Film News

ದೊಡ್ಡ ಸಿನೆಮಾ ಕುಟುಂಬದ ಅಳಿಯನಾಗಲಿದ್ದಾನೆ ಯಂಗ್ ಹಿರೋ ಅಡವಿ ಶೇಷ್, ಜೂ.16 ರಂದು ಮುಹೂರ್ತ ಫಿಕ್ಸ್ ಅಂತೆ?

ಟಾಲಿವುಡ್ ನಲ್ಲಿ ವಿಭಿನ್ನ ಸಿನೆಮಾಗಳು, ವಿಭಿನ್ನ ಪಾತ್ರಗಳ ಮೂಲಕ ಕ್ರೇಜ್ ಪಡೆದುಕೊಂಡ ಅಡಿವಿಶೇಷ್ ಇತ್ತಿಚಿಗಷ್ಟೆ ಹಿಟ್-2 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅಡಿವಿಶೇಷ್ ಇತ್ತಿಚಿಗೆ ಅನೇಕ ಹಿಟ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಆತ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಒಳ್ಳೆಯ ಸಕ್ಸಸ್ ಕಂಡುಕೊಳ್ಳುತ್ತಾ, ಬಾಕ್ಸ್ ಆಫೀಸ್ ನಲ್ಲೂ ಸಹ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಇದೀಗ ಅಡಿವಿಶೇಷ್ ಶೀಘ್ರದಲ್ಲೇ ಗೃಹಸ್ತಾಶ್ರಮಕ್ಕೆ ಎಂಟ್ರಿ ಕೊಡಲಿದ್ದಾರಂತೆ. ತೆಲುಗು ಸಿನಿರಂಗದ ದೊಡ್ಡ ಕುಟುಂಬದ ಅಳಿಯನಾಗಲಿದ್ದಾನಂತೆ. ಅಷ್ಟಕ್ಕೂ ಅಡವಿ ಶೇಷ್ ಮದುವೆಯಾಗಲಿರುವುದು ಯಾರನ್ನು ಎಂಬ ವಿಚಾರಕ್ಕೆ ಬಂದರೇ.

ತೆಲುಗು ಸಿನಿರಂಗದ ಯಂಗ್ ಹಿರೋಗಳ ಸಾಲಿನಲ್ಲಿರುವ ಅಡವಿ ಶೇಷ್ ಹಿರೋ ಆಗುವುದಕ್ಕೂ ಮುಂಚೆ ಅನೇಕ ಸಿನೆಮಾಗಳಲ್ಲಿ ವಿಲನ್ ಆಗಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ಪಂಜಾ ಸಿನೆಮಾದ ಮೂಲಕ ವಿಲನ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಡವಿ ಶೇಷ್ ಬಲಪು, ದೊಂಗಾಟ, ಬಾಹುಬಲಿ ಸೇರಿದಂತೆ ಹಲವು ಸಿನೆಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡರು. ಕ್ಷಣಂ ಎಂಬ ಸಿನೆಮಾದ ಮೂಲಕ ಹಿರೋ ಆದರು. ಆ ಸಿನೆಮಾ ಭಾರಿ ಹಿಟ್ ಪಡೆದುಕೊಂಡಿತ್ತು. ಬಳಿಕ ಗುಡಾಚಾರಿ, ಎವರು, ಅಮಿತುಮಿ, ಮೇಜರ್‍, ಹಿಟ್ -2 ಸಿನೆಮಾಗಳಲ್ಲಿ ಹಿರೋ ಆಗಿ ಹಿಟ್ ಗಳನ್ನು ಸಹ ಪಡೆದುಕೊಂಡರು. ಇದೀಗ ಅಡವಿ ಶೇಷ್ ಗೂಡಾಚಾರಿ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿವಲಯದಲ್ಲಿ ಅಡವಿ ಶೇಷ್ ರವರ ವೈಯುಕ್ತಿಕ ಸುದ್ದಿಯೊಂದು ಕೇಳಿಬರುತ್ತಿದೆ.

ಸುಮಾರು ದಿನಗಳಿಂದ ಅಡವಿ ಶೇಷ್ ನಟಿ ಕಂ ಪ್ರೊಡ್ಯೂಸರ್‍ ಸುಪ್ರಿಯಾ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಿದೆ. ಅಕ್ಕಿನೇನಿ ನಾಗೇಶ್ವರ್‍ ರಾವ್ ರವರ ಮೊಮ್ಮಗಳಾದ ಸುಪ್ರಿಯಾ ಪವನ್ ಕಲ್ಯಾಣ್ ಜೊತೆಗೆ ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ ಸಿನೆಮಾದಲ್ಲಿ ನಟಿಸಿದ್ದರು. ಆ ಸಿನೆಮಾ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಆದರೆ ಅನ್ನಪೂರ್ಣ ಸ್ಟೂಡಿಯೋ ವನ್ನು ಆಕೆಯೇ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಅಡವಿ ಶೇಷ್ ಅಭಿನಯದ ಗೂಡಾಚಾರಿ ಸಿನೆಮಾದಲ್ಲಿ ಸುಪ್ರಿಯಾ ಪ್ರಮುಖ ಪಾತ್ರವೊಂದನ್ನು ಪೋಷಣೆ ಮಾಡಿದ್ದರು. ಇದೇ ಸಮಯದಲ್ಲೇ ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟರಂತೆ. ಕಡಿಮೆ ಸಮಯದಲ್ಲೇ ಅವರಿಬ್ಬರು ಪ್ರೀತಿಗೆ ಬಿದ್ದರಂತೆ. ಆದರೆ ಈ ಹಿಂದೆ ಈ ಬಗ್ಗೆ ಅಡವಿ ಶೇಷ್ ಸಹ ರಿಯಾಕ್ಟ್ ಆಗಿದ್ದು ಎಲ್ಲವೂ ಸುಳ್ಳು ಎಂದು ತಳ್ಳಿಹಾಕಿದ್ದರು.

ಆದರೆ ಅವರಿಬ್ಬರು ಸೀಕ್ರೇಟ್ ಆಗಿ ಪ್ರೈವೇಟ್ ಪಾರ್ಟಿಗಳು, ಪಬ್ ಗಳಿಗೆ ಹೋಗುವುದು, ವೇಕೇಷನ್ ಗಳಿಗೆ ಹೋಗಿದ್ದಾರೆ ಎಂಬ ಕೆಲ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿದ್ದವು. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಅವರಿಬ್ಬರೂ ಜೂ.16 ರಂದು ಮದುವೆಯಾಗಲಿದ್ದಾರೆ. ಈಗಾಗಲೇ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ ಎಂಬ ಸುದ್ದ ಜೋರಾಗಿ ಕೇಳಿಬರುತ್ತಿದೆ. ಅಷ್ಟೇಅಲ್ಲದೇ ಈ ಸುದ್ದಿಯನ್ನು ಅಡವಿ ಶೇಷ್ ಅಧಿಕೃತವಾಗಿ ಶೀಘ್ರದಲ್ಲೇ ಘೋಷಣೆ ಸಹ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅಡವಿ ಶೇಷ್ ಶೀಘ್ರದಲ್ಲೇ ಅಕ್ಕಿನೇನಿ ಕುಟುಂಬದ ಅಳಿಯನಾಗಲಿದ್ದಾನೆ. ಈ ಸುದ್ದಿ ನಿಜವೋ ಸುಳ್ಳೋ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

Most Popular

To Top