ಜೈಲರ್ ಸಿನೆಮಾದ ಶೂಟಿಂಗ್ ಮುಗಿಸಿದ ಸೂಪರ್ ಸ್ಟಾರ್ ರಜನಿ, ಮಾಲ್ಟಿವ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವ ತಲೈವಾ, ವೈರಲ್ ಆದ ಪೊಟೋಸ್…..!

Follow Us :

ದೇಶದ ಸಿನಿರಂಗದ ಸ್ಟಾರ್‍ ನಟರಲ್ಲೊಬ್ಬರಾದ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ವಯಸ್ಸಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಭಾರಿ ಸಂಭಾವನೆಯನ್ನು ಪಡೆದುಕೊಳ್ಳಯತ್ತಾ ಟಾಪ್ ನಟರ ಸಾಲಿನಲ್ಲಿ ಸಹ ಇದ್ದಾರೆ. ಇನ್ನೂ ರಜನಿಕಾಂತ್ ರವರ ಬಹುನಿರೀಕ್ಷಿತ ಜೈಲರ್‍ ಹಾಗೂ ಲಾಲ್ ಸಲಾಮ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೂಟಿಂಗ್ ಸಹ ಕೆಲವು ದಿನಗಳ ಹಿಂದೆಯಷ್ಟೆ ಮುಕ್ತಾಯಗೊಳಿಸಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿ ರಜನಿಕಾಂತ್ ಮಾಲ್ಡೀವ್ಸ್ ಗೆ ವೆಕೇಷನ್ ಗಾಗಿ ಹಾರಿದ್ದಾರೆ. ಅಲ್ಲಿನ ಪ್ರಾಕೃತಿಕ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ಜೈಲರ್‍ ಸಿನೆಮಾ ಇದೇ ಆಗಸ್ಟ್ 10 ರಂದು ತೆರೆಗೆ ಬರಲಿದೆ. ಅದೇ ರೀತಿ ಲಾಲ್ ಸಲಾಂ ಎಂಬ ಸಿನೆಮಾದಲ್ಲೂ ಸಹ ರಜನಿಕಾಂತ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನೆಮಾ ರಜನಿ ರವರ ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡಿದ್ದಾರೆ. ಜೈಲರ್‍ ಸಿನೆಮಾಗಾಗಿ ರಜನಿಕಾಂತ್ ಸುಮಾರು ದಿನಗಳಿಂದ ತುಂಬಾನೆ ಕಷ್ಟಪಟ್ಟಿದ್ದಾರೆ. ನಿರಂತರವಾಗಿ ಶೂಟಿಂಗ್ ನಲ್ಲಿ ಭಾಗಿಯಾಗಿ ಕೊನೆಗೆ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸಿನೆಮಾದ ಶೂಟಿಂಗ್ ನಿಂದ ಇದೀಗ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ರಜನಿಕಾಂತ್ ಮಾಲ್ಡಿವ್ಸ್ ಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೂ ಮಾಲ್ಟಿವ್ಸ್ ನಲ್ಲಿ ಕಾಣಿಸಿಕೊಂಡ ರಜನಿಕಾಂತ್ ರವರ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸದ್ಯ ರಜನಿಕಾಂತ್ ರವರು ಮಾಲ್ಡೀವ್ಸ್ ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಮಾಲ್ಡೀವ್ಸ್ ಬೀಚ್ ನಲ್ಲಿ ಎಂಜಾಯ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್‍ ಟೀ ಶರ್ಟ್ ಹಾಗೂ ಕಪ್ಪು ಕಲರ್‍ ಶಾರ್ಟ್ಸ್ ಧರಿಸಿ ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಬೀಚ್ ಬಳಿ ಓಡಾಡುತ್ತಿರುವಂತಹ ಪೊಟೋ ಸಹ ವೈರಲ್ ಆಗಿದೆ. ಸದ್ಯ ರಜನಿಕಾಂತ್ ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಇನ್ನೂ ಭಾರತಕ್ಕೆ ಮರಳಿದ ಕೂಡಲೇ ಜೈಲರ್‍ ಸಿನೆಮಾ ಪ್ರಮೋಷನ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಜೈಲರ್‍ ಸಿನೆಮಾದಲ್ಲಿ ರಜನಿಕಾಂತ್ ರವರಿಗೆ ಜೋಡಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ಕನ್ನಡ ಸಿನಿರಂಗದ ಸ್ಟಾರ್‍ ನಟ ಶಿವರಾಜ್ ಕುಮಾರ್‍ ರವರೂ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಬಾಲಿವುಡ್ ನ ಜಾಕಿ ಶ್ರಾಫ್, ರಮ್ಯಕೃಷ್ಣ ಸೇರಿದಂತೆ ಅನೇಕ ಸ್ಟಾರ್‍ ಕಲಾವಿದರು ಈ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನೂ ಜೈಲರ್‍ ಸಿನೆಮಾದ ಕಾವಲಯ್ಯ ಎಂಬ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡು ಇದೀಗ ಸಖತ್ ಸದ್ದು ಮಾಡುತ್ತಿದೆ.