Film News

ರಜನಿಕಾಂತ್ ರವರನ್ನೇ ಸೌಂದರ್ಯದ ಮೂಲಕ ಆಶ್ಚರ್ಯಪಡಿಸಿದರಂತೆ ಆ ಸ್ಟಾರ್ ನಟಿ, ವೈರಲ್ ಆದ ಕಾಮೆಂಟ್ಸ್……!

ಸಿನಿರಂಗದಲ್ಲಿ ಸ್ಟಾರ್‍ ಡಂ ಪಡೆದುಕೊಳ್ಳಲು ಅನೇಕ ನಟ-ನಟಿಯರು ತುಂಬಾನೆ ಪ್ರಯತ್ನಗಳನ್ನು ಮಾಡಿರುತ್ತಾರೆ. ಕಠಿಣ ಪರಿಶ್ರಮದಿಂದ ಏಳು ಬೀಳುಗಳನ್ನು ಕಂಡು ಸ್ಟಾರ್‍ ಗಳಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಸೂಪರ್‍ ಸ್ಟಾರ್‍ ರಜನಿಕಾಂತ್ ಸಹ ಸೇರುತ್ತಾರೆ. ಇದೀಗ ಓರ್ವ ನಟಿ ಸೌಂದರ್ಯದ ಮೂಲಕ ರಜನಿಕಾಂತ್ ರವರನ್ನೇ ಆಶ್ಚರ್ಯಪಡುವಂತೆ  ಮಾಡಿದ್ದರಂತೆ. ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ವಯಸ್ಸಾದರೂ ಸಹ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಜನಿಕಾಂತ್ ನೆಲ್ಸನ್ ದಿಲೀಪ್ ನಿರ್ದೇಶನದಲ್ಲಿ ಸೆಟ್ಟೇರಿರುವ ಜೈಲರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗೆ ಈಗಾಗಲೇ ಒಳ್ಳೆಯ ಬ್ಯುಸಿನೆಸ್ ಸಹ ಬರುತ್ತಿದೆ. ಇದೀಗ ನಟ ರಜನಿಕಾಂತ್ ಸೀನಿಯರ್‍ ನಟಿ ಮೀನಾ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ರಜನಿಕಾಂತ್ ಹಾಗೂ ಮೀನಾ ಕಾಂಬಿನೇಷನ್ ನಲ್ಲಿ ಸಹ ಕೆಲವೊಂದು ಸಿನೆಮಾಗಳು ಬಂದಿವೆ. ನನಗೆ ಇಷ್ಟವಾದ ನಟಿಯರಲ್ಲಿ ಮೀನಾ ಸಹ ಒಬ್ಬರಾಗಿದ್ದಾರೆ ಎಂದಿದ್ದಾರೆ. ಇದೀಗ ನಟಿ ಮೀನಾ ಬಗ್ಗೆ ರಜನಿಕಾಂತ್ ರವರು ಮಾಡಿದ ಕಾಮೆಂಟ್ ಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಇನ್ನೂ ಸಿನೆಮಾವೊಂದರಲ್ಲಿ ಮೀನಾ ನನ್ನ ಮಗಳಾಗಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಮೀನಾಗೆ ಏಳು ವರ್ಷ ವಯಸ್ಸಾಗಿತ್ತು ಬಳಿಕ ಮತ್ತೊಂದು ಸಿನೆಮಾದಲ್ಲಿ ಮಾವನ ಪಾತ್ರದಲ್ಲಿ ನಟಿಸಿದ್ದೆ. ಆದರೆ ಯಾಜಮನ್ ಎಂಬ ಸಿನೆಮಾದಲ್ಲಿ ನಟಿಸುವ ಸಮಯದಲ್ಲಿ ಈ ಸಿನೆಮಾದಲ್ಲಿ ಹಿರೋಯಿನ್ ಮೀನಾ ಎಂದ ಕೂಡಲೇ ನಾನು ಸಹ ಶಾಕ್ ಆಗಿದ್ದೆ. ನಾನು ನೋಡಿದಂತಹ ಚಿಕ್ಕ ಹುಡುಗಿ ಇದೀಗ ತುಂಬಾ ಸುಂದರವಾಗಿದ್ದಾರೆ. ಆಕೆಯ ಸೌಂದರ್ಯ ಕಂಡು ನಾನು ಆಶ್ಚರ್ಯಪಟ್ಟೆ. ಮೀನಾಗೆ ತುಂಬಾ ಪ್ರಮಾಣಿಕಳು ಹಾಗೂ ಪ್ರತಿಭಾವಂತಳು. ಆಕೆಗಿರುವಂತಹ ಉನ್ನತವಾದ ಯೋಚನೆಗಳ ಮೂಲಕವೇ ಆಕೆ ಈ ಸ್ಥಾನಕ್ಕೆ ತಲುಪಿದ್ದಾರೆ. ಇನ್ನೂ ನಮ್ಮ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಮೀನಾ ಭಾಗವಹಿಸಬೇಕೆಂದು ರಜನಿಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಈ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸದ್ಯ ರಜನಿಕಾಂತ್ ಜೈಲರ್‍ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾಗಾಗಿ ರಜನಿಕಾಂತ್ ಸುಮಾರು ಐವತ್ತು ಕೋಟಿ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ ಎಂದೂ ಸಹ ಕೇಳಿಬರುತ್ತಿದೆ. ಈ ಹಿಂದೆ ರಜನಿಕಾಂತ್ ಕಾಣಿಸಿಕೊಂಡ ಕೆಲವೊಂದು ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಇದೀಗ ಜೈಲರ್‍ ಸಿನೆಮಾ ಒಳ್ಳೆಯ ಸಕ್ಸಸ್ ಕಾಣಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ.

Most Popular

To Top