ಸೂಪರ್ ಸ್ಟಾರ್ ರಜನಿಕಾಂತ್ ರವರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ, ಸಿನೆಮಾಗಳಿಂದ ದೂರವುಳಿಯಲಿದ್ದಾರಂತೆ ತಲೈವಾ?

ಕಾಲಿವುಡ್ ನಲ್ಲಿ ಸೂಪರ್‍ ಸ್ಟಾರ್‍ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್‍ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿರುವ ರಜನಿಕಾಂತ್ ರವರು ಸಿನೆಮಾಗಳಿಂದ ದೂರವುಳಿಯಲಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ.

ನಟ ರಜನಿಕಾಂತ್ ಈಗಾಗಲೇ 170 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕೇವಲ ಕಾಲಿವುಡ್ ನಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಅವರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಸೂಪರ್‍ ಸ್ಟಾರ್‍ ಅಭಿಮಾನಿಗಳಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ.ಅದು ಏನೆಂದರೇ ರಜನಿಕಾಂತ್ ರವರು ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಈ ಸುದ್ದಿ ಹರಿದಾಡಲು ನಿರ್ದೇಶಕ ಮಿಸ್ಕಿನ್ ನೀಡಿದಂತಹ ಹೇಳಿಕೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಿಸ್ಕಿನ್ ಈ ವಿಚಾರ ಹಂಚಿಕೊಂಡಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾಲಿವುಡ್ ರಜನಿಕಾಂತ್ ಲಿಯೋ ನಿರ್ದೇಶಕ ಲೋಕೇಶ್ ಕನಗರಾಜ್ ಸಿನೆಮಾ ಮಾಡಲು ಆಸಕ್ತಿಯಾಗಿದ್ದಾರೆ. ಇವರ ಕಾಂಬಿನೇಷನ್ ಫಿಕ್ಸ್ ಆದರೇ ಇದೇ ರಜನಿಕಾಂತ್ ರವರ ಕೊನೆಯ ಸಿನೆಮಾ ಆಗಬಹುದು ಎಂದು ನಿರ್ದೇಶಕ ಮಿಸ್ಕಿನ್ ಕಾಮೆಂಟ್ಸ್ ಮಾಡಿದ್ದಾರೆ.  ಇದೀಗ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಈ ಸುದ್ದಿ ಕೇಳಿದ ತಲೈವಾ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳೂ ಸಹ ಶುರುವಾಗಿದೆ. ನಮ್ಮ ಸ್ಟಾರ್‍ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಾರಾ? ನೀವು ಸುಳ್ಳನ್ನು ಹೇಳುತ್ತಿದ್ದೀರಾ, ರಜನಿಕಾಂತ್ ರವರು ಅಂತಹ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಇನ್ನೂ ರಜನಿಕಾಂತ್ ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆತ ನೆಲ್ಸನ್ ದಿಲೀಪ್ ಕುಮಾರ್‍ ಜೊತೆಗೆ ಜೈಲರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು ಈ ಸಿನೆಮಾ ಸಹ ಕೊನೆಯ ಹಂತದ ಶೂಟಿಂಗ್ ನಡೆಸಿಕೊಳ್ಳುತ್ತಿದೆ. ಈ ಸಿನೆಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ ರಜನಿಕಾಂತ್ ರವರ ಮಗಳಾದ ಐಶ್ವರ್ಯ ರಜನಿಕಾಂತ್ ರವರ ನಿರ್ದೇಶನದಲ್ಲಿ ಲಾಲ್ ಸಲಾಂ ಸಿನೆಮಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಲೈಕಾ ಪ್ರೊಡಕ್ಷನ್ ನಲ್ಲಿ ಸಹ ಸಿನೆಮಾ ಒಂದರಲ್ಲಿ ನಟಿಸಲಿದ್ದಾರೆ.