Film News

ಮೃಣಾಲ್ ಠಾಕೂರ್ ರನ್ನು ಅಳಿಸಿಬಿಟ್ಟ ಕಾಮೆಂಟ್ಸ್, ನಾನು ಮನುಷ್ಯಳೇ ಎಂದು ಎಮೋಷನಲ್ ಆದ ಮೃಣಾಲ್….!

ನಟಿ ಮೃಣಾಲ್ ಠಾಕೂರ್‍ ಸಿತಾರಾಮಂ ಸಿನೆಮಾ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ನಟಿಯಾಗಿದ್ದಾರೆ. ಇನ್ನೂ ಮೊದಲನೇ ಸಿನೆಮಾದ ಮೂಲಕವೇ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದರು. ಒಂದೇ ಸಿನೆಮಾದ ಮೂಲಕವೇ ಸ್ಟಾರ್‍ ನಟಿಯ ಸ್ಥಾನಕ್ಕೆ ಹೋದರು. ಸೌಂದರ್ಯ, ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡರು. ಇದೀಗ ಆಕೆಗೆ ಸಾಲು ಸಾಲು ಆಫರ್‍ ಗಳು ಬರುತ್ತಿವೆ. ಆಕೆಯ ಸೌಂದರ್ಯ ಹಾಗೂ ನಟನೆಗೆ ಅನೇಕರು ಫಿದಾ ಆಗಿದ್ದಾರೆ. ಆಕೆಯ ಕುರಿತಂತೆ ಎದುರಾದ ಟ್ರೋಲ್ ಗಳಿಗೆ ಎಮೋಷನಲ್ ಆಗಿದ್ದಾರೆ.

ಮೊದಲನೇ ಸಿನೆಮಾದ ಮೂಲಕವೇ ಕ್ರೇಜಿ ನಟಿಯಾಗಿದ್ದಾರೆ ಮೃಣಾಲ್ ಠಾಕೂರ್‍. ನಾರ್ತ್ ಮೂಲದ ಬ್ಯೂಟಿಯಾದರೂ ಸಹ ಸೌತ್ ಇಂಡಿಯನ್ ನಟಿಯಂತೆ ಸೌತ್ ಪ್ರೇಕ್ಷಕರನ್ನು ಮೈಮರೆಸಿದ್ದಾರೆ. ಇನ್ನೂ ಸೀತಾರಾಮಂ ಸಿನೆಮಾದಲ್ಲಿ ಮೃಣಾಲ್ ಮುಗ್ದ ನಟನೆಯ ಕಾರಣಕ್ಕಾಗಿ ಓವರ್‍ ನೈಟ್ ಆಕೆ ಸ್ಟಾರ್‍ ಆದರು. ಇದೀಗ ಬೇರೆ ಆಫರ್‍ ಗಳನ್ನು ಪಡೆದುಕೊಳ್ಳುವತ್ತ ಸಾಗುತ್ತಿದ್ದಾರೆ. ಇನ್ನೂ ಸ್ಟಾರ್‍ ನಟಿಯರಾದರೂ ಸಹ ಟ್ರೋಲರ್‍ ಗಳ ಬಾದೆ ತಪ್ಪಿದ್ದಲ್ಲ. ಇದೀಗ ಮೃಣಾಲ್ ಬಗ್ಗೆ ಸಹ ಕೆಲವೊಂದು ಟ್ರೋಲ್ ಗಳು ಹರಿದಾಡುತ್ತಿವೆ. ಸಾಮಾನ್ಯವಾಗಿಯೇ ಟ್ರೋಲ್ ಮಾಡುತ್ತಾರೆ ಆದರೆ ಸಣ್ಣ ತಪ್ಪು ಸಿಕ್ಕರೇ ಬಿಡುತ್ತಾರೆಯೇ, ಈ ಹಾದಿಯಲ್ಲೇ ಮೃಣಾಲ್ ಠಾಕೂರ್‍ ಈ ಹಿಂದೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ಈ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆ ಮೃಣಾಲ್ ಸಂದರ್ಶನವೊಂದರಲ್ಲಿ ತಾನು ಪ್ರೀತಿಸುವ ಯುವಕ, ಪತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾಮೆಂಟ್ ಗಳು ಮಾಡಿದ್ದರು. ನಾನು ಸೌಂದರ್ಯ ನೋಡಿ ಪ್ರಿಯಕರನ್ನಾಗಲಿ ಅಥವಾ ಪತಿಯನ್ನಾಗಿ ಆಯ್ಕೆ ಮಾಡುವುದಿಲ್ಲ ಎಂದು ಹೇಳಿದ್ದರು. ಬಳಿಕ ಮತ್ತೊಂದು ಶೋ ನಲ್ಲಿ ತನ್ನ ಪ್ರಿಯಕರ ಆಗಲಿ ಅಥವಾ ಮದುವೆಯಾಗ ವ್ಯಕ್ತಿ ತುಂಬಾ ಸುಂದರವಾಗಿರಬೇಕು ಎಂದು ಹೇಳಿಕೆ ನೀಡಿದ್ದರು. ಇನ್ನೂ ಎರಡು ವಿಭಿನ್ನವಾದ ಕಾಮೆಂಟ್ ಗಳು ನೀಡಿದ ಹಿನ್ನೆಲೆಯಲ್ಲಿ ಮೃಣಾಲ್ ಠಾಕೂರ್‍ ಬಗ್ಗೆ ಮೀಮ್ಸ್ ಕ್ರಿಯೇಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಅನೇಕ ಟ್ರೋಲ್ ಗಳು ಸಹ ಎದುರಾದವು. ಇನ್ನೂ ಆ ಮೀಮ್ಸ್ ಒಂದಕ್ಕೆ ಮೃಣಾಲ್ ರಿಪ್ಲೆ ನೀಡಿದ್ದಾರೆ.

ತನ್ನ ವಿರುದ್ದ ಸೃಷ್ಟಿಯಾದ ಟ್ರೋಲ್ಸ್, ಮೀಮ್ಸ್ ಬಗ್ಗೆ ತುಂಬಾ ಹರ್ಟ್ ಆಗಿದ್ದಾರೆ. ಇನ್ನೂ ಮೀಮ್ಸ್ ಒಂದಕ್ಕೆ ರಿಪ್ಲೇ ಸಹ ಮಾಡಿದ್ದಾರೆ. ನಾನು ಆಗ ಹೇಗೆ ಫೀಲ್ ಆಗಿದ್ದೆ, ಈಗ ಹೇಗೆ ಫೀಲ್ ಆಗುತ್ತಿದ್ದೇನೆ ಎಂದು ತನ್ನ ಅಭಿಪ್ರಾಯ ಹಂಚಿಕೊಂಡೆ. ನಾನು ಸಹ ಮನುಷ್ಯಳೇ ಎಂಬ ವಿಚಾರವನ್ನು ಇಂತಹವರು ಮರೆತು ಬಿಡುತ್ತಾರೆ ಎಂದು ಮೃಣಾಲ್ ಎಮೋಷನಲ್ ಆಗಿ ರಿಪ್ಲೇ ಕೊಟ್ಟಿದ್ದಾರೆ. ಇನ್ನೂ ಮೃಣಾಲ್ ರಿಪ್ಲೆಗೆ ಅನೇಕರು ಬೆಂಬಲ ಸಹ ನೀಡುತ್ತಾ ಅಂತಹ ಟ್ರೋಲ್ ಗಳನ್ನು ಕಿವಿಗೆ ಹಾಕಿಕೊಳ್ಳಬೇಡಿ ಎಂದು ಸಲಹೆ ಸಹ ನೀಡಿದ್ದಾರೆ.

Most Popular

To Top