ಮೆಗಾಸ್ಟಾರ್ ಎಷ್ಟು ಬಾರಿ ಸಂದೇಶ ಕಳುಹಿಸಿದರೂ ಆಂಕರ್ ಸುಮಾ ರಿಪ್ಲೆ ಕೊಟ್ಟಿರಲಿಲ್ಲವಂತೆ, ವಿಚಾರ ಹಂಚಿಕೊಂಡ ಚಿರು…!

Follow Us :

ತೆಲುಗು ಸಿನಿರಂಗದ ಅಗ್ರ ಹಿರೋಗಳಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಒಬ್ಬರಾಗಿದ್ದಾರೆ. ಸ್ವಯಂ ಕೃಷಿಯಿಂದ ಮೆಗಾಸ್ಟಾರ್‍ ಆದ ಚಿರಂಜೀವಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ ಜೊತೆಗೆ ಅನೇಕರಿಗೆ ಆತ ಆದರ್ಶಪ್ರಾಯರಾಗಿದ್ದಾರೆ. ಇನ್ನೂ ಆತನಿಗಾಗಿ ಅನೇಕರು ಕಾಯುತ್ತಿರುತ್ತಾರೆ. ಆತನನ್ನು ಭೇಟಿಯಾಗಬೇಕು. ನೋಡಬೇಕು, ಆತನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂದು ಕಾಯುತ್ತಿರುತ್ತಾರೆ. ಅಂತಹ ಸ್ಟಾರ್‍ ಅಂಡ್ ಲೆಜೆಂಡರಿ ನಟನನ್ನು ಆಂಕರ್‍ ಸುಮಾ ನಿರ್ಲಕ್ಷ್ಯ ಮಾಡಿದ್ದರಂತೆ ಅಷ್ಟಕ್ಕೂ ಸುಮಾ ಅವೈಡ್ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಇಡೀ ದೇಶದ ಸಿನಿರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಒಬ್ಬರಾಗಿದ್ದಾರೆ. ಇನ್ನೂ ಚಿರಂಜೀವಿ ಕರೆಗಾಗಿ, ಸಂದೇಶಕ್ಕಾಗಿ ಅನೇಕರು ಕಾಯುತ್ತಿರುತ್ತಾರೆ. ಆದರೆ ಚಿರಂಜೀವಿಯವರ ಸಂದೇಶಕ್ಕೆ ಆಂಕರ್‍ ಸುಮಾ ರಿಪ್ಲೆ ಕೊಡಲಿಲ್ಲವಂತೆ. ಸುಮಾರು ಮೂರು ವರ್ಷಗಳ ಕಾಲ ಮೆಸೇಜ್ ಮಾಡಿದರೂ ಸಹ ಚಿರು ಸಂದೇಶಕ್ಕೆ ಸುಮಾ ರಿಪ್ಲೆ ನೀಡಿಲ್ಲವಂತೆ. ಸಿನಿರಂಗದಲ್ಲಿ ಸ್ಟಾರ್‍ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡ ಸುಮಾ ಚಿರಂಜೀವಿ ಕಳುಹಿಸಿದ ಸಂದೇಶ ನೋಡಿ ಸಹ ರಿಪ್ಲೆ ಕೊಡಲಿಲ್ಲವಂತೆ. ಈ ವಿಚಾರವನ್ನು ಮೆಗಾಸ್ಟಾರ್‍ ಚಿರಂಜೀವಿಯವರೇ ರಿವಿಲ್ ಮಾಡಿದ್ದಾರೆ. ಚಿರು ಅಭಿನಯದ ವಾಲ್ತೇರು ವೀರಯ್ಯ ಸಿನೆಮಾ ಇದೇ ಜ.13 ರಂದು ರಿಲೀಸ್ ಆಗಿದೆ. ಈ ಸಿನೆಮಾ ಭರ್ಜರಿಯಾಗಿ ಪ್ರದರ್ಶನವಾಗುತ್ತಿದ್ದು, ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

ಇನ್ನೂ ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದೆ. ಪ್ರಮೋಷನ್ ಭಾಗವಾಗಿಯೇ ಚಿರಂಜೀವಿ ಸುಮಾ ಹೋಸ್ಟ್ ಮಾಡುತ್ತಿರುವ ಶೋ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ಶೋ ನಲ್ಲಿ ಚಿರಂಜೀವಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುಮಾ ಚಿರು ಲೀಕ್ಸ್ ಏನಾದರೂ ಇದೆಯೇ ಎಂದು ಕೇಳಿದ್ದು, ಅದಕ್ಕೆ ಚಿರು ಸುಮಾ ಬಗ್ಗೆ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುಮ ಹುಟ್ಟುಹಬ್ಬಕ್ಕೆ ನಾನು ಹ್ಯಾಪಿ ಬರ್ತ್‌ಡೇ ಎಂಬ ಸಂದೇಶ ಮಾಡುತ್ತಲೇ ಇದ್ದೀನಿ ಆದರೆ ಈ ಸಂದೇಶ ನೋಡಿಯೂ ಸಹ ಸುಮಾ ರಿಪ್ಲೆ ನೀಡದೇ ಅವೈಡ್ ಮಾಡುತ್ತಿದ್ದರು ಎಂದು ಚಿರು ಸುಮಾ ಬಗ್ಗೆ ಹೇಳಿದ್ದಾರೆ.

ಇನ್ನೂ ಮೆಗಾಸ್ಟಾರ್‍ ಚಿರಂಜೀವಿಯವರೇ ಸಂದೇಶ ಕಳುಹಿಸಿದ್ದರೂ ಸಹ ರಿಪ್ಲೇ ನೀಡದ ಏಕೈಕ ವ್ಯಕ್ತಿ ಸುಮಾ ಮಾತ್ರ ಎಂದು ಚಿರು ಹೇಳಿದ್ದಾರೆ. ಇದಕ್ಕೆ ಸುಮಾ ರಿಯಾಕ್ಟ್ ಆಗಿದ್ದು, ನನ್ನ ಹುಟ್ಟುಹಬ್ಬದ ಸಮಯದಲ್ಲಿ ಸ್ವತಃ ಮೆಗಾಸ್ಟಾರ್‍ ಚಿರಂಜೀವಿಯವರೇ ಸಂದೇಶ ಕಳುಹಿಸುತ್ತಾರೆ ಎಂದು ನಾನು ಎಂದೂ ಊಹಿಸಿರಲಿಲ್ಲ. ನಾನು ಆ ನಂಬರ್‍ ಅನ್ನು ಸಹ ಚೆಕ್ ಮಾಡಿಕೊಳ್ಳಲಿಲ್ಲ. ಇನ್ನೂ 2022ರಲ್ಲಿ ನಡೆದ ಈವೆಂಟ್ ಒಂದರಲ್ಲಿ ಸುಮಾಗೆ ಭೇಟಿಯಾದಾಗ ಈ ವಿಚಾರ ಪ್ರಸ್ತಾಪಿಸಿದಾಗ ಸುಮಾ ನನ್ನ ನಂಬರ್‍ ತೆಗೆದುಕೊಂಡರು ಎಂದು ಚಿರು ಹೇಳಿದ್ದಾರೆ.