ನನಗೆ ಇಬ್ಬರು ಮಕ್ಕಳು ಎಂದು ಶಾಕ್ ಕೊಟ್ಟಾ ಈಷಾ ರೆಬ್ಬಾ, ಮದುವೆ ಆಗದೇ ಮಕ್ಕಳಿದ್ದಾರೆ ಎಂದು ಬಾಂಬ್ ಸಿಡಿಸಿದ ನಟಿ…..!

Follow Us :

ಟಾಲಿವುಡ್ ನಲ್ಲಿ ಸಾಮಾನ್ಯವಾಗಿ ಸ್ಥಳೀಯ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇದನ್ನು ಸುಳ್ಳು ಮಾಡಿ ಅನೇಕ ಸ್ಥಳೀಯ ನಟಿಯರೇ ಹೆಚ್ಚು ಕ್ರೇಜ್ ಹುಟ್ಟಿಸುತ್ತಿರುತ್ತಾರೆ. ಈ ಸಾಲಿಗೆ ನಟಿ ಈಶಾ ರೆಬ್ಬಾ ಸಹ ಸೇರಿಕೊಳ್ಳುತ್ತಾರೆ. ನೋಡಿದ ಕೂಡಲೇ ಮತ್ತೆ ನೋಡಬೇಕು ಎನ್ನಿಸುವ ಸೌಂದರ್ಯ, ತುಂಬಾ ಅದ್ಬುತವಾದ ನಟನೆಯೊಂದಿಗೆ ಕಡಿಮೆ ಸಮಯದಲ್ಲೇ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಇದೀಗ ತನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಸಹ ಇದೆ.

ಯಂಗ್ ಬ್ಯೂಟಿ ಈಶಾ ರೆಬ್ಬಾ ಲೈಫ್ ಈಸ್ ಬ್ಯೂಟಿಪುಲ್ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಪರಿಚಯವಾದ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಿನೆಮಾಗೂ ಎಂಟ್ರಿ ಕೊಡುವ ಮುಂಚೆ ಆಕೆ ಮಾಡಲಿಂಗ್ ಮೂಲಕ ರಂಜಿಸುತ್ತಿದ್ದರು. ಕೆರಿಯರ್‍ ಆರಂಭದಲ್ಲಿ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡ ಈಕೆಯ ಕೆರಿಯರ್‍ ಇದೀಗ ಕೊಂಚ ಸ್ಟ್ರಗಲ್ ನಲ್ಲಿದೆ ಎನ್ನಲಾಗಿದೆ. ಆಕೆಗೆ ಆಫರ್‍ ಗಳು ಕಡಿಮೆಯಾಗಿದೆ. ತೆಲುಗು ನಟಿಯೆಂಬ ಕಾರಣದಿಂದ ಆಕೆಗೆ ಅವಕಾಶಗಳು ಬರುತ್ತಿಲ್ಲವೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲೇ ಈಷಾ ರೆಬ್ಬಾ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಹೆಚ್ಚಿಸಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ತಾನು ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ಸಹ ಸಿದ್ದ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಆಕೆ ಒಟಿಟಿ, ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ಈಷಾ ರೆಬ್ಬಾ ನಟನೆಯ ಮಯಾಬಜಾರ್‍ ಎಂಬ ವೆಬ್ ಸಿರೀಸ್ ಕೆಲವು ದಿನಗಳ ಹಿಂದೆಯಷ್ಟೆ ಸ್ಟ್ರೀಮಿಂಗ್ ಆಗುತ್ತಿದ್ದು, ಈ ಟೀಂ ಸುಮಾ ಹೋಸ್ಟ್ ಮಾಡುವಂತಹ ಸುಮಾ ಅಡ್ಡಾ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸುಮಾ ಬೇಗ ಮದುವೆಯಾಗಬೇಕೆಂದು ಯಾವಾಗ ಅನ್ನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಈಷಾ ಬೇಗ ಬೇಕು ಎನ್ನಿಸಿದಾಗ ಎಂದು ಉತ್ತರ ನೀಡುತ್ತಾರೆ. ಬಳಿಕ ಮದುವೆಯ ಬಗ್ಗೆ ಕೇಳಲಾಗಿದೆ. ಅದಕ್ಕೆ ಈಷಾ ಶಾಕಿಂಗ್ ಆನ್ಸರ್‍ ಕೊಟ್ಟಿದ್ದಾರೆ. ಈಗಾಗಲೇ ನನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಎಲ್ಲರೂ ಶಾಕ್ ಆಗಿದ್ದಾರೆ. ಬಳಿಕ ಆಂಕರ್‍ ಸುಮಾ ಅವರ ತಂದೆ ಎಲ್ಲಿದ್ದಾರೆ ಎಂದು ಕೇಳಿದ್ದಾರೆ. ಅದಕ್ಕೆ ಈಷಾ ರೆಬ್ಬಾ ಏನು ಉತ್ತರ ನೀಡಿದ್ದಾರೆ ಎಂಬುದು ಪುಲ್ ಶೋ ಪ್ರಸಾರವಾದ ಬಳಿಕ ಗೊತ್ತಾಗಲಿದೆ. ಸದ್ಯ ಇದು ಈ ಶೋನ ಪ್ರೊಮೋ ಆಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಇದೇ ತಿಂಗಳ 22 ರಂದು ಈ ಎಪಿಸೋಡ್ ಪ್ರಸಾರವಾಗಲಿದೆ.

ಸದ್ಯ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಈಷಾರೆಬ್ಬಾ ಒಟಿಟಿ ಸಿನೆಮಾಗಳು, ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದಾರೆ. ಇನ್ನೂ ಮಯಾಬಜಾರ್‍ ಎಂಬ ವೆಬ್ ಸಿರೀಸ್ ನಲ್ಲಿ ಈಷಾ ನಟಿಸಿದ್ದು, ಇದು ಸ್ಟ್ರೀಮಿಂಗ್ ಸಹ ಆಗುತ್ತಿದೆ. ಇದರ ಜೊತೆಗೆ ಸೀನಿಯರ್‍ ನಟ ಜೆಡಿ ಚಕ್ರವರ್ತಿ ಜೊತೆಗೆ ದಯ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದಾರೆ. ತೆಲುಗಿನಲ್ಲಿ ಮಾಮ ಮಶ್ಚಿಂದ್ರ ಸಿನೆಮಾದ ಜೊತೆಗೆ ತಮಿಳಿನಲ್ಲೂ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ.