ಪಬ್ಲಿಕ್ ನಲ್ಲೇ ಶಾರುಖ್ ಖಾನ್ ಮುತ್ತಿಟ್ಟ ಲೇಡಿ ಸೂಪರ್ ಸ್ಟಾರ್ ನಯನತಾರಾ, ವೈರಲ್ ಆದ ವಿಡಿಯೋ….!

Follow Us :

ಸಿನೆಮಾ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ವಿಡಿಯೋಗಳು, ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಬಾಲಿವುಡ್ ಸ್ಟಾರ್‍ ನಟ ಶಾರುಖ್ ಖಾನ್ ಹಾಗೂ ನಯನತಾರಾ ಕಾಂಬಿನೇಷನ್ ನಲ್ಲಿ ಕಾಲಿವುಡ್ ಯಂಗ್ ಡೈರೆಕ್ಟರ್‍ ಅಟ್ಲಿ ನಿರ್ದೇಶನದಲ್ಲಿ ಜವಾನ್ ಸಿನೆಮಾ ಸೆಟ್ಟೇರಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗಿದ್ದು, ಚೆನೈಗೆ ಶಾರುಖ್ ಆಗಮಿಸಿದ್ದಾರೆ. ಈ ವೇಳೆ ಶಾರುಖ್ ಖಾನ್ ಕೆನ್ನೆಗೆ ನಯನತಾರಾ ಮುತ್ತಿಟ್ಟಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ನಿರ್ದೇಶಕ ಅಟ್ಲಿ ಜವಾನ್ ಸಿನೆಮಾವನ್ನು ತೆರೆಗೆ ತರಲಿದ್ದಾರೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ನಯನತಾರಾ ಹಾಗೂ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನಟಿಸುತ್ತಿರುವ ವಿಚಾರ ತಿಳಿದೇ ಇದೆ. ಇನ್ನೂ ಸಿನೆಮಾದ ಶೂಟಿಂಗ್ ನಿಮಿತ್ತ ಶಾರುಖ್ ಚೆನ್ನೈ ಗೆ ಬಂದಿದ್ದಾರಂತೆ. ಈ ಸಮಯದಲ್ಲಿ ಶಾರುಖ್ ನಯನತಾರಾ ರವರ ಮನೆಗೆ ಹೋಗಿದ್ದಾರೆ. ಬಳಿಕ ಮನೆಯಿಂದ ವಾಪಸ್ಸು ಹೋಗುತ್ತಿದ್ದಾಗ ನಯನತಾರಾ ಕಾರಿನಲ್ಲಿ ಕುಳಿತ ಶಾರುಖ್ ಖಾನ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಇನ್ನೂ ಸಾರ್ವಜನಿಕ ಸ್ಥಳದಲ್ಲಿ ನಯನತಾರಾ ಒಬ್ಬ ನಟನನ್ನು ಕಿಸ್ ಮಾಡಿದ್ದು, ಹಾಟ್ ಟಾಪಿಕ್ ಆಗಿದೆ. ಸಿನೆಮಾಗಳಲ್ಲಿ ಇದೆಲ್ಲಾ ಸಾಮಾನ್ಯವಾಗಿ ನಡೆಯುತ್ತಿರುತ್ತದೆ ಆದರೆ ಸಾರ್ವಜನಿಕವಾಗಿ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.

ಇನ್ನೂ ನಯನತಾರಾಗೆ ಮದುವೆಯಾಗಿದೆ. ಈ ಕಾರಣದಿಂದ ಮರ್ಯಾದೆಯಿಂದ ಶಾರುಖ್ ಖಾನ್ ಗೆ ಮುತ್ತಿಟ್ಟಿದ್ದು ಸಖತ್ ಸುದ್ದಿಯಾಗುತ್ತಿದೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಅನೇಕ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ನಿರ್ದೇಶಕ ಅಟ್ಲಿ ಜವಾನ್ ಸಿನೆಮಾವನ್ನು ತುಂಬಾ ನಿರೀಕ್ಷೆಯಿಂದ ತೆರೆಗೆ ತರುತ್ತಿದ್ದಾರೆ. ಈ ಸಿನೆಮಾದಲ್ಲಿ ವಿಜಯ್ ಸೇತುಪತಿ, ಪ್ರಿಯಮಣಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಕ್ಯಾಮಿಯೋ ರೋಲ್ ನಲ್ಲೂ ಸಹ ನಟಿಸುತ್ತಿದ್ದಾರೆ. ಈ ಸಿನೆಮಾ ಜೂನ್ 6 ರಂದು ಅದ್ದೂರಿಯಾಗಿ ತೆರೆ ಮೇಲೆ ಅಬ್ಬರಿಸಲಿದೆ.

ಇನ್ನೂ ಬಾಲಿವುಡ್ ನಟ ಶಾರುಖ್ ಖಾನ್ ಗೆ ಸುಮಾರು ವರ್ಷಗಳ ಬಳಿಕ ಪಠಾನ್ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡಿದ್ದಾರೆ. ಈ ಸಿನೆಮಾದ ಬಗ್ಗೆ ಅನೇಕ ವಿಮರ್ಶೆಗಳು ಎದುರಾದವು.  ಈ ಸಿನೆಮಾ ಬ್ಯಾನ್ ಮಾಡಬೇಕೆಂಬ ಸುದ್ದಿಗಳೂ ಸಹ ಜೋರಾಗಿ ಕೇಳಿಬಂದವು. ಆದರೂ ಸಹ ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ರೆಕಾರ್ಡ್ ಸೃಷ್ಟಿಸಿದೆ.