Film News

ಸಾರ್ವಜನಿಕವಾಗಿ ಆ ರೀತಿಯ ವರ್ತನೆ ಸರಿಯಲ್ಲ ಎಂದು ವಿಜಯ್ ಸೇತುಪತಿಗೆ ಬುದ್ದಿವಾದ ತಿಳಿಸಿದ ಕೋರ್ಟ್…!

ತಮಿಳು ಸಿನಿರಂಗದ ಸ್ಟಾರ್‍ ನಟ ವಿಜತ್ ಸೇತುಪತಿ ವಿಲಕ್ಷಣ ನಟನಾಗಿ ಫೇಂ ಸಂಪಾದಿಸಿಕೊಂಡಿದ್ದಾರೆ. ತುಂಬಾ ಕ್ರೇಜ್ ಹೊಂದಿರುವ ನಟರಲ್ಲಿ ವಿಜಯ್ ಸೇತುಪತಿ ಸಹ ಒಬ್ಬರಾಗಿದ್ದಾರೆ. ಆತ ಅಭಿನಯದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಒಳ್ಳೆಯ ಸಕ್ಸಸ್ ಸಾಧಿಸಿದೆ ಎಂದು ಹೇಳಬಹುದಾಗಿದೆ. ವೈವಿದ್ಯಮಯ ಪಾತ್ರಗಳೊಂದಿಗೆ, ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ಹಿರೋ ಆಗಿ, ವಿಲನ್ ಆಗಿ ಕಡಿಮೆ ಸಮಯದಲ್ಲೇ ಸ್ಟಾರ್‍ ನಟರಾಗಿದ್ದಾರೆ ವಿಜಯ್ ಸೇತುಪತಿ. ಇದೀಗ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಜಯ್ ಸೇತುಪತಿಗೆ ಸುಪ್ರೀಂ ಕೋರ್ಟ್ ಬುದ್ದಿವಾದ ಹೇಳಿದೆ.

ವಿಲಕ್ಷಣ ನಟನೆಂದೇ ಖ್ಯಾತಿ ಪಡೆದುಕೊಂಡ ವಿಜಯ್ ಸೇತುಪತಿ  ಅತೀ ಕಡಿಮೆ ಸಮಯದಲ್ಲೇ ವಿವಿಧ ರೀತಿಯ ಪಾತ್ರಗಳ ಮೂಲಕ ಖ್ಯಾತಿ ಪಡೆದುಕೊಂಡರು. ನಟನೆಯ ಪರವಾಗಿ ಅನೇಕ ಪ್ರಯೋಗಗಳನ್ನು ಮಾಡುವ ಮೂಲಕ ಪ್ರೇಕ್ಷಕರಿಂದ ಪ್ರಶಂಸೆಗಳನ್ನು ಸಹ ಪಡೆದುಕೊಂಡರು. ಕೇವಲ ನಟನಾಗಿ ಮಾತ್ರವಲ್ಲದೇ ಖಳನಾಯಕನಾಗಿಯೂ ಸಹ ತುಂಬಾ ಕ್ರೇಜ್ ಪಡೆದುಕೊಂಡರು. ಕಳೆದ ವರ್ಷ ಸ್ಟಾರ್‍ ನಟ ಕಮಲ್ ಹಾಸನ್ ಅಭಿನಯದ ವಿಕ್ರಂ ಸಿನೆಮಾದಲ್ಲೂ ಸಹ ವಿಜಯ್ ಸೇತುಪತಿ ವಿಲನ್ ರೋಲ್ ಪ್ಲೇ ಮಾಡಿದ್ದರು. ವಿಲನ್ ಆಗಿ ತುಂಬಾ ಅದ್ಬುತವಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನೂ ಕಳೆದ ಎರಡು ವರ್ಷಗಳಿಂದ ವಿಜಯ್ ಸೇತುಪತಿ ಒಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ವಿಜಯ್ ಸೇತುಪತಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಹಾ ಗಾಂಧಿ ಎಂಬ ವ್ಯಕ್ತಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ವಿಜಯ್ ಸೇತುಪತಿ ಕಡೆಯವರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಮಹಾಗಾಂಧಿ ಕೋರ್ಟ್‌ನಲ್ಲಿ ಕೇಸ್ ದಾಖಲು ಮಾಡಿದ್ದರು. ಇನ್ನೂ ವಿಜಯ್ ಸೇತುಪತಿ ಕಡೆಯವರು ಮಹಾಗಾಂಧಿ ಎಂಬಾತನನ್ನು ಒಡೆದಿರುವುದಾಗಿ ಸೋಷಿಯಲ್ ಮಿಡಿಯಾದಲ್ಲಿ ಅಂದು ಕೆಲವು ದೃಶ್ಯಗಳೂ ಸಹ ಸಖತ್ ವೈರಲ್ ಆಗಿತ್ತು. ಇನ್ನೂ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಾದಿಯಲ್ಲೇ ಸುಪ್ರೀಂ ಕೋರ್ಟ್ ವಿಜಯ್ ಸೇತುಪತಿಗೆ ಬುದ್ದಿವಾದ ಹೇಳಿದೆ. ಸೆಲೆಬ್ರೆಟಿಗಳು ಜನರ ಮಧ್ಯೆ ಇರುವಾಗ ಹೇಗಂದರೇ ಹಾಗೆ ಪ್ರವರ್ತನೆ ಮಾಡಬಾರದು. ವಿಜಯ್ ಸೇತುಪತಿ ಸ್ಟಾರ್‍ ನಟ ಆದ ಕಾರಣ ಜನರ ನಡುವೆ ನಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮಗೆ ತುಂಬಾ ಅಭಿಮಾನಿಗಳಿರುತ್ತಾರೆ ಎಂಬುದನ್ನೂ ಸಹ ನೆನಪಿನಲ್ಲಿಟ್ಟುಕೊಳ್ಳಿ. ಜನರನ್ನು ಬೈಯುತ್ತಾ ಜನರ ಮದ್ಯೆ ಸೆಲೆಬ್ರೆಟಿಗಳು ತಿರುಗಾಡುವುದು ಅಸಾಧ್ಯವಾದುದು. ಇನ್ನೂ ಮಹಾಗಾಂಧಿ ಹಾಗೂ ವಿಜಯ್ ಸೇತುಪತಿ ಗೆ ಕೋರ್ಟ್ ಸೂಚನೆ ಒಂದನ್ನು ಸಹ ನೀಡಿದೆ. ಇಬ್ಬರ ಅಂಗೀಕಾರದೊಂದಿಗೆ ಈ ಸಮಸ್ಯೆಯನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬಹುದು ಅದಕ್ಕೆ ಬೇಕಾಗುವ ಸಿದ್ದತೆಯನ್ನು ಸಹ ಮಾಡುತ್ತೇವೆ. ತಮ್ಮ ಉತ್ತರ ನೀಡಲು ಮುಂದಿನ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್ ಆದೇಶ ನೀಡಿದೆ.

Most Popular

To Top