Film News

ಮತ್ತೇ ಪ್ರೀತಿಗೆ ಬಿದ್ದ ತೆಲುಗು ನಟಿ ಅಂಜಲಿ, ಪೊಟೋ ಮೂಲಕ ಸುಳಿವು ಕೊಟ್ಟ ಬ್ಯೂಟಿ…!

ಸಿನಿರಂಗದಲ್ಲಿ ಲವ್, ಮದುವೆ, ಬ್ರೇಕಪ್ ಸರ್ವೆ ಸಾಮಾನ್ಯ ಎಂದು ಹೇಳಲಾಗುತ್ತದೆ. ಸಿನಿರಂಗದಲ್ಲಿ ಅನೇಕ ಕಲಾವಿದರು ಮದುವೆಯಾಗಿದ್ದಾರೆ. ಈಗಲು ಕೆಲವರು ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಇದೀಗ ನಟಿ ಅಂಜಲಿ ಸಹ ತಾನು ಪ್ರೀತಿಗೆ ಬಿದ್ದಿರುವುದಾಗಿ ಪೊಟೋ ಮೂಲಕ ಸುಳಿವು ನೀಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋ ಸಖತ್ ವೈರಲ್ ಆಗುತ್ತಿದ್ದು, ಅಂಜಲಿ ಪ್ರೀತಿಸುತ್ತಿರುವ ವ್ಯಕ್ತಿ ಯಾರಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಸೌತ್ ನಲ್ಲಿ ಹೆಚ್ಚು ಕ್ರೇಜ್ ಪಡೆದುಕೊಂಡ ನಟಿ ಅಂಜಲಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದ್ದರು. ಇತ್ತಿಚಿಗೆ ಸ್ಪೇಷಲ್ ಸಾಂಗ್ ಗಳಲ್ಲೂ ಸಹ ನಟಿಸುವ ಮೂಲಕ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ನಟ ಜೈ ಜೊತೆಗೆ ಪ್ರೀತಿಯಲ್ಲಿದ್ದಾರೆ. ಅವರಿಬ್ಬರೂ ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ನಲ್ಲಿ ಜೋರಾಗಿಯೇ ಹರಿದಾಡಿತ್ತು. ಆದರೆ ಕ್ರಮೇಣ ಈ ಸುದ್ದಿ ತಣ್ಣಾಗಾಯಿತು. ಇದೀಗ ಅಂಜಲಿ ಹಂಚಿಕೊಂಡ ಹೊಸ ಪೊಟೋ ಕಾರಣದಿಂದ ಆಕೆಯ ಬಗ್ಗೆ ಮತ್ತೊಂದು ರೂಮರ್ ಶುರುವಾಗಿದೆ. ಆಕೆ ತಾನು ಪ್ರೀತಿಯಲ್ಲಿರುವುದಾಗಿ ಸುಳಿವು ಕೊಟ್ಟರೇ ಎಂಬ ಅನುಮಾನ ಆ ಪೊಟೋದಿಂದ ಬರುತ್ತಿದೆ.

ಇನ್ನೂ ನಟಿ ಅಂಜಲಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನದ ಅಂಗವಾಗಿ ಅಂಜಲಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋದಲ್ಲಿ ಆಕೆ ತನ್ನ ಪೆಟ್ ನೊಂದಿಗೆ ಜೊತೆಗೂಡಿ ಲವ್ ಶೇಪ್ ಇರುವಂತಹ ಬಲೂನ್ ಹಾಕಿ ಹ್ಯಾಪಿ ವಾಲೆಂಟೈನ್ ಡೇ ಎಂದು ಕ್ಯಾಜುವಲ್ ಡ್ರೆಸ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಬಲೂನ್ ಹಿಂದೆ ಇರುವ ವ್ಯಕ್ತಿ ಯಾರು ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ. ಇನ್ನೂ ಅಂಜಲಿ ಸಾಮಾನ್ಯವಾಗಿ ವಾಲೆಂಟೈನ್ ಡೇ ಶುಭಾಷಯ ಕೋರಿದ್ದಾರಾ ಅಥವಾ ಅಲ್ಲಿ ಯಾರಾದರೂ ಇದ್ದು, ಹೊರಗೆ ಹೇಳಲಾಗದೇ ಒಂಟಿಯಾಗಿ ಪ್ರೇಮಿಗಳ ದಿನ ಆಚರಣೆ ಮಾಡಿಕೊಂಡಂಗೆ ಪೋಸ್ ಕೊಟ್ಟರೇ ಎಂಬುದು ಮಾತ್ರ ನಿಗೂಡವಾಗಿದೆ. ಆದರೆ ಈ ಪೊಟೋ ಮಾತ್ರ ಸಖತ್ ವೈರಲ್ ಆಗುತ್ತಿದ್ದೆ. ಅಂಜಲಿ ಬಚ್ಚಿಟ್ಟ ಆ ವ್ಯಕ್ತಿ ಯಾರು ಎಂಬ ಬಗ್ಗೆ ಅನುಮಾನಗಳನ್ನು ಹೊರಹಾಕಿದ್ದಾರೆ.

ಇನ್ನೂ ಅಂಜಲಿ ಸದ್ಯ ತನ್ನ ಸಿನೆಮಾ ಕೆರಿಯರ್‍ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ಅಂಜಲಿ ಬ್ಯುಸಿಯಾಗಿದ್ದಾರೆ. ಇನ್ನೂ ರಾಮ್ ಚರಣ್ ನಟಿಸುತ್ತಿರುವ RC15 ಸಿನೆಮಾದಲ್ಲಿ ಅಂಜಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವೆಬ್ ಸಿರೀಸ್ ನಲ್ಲೂ ನಟಿಸುತ್ತಿದ್ದಾರೆ. ಇದೀಗ ಅಂಜಲಿ ಪ್ರೀತಿಯ ಬಗ್ಗೆ ಸುದ್ದಿ ಯಾವಾಗ ಹೊರಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top