ಬಾಲಿವುಡ್ ನಲ್ಲಿ ಒಳ್ಳೆಯ ಆಫರ್ ಗಳನ್ನು ನೀಡುತ್ತಿಲ್ಲ ಎಂದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ….!

ದೇಶದ ಸಿನಿರಂಗದಲ್ಲಿ ದೊಡ್ಡ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಐಶ್ವರ್ಯ ರೈ ಬಚ್ಚನ್ ಸಹ ಒಬ್ಬರಾಗಿದ್ದಾರೆ. ವಿಶ್ವ ಸುಂದರಿಯಾಗಿ ವಿಶ್ವಕ್ಕೆ ಪರಿಚಯವಾದರು. ವಯಸ್ಸಾದರೂ ಸಹ ಆಕೆ ಇಂದಿಗೂ ಸಹ ಸಿನೆಮಾಗಳಲ್ಲಿ ಬ್ಯುಸಿಯಾದ ನಟಿಯಾಗಿದ್ದಾರೆ. ಮದುವೆಯಾದ ಬಳಿಕವೂ ಸಹ ಐಶ್ವರ್ಯ ರೈ ದೊಡ್ಡ ಬಜೆಟ್ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸುಮಾರು 26 ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಇದೀಗ ಆಕೆ ಬಾಲಿವುಡ್ ನಲ್ಲಿ ಒಳ್ಳೆಯ ಆಫರ್‍ ಗಳು ಬರುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ನಟಿ ಐಶ್ವರ್ಯ ರೈ ತಮ್ಮ ಸಮಕಾಲೀನ ನಟಿಯರೊಂದಿಗೆ ಹೋಲಿಸಿದರೇ ಆಕೆ ಕಡಿಮೆ ಸಿನೆಮಾಗಳಲ್ಲೇ ನಟಿಸಿದ್ದಾರೆ. ಅದಕ್ಕೆ ಆಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳು, ಗ್ಲಾಮರ್‍ ಗೆ ಸ್ಕೋಪ್ ಇಲ್ಲದೇ ಇರುವ ಪಾತ್ರಗಳು ಎಂದು ಹೇಳಬಹುದಾಗಿದೆ. ಆಕೆ ಕಥೆಯಲ್ಲಿ ಪ್ರಾಮುಖ್ಯತೆ ಇರುವ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಾರೆ. ಇನ್ನೂ ಇತ್ತೀಚಿಗೆ ಆಕೆ ಪೊನ್ನಿಯನ್ ಸೆಲ್ವನ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು, ಈ ಸಿನೆಮಾದಲ್ಲಿ ಐಶ್ವರ್ಯ ರೈ ನಟನೆಗೆ ಒಳ್ಳೆಯ ಮಾರ್ಕ್ಸ್ ಸಹ ಬಿದ್ದಿದೆ. ಇದೀಗ ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಐಶ್ವರ್ಯ ರೈ ತಮಗೆ ಸಿನೆಮಾಗಳಲ್ಲಿ ಬರುವಂತಹ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.  ಬಾಲಿವುಡ್ ನಲ್ಲಿ ಒಳ್ಳೆಯ ಪಾತ್ರಗಳ ಅವಕಾಶಗಳು ಕಡಿಮೆ ಬರುತ್ತಿವೆ ಎಂದು ಐಶ್ವರ್ಯ ಹೇಳಿದ್ದಾರೆ. ಇನ್ನೂ ಯಾವುದೇ ಒಂದು ಪಾತ್ರ ಜನರಿಗೆ ಅಥವಾ ನಟರಿಗೆ ಅಥವಾ ನಿರ್ದೇಶಕರಿಗೆ ಸೂಕ್ತ ಎನಿಸಿದಾಗ ಈ ರೀತಿ ಹುಟ್ಟುತ್ತದೆ. ಈ ರೀತಿಯ ಪ್ರಶ್ನೆಗಳು ಬರುವುದು ಒಂದು ಮಾದರಿ ಪ್ರಶಂಸೆಗೆ ಸಹ ಕಾರಣವಾಗಿದೆ. ಇನ್ನೂ ನನಗೆ ಶಕ್ತಿಯುತವಾದ ಪಾತ್ರ ನೀಡಿದಂತಹ ಮಣಿರತ್ನಂ ರವರಿಗೆ ತುಂಬಾ ಧನ್ಯವಾದಗಳು, ನಾನು ಅವರನ್ನು ತುಂಬಾ ಗೌರವಿಸುತ್ತೇನೆ, ಹೊಗಳುತ್ತೇನೆ ಎಂದಿದ್ದಾರೆ.

ಇನ್ನೂ ಮಣಿರತ್ನರವರ ಇರುವರ್‍, ಗುರು, ರಾವಣನ್ ಮೊದಲಾದ ಸಿನೆಮಾಗಳಲ್ಲಿ ಐಶ್ವರ್ಯ ರೈ ನಟಿಸಿದ್ದಾರೆ. ಈ ಸಿನೆಮಾಗಳ ಬಳಿಕ ಐಶ್ವರ್ಯ ಪೊನ್ನಿಯನ್ ಸೆಲ್ವನ್ ಸಿರೀಸ್ ನಲ್ಲಿ ನಟಿಸಿದ್ದಾರೆ. ತನ್ನ ಸಿನಿ ಕೆರಿಯರ್‍ ನಲ್ಲಿ ಪೊನ್ನಿಯನ್ ಸೆಲ್ವನ್ ಸಿನೆಮಾದಲ್ಲಿ ನಂದಿನಿ ಪಾತ್ರ ತುಂಬಾ ಅದ್ಬುತವಾದುದು ಎಂದು ಹೇಳಿದ್ದಾರೆ. ಇನ್ನೂ ಬಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಅತ್ಯುತ್ತಮ ಪಾತ್ರಗಳನ್ನು ನೀಡಿರುವುದು ತಮಿಳಿನ ಸಿನೆಮಾಗಳು ಎಂದರೇ ತಪ್ಪಾಗಲಾರದು. ಅದರಲ್ಲೂ ಶಂಕರ್‍ ಹಾಗೂ ಮಣಿರತ್ನಂ ರವರ ನಿರ್ದೇಶನದಲ್ಲಿ ನಟಿಸಿದ ಅನೇಕ ಸಿನೆಮಾಗಳು ಐಶ್ವರ್ಯ ರೈಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದೆ. ಇನ್ನೂ ಬಾಲಿವುಡ್ ನಲ್ಲಿ ಐಶ್ವರ್ಯ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಆಕೆ ಅನೇಕ ಸೋಲುಗಳನ್ನು ಕಂಡರು. ಸಲ್ಮಾನ್ ಖಾನ್ ಜೊತೆಗೆ ಬ್ರೇಕಪ್ ಮಾಡಿಕೊಂಡ ಬಳಿಕವಂತೂ ಆಕೆಗೆ ಅವಕಾಶಗಳು ಬರಲೇ ಇಲ್ಲ ಎನ್ನಲಾಗಿದೆ.

Previous articleಬಾಡಿಕಾನ್ ಬ್ಯಾಕ್ ಲೆಸ್ ಔಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ವಾಣಿ ಕಪೂರ್, ವೈರಲ್ ಆದ ಕಿಲ್ಲಿಂಗ್ ಪೋಸ್….!
Next articleಸೂಪರ್ ಸ್ಟಾರ್ ರಜನಿಕಾಂತ್ ರವರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ, ಸಿನೆಮಾಗಳಿಂದ ದೂರವುಳಿಯಲಿದ್ದಾರಂತೆ ತಲೈವಾ?