ಮೊದಲ ಬಾರಿಗೆ ಸ್ಟಾರ್ ನಿರ್ಮಾಪಕ ದಿಲ್ ರಾಜು ತಮ್ಮ ಎರಡನೇ ಪತ್ನಿಯ ಲವ್ ಸ್ಟೋರಿ ಬಗ್ಗೆ ಕಾಮೆಂಟ್ಸ್….!

ಸಿನೆಮಾ ರಂಗಕ್ಕೆ ಸಂಬಂಧಿಸಿದ ಅನೇಕ ಸೆಲೆಬ್ರೆಟಿಗಳು ತಮ್ಮ ವೈಯುಕ್ತಿಕ ಜೀವನವನ್ನು ಸಾಕಷ್ಟು ಮಟ್ಟಿಗೆ ನಿಗೂಡವಾಗಿಯೇ ಇಟ್ಟಿರುತ್ತಾರೆ. ಆದರೆ ಕೆಲವೊಮ್ಮೆ ಅವು ಹೊರಬರುತ್ತಿರುತ್ತವೆ. ಇದೀಗ ಸೌತ್ ಸಿನಿರಂಗದ ಸ್ಟಾರ್‍ ನಿರ್ಮಾಪಕ ದಿಲ್ ರಾಜು ಸಹ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ತಮ್ಮ ಎರಡನೇ ಮದುವೆಯ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದಿಲ್ ರಾಜು ಬಂಡವಾಳ ಹೂಡಿರುವ ವಾರಿಸು ಸಿನೆಮಾದ ಪ್ರಮೋಷನ್ ನಿಮಿತ್ತ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಜ.14 ರಂದು ತಮಿಳು ಸ್ಟಾರ್‍ ನಟ ವಿಜಯ್ ದಳಪತಿ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದ ವಾರಿಸು ಸಿನೆಮಾ ರಿಲೀಸ್ ಆಗಿದೆ. ಈ ಸಿನೆಮಾಗೆ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದ್ದು, ಚಿತ್ರತಂಡ ಪ್ರಮೋಷನ್ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಹಾದಿಯಲ್ಲೇ ಸಂದರ್ಶನವೊಂದರಲ್ಲಿ ನಿರ್ಮಾಪಕ ದಿಲ್ ರಾಜು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಎರಡನೇ ಮದುವೆಯಾದ ಬಗ್ಗೆ ಮಾತನಾಡಿದ್ದಾರೆ. ತಾನು ಎರಡನೇ ಮದುವೆಯಾದ ಬಗ್ಗೆ ಅನೇಕ ವಿಚಾರಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ನಿರ್ಮಾಪಕ ದಿಲ್ ರಾಜು ಮೊದಲಿಗೆ ಅನಿತಾ ಎಂಬಾಕೆಯೊಂದಿಗೆ ಮದುವೆಯಾದರು. ಆಕೆ ಕಳೆದ 2017 ರಲ್ಲಿ ಮೃತಪಟ್ಟರು. ಬಳಿಕ ಎರಡು ವರ್ಷಗಳ ಕಾಲ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದರು ದಿಲ್ ರಾಜು. ಬಳಿಕ 2020 ರಲ್ಲಿ ತೇಜಸ್ವಿ ಎಂಬಾಕೆಯನ್ನು ಎರಡನೇ ವಿವಾಹವಾದರು. ಈ ಬಗ್ಗೆ ದಿಲ್ ರಾಜು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ದಿಲ್ ರಾಜು, ನನ್ನ ಪತ್ನಿ ಮೃತಪಟ್ಟಾಗ ಎರಡು ವರ್ಷಗಳ ಕಾಲ ತುಂಬಾನೆ ನೋವನ್ನು ಪಟ್ಟೆ. ಜೀವನದಲ್ಲಿ ಮುಂದೆ ಹೋಗಬೇಕಾದರೇ ಎರಡು ಮೂರು ಆಯ್ಕೆಗಳು ಕಂಡು ಬಂತು. ನನಗೂ ಒಂದು ಸಂಗಾತಿ ಬೇಕು ಎನ್ನಿಸಿತು. ಆ ಸಮಯದಲ್ಲೇ ನನಗೆ ತೇಜಸ್ವಿನಿ ಜೊತೆಗೆ ಪರಿಚಯ ಏರ್ಪಟ್ಟಿತ್ತು. ಆಕೆಯ ಪೋನ್ ನಂಬರ್‍ ಪಡೆದುಕೊಂಡೆ. ಒಂದು ವರ್ಷ ತೇಜಸ್ವಿನಿಯನ್ನು ಗಮನಿಸಿದ್ದೆ. ಬಳಿಕ ಆಕೆಗೆ ನಾನೆ ಪ್ರಪೋಜ್ ಮಾಡಿ, ಮನೆಯವರ ಅಂಗೀಕಾರದೊಮದಿಗೆ ಮದುವೆಯಾದೆ. ಸದ್ಯ ನಮಗೆ ಒಬ್ಬ ಮಗ ಸಹ ಇದ್ದಾನೆ ಎಂದು ಹೇಳಿದ್ದಾರೆ.

ಇನ್ನೂ ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಿರ್ಮಾಪಕರಲ್ಲಿ ದಿಲ್ ರಾಜು ಸಹ ಒಬ್ಬರಾಗಿದ್ದು, ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳನ್ನು ನಿರ್ಮಾಣ ಮಾಡುತ್ತಿರುತ್ತಾರೆ. ಸದ್ಯ ಮೆಗಾ ಕುಟುಂಬದ ರಾಮ್ ಚರಣ್ ರವರ RC15 ಸಿನೆಮಾಗೂ ಸಹ ದಿಲ್ ರಾಜು ರವರೇ ಬಂಡವಾಳ ಹೂಡಿದ್ದಾರೆ. ಮೊದಲಿಗೆ ಡಿಸ್ಟ್ರಿಬ್ಯೂಟರ್‍ ಆಗಿದ್ದ ದಿಲ್ ರಾಜು ಇದೀಗ ಸೌತ್ ಸಿನಿರಂಗದ ಬಡಾ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.

Previous articleನನ್ನ ತಂದೆಯ ಹೆಸರು ಹೇಳಿಕೊಂಡು ಒಂದು ಅವಕಾಶವನ್ನು ಸಹ ಪಡೆದುಕೊಳ್ಳಲಿಲ್ಲ ಎಂದ ಲೇಡಿ ವಿಲನ್ ವರಲಕ್ಷ್ಮಿ…!
Next articleಈವೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ತಮನ್ನಾ ಹಾಗೂ ಆಕೆಯ ಪ್ರಿಯಕರ, ವೈರಲ್ ಆದ ಪೊಟೋಸ್….!