News

ಸಲಿಂಗ ವಿವಾಹದ ಬಗ್ಗೆ ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯಿಲ್ಲ ಎಂದ ಸುಪ್ರೀಂ ಕೋರ್ಟ್…….!

ಭಾರತದಲ್ಲಿ ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ಪ್ರಕಟಿಸಿದೆ. ಐದು ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಕ ಪೀಠ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೊಡಲು 3 ನ್ಯಾಯಾಧೀಶರು ವಿರೋಧ ಮಾಡಿದ್ದಾರೆ, 2 ನ್ಯಾಯಾಮೂರ್ತಿಗಳು ಬೆಂಬಲ ನೀಡಿದ್ದಾರೆ. ಜೊತೆಗೆ ಇದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂತಲೂ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನು ಬದ್ದಗೊಳಿಸಬೇಕೆ ಎಂಬುದರ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ತೀರ್ಪನ್ನು ಕಾಯ್ಡಿಸಿತ್ತು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂಜಯ್ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿಎಸ್ ನರಸಿಂಹ ರವರನ್ನು ಒಳಗೊಂಡ ಐದು ಮಂದಿ ನ್ಯಾಯಾಧೀಶರ ಸಂವಿಧಾನಕ ಪೀಠವು 10 ದಿನಗಳ ವಿಚಾರಣೆ ನಡೆಸಿ ಇದೇ ವರ್ಷದ ಮೇ.11 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಮದುವೆ ಮೂಲಭೂತ ಹಕ್ಕಲ್ಲ ಎಂದು ಐದು ನ್ಯಾಯಮೂರ್ತಿಗಳು ಒಪ್ಪಿಕೊಂಡಿದ್ದು, ಬಹುಮತದ ತೀರ್ಪಿನಂತೆ ಸಲಿಂಗ ವಿವಾಹದ ವಿರುದ್ದ ತೀರ್ಪು ನೀಡಿದೆ. ಈ ಬಗ್ಗೆ ಶಾಸಕಾಂಗವು ನಿರ್ಧಾರ ಮಾಡಬೇಕು ಎಂಬುದು ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನೂ ನ್ಯಾಯಮೂರ್ತಿಗಳಾದ ಸಿಜೆಐ ಚಂದ್ರಚೂಡ್, ನ್ಯಾ. ಕೌಲ್ ಅಲ್ಪಸಂಖ್ಯಾತರ ಅಭಿಪ್ರಾಯ ಮಂಡಿಸಿದ್ದರೇ, ನ್ಯಾ. ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ನರಸಿಂಹ ರವರು ಬಹುಮತದ ಅಭಿಪ್ರಾಯ ಮಂಡನೆ ಮಾಡಿದ್ದಾರೆ.

ಇನ್ನೂ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸಾಂವಿಧಾಣಿಕ ಪೀಠ ರಚನೆ ಮಾಡಿತ್ತು. ಮದುವೆಯು ಹಲವಾರು ಹಕ್ಕುಗಳು, ಕಟ್ಟು ಪಾಡುಗಳು ಹಾಗೂ ಸವಲತ್ತುಗಳನ್ನು ಕಾನೂನಿಂದ ರಕ್ಷಿಸುವ ಜೊತೆಗೆ ಪಾಲನೆ ಮಾಡಲಾಗುತ್ತಿದೆ ಎಂದು ಅರ್ಜಿಗಳು ವಾದ ಮಾಡಿತ್ತು. ವಾದ ವಿವಾದಗಳ ಬಳಿಕ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯಿಲ್ಲ. ಅದನ್ನು ಶಾಸಕಾಂಗ ನಿರ್ಧಾರ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.

Most Popular

To Top