರಿಬ್ಬರ ನಡುವಣ ಲವ್ ಅಫೈರ್‍ ಬಗ್ಗೆ ಮತಷ್ಟು ರೂಮರ್‍ ಗಳು ಬಿರುಗಾಳಿಯಂತೆ ಹಬ್ಬುತ್ತಿದೆ.

ಇನ್ನೂ ಇಷ್ಟೊಂದು ಮಟ್ಟಿಗೆ ರೂಮರ್‍ ಹರಿದಾಡುತ್ತಿದ್ದರೂ ಸಹ ತಮನ್ನಾ ಆಗಲಿ ಅಥವಾ ವಿಜಯ್ ಆಗಲಿ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಸುಮ್ಮನಿರುವ ಕಾರಣದಿಂದ ಈ ಸುದ್ದಿ ನಿಜವೇ ಇರಬಹುದು ಎಂದು ಎಲ್ಲರೂ ಅಭಿಪ್ರಾಯಪಡುತ್ತಿದ್ದಾರೆ. ಇನ್ನೂ ಇಬ್ಬರ ನಡುವಣ ರೂಮರ್‍ ಬಗ್ಗೆ ಸೋಷಿಯಲ್ ಮಿಡಿಯಾದ ಜೊತೆಗೆ ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲೂ ಜೋರಾಗಿ ಹರಿದಾಡುತ್ತಿದೆ. ಇನ್ನೂ ನಟಿ ತಮನ್ನಾ ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top