Film News

ಪರೋಕ್ಷವಾಗಿ ಆಲಿಯಾ, ಇಲಿಯಾನ ಬಗ್ಗೆ ಹಾಟ್ ಕಾಮೆಂಟ್ ಮಾಡಿದ ತಾಪ್ಸಿ, ಮದುವೆಗೂ ಮುಂಚೆ ಪ್ರಗ್ನೆನ್ಸಿ ಬಗ್ಗೆ ಹಾಟ್ ಕಾಮೆಂಟ್….!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಜೊತೆಗೆ ಆಕೆ ಇತ್ತೀಚಿಗೆ ಭಾಗಿಯಾದ ಸಂದರ್ಶನದಲ್ಲಿ ಬೋಲ್ಡ್ ಕಾಮೆಂಟ್ಸ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ತಾಪ್ಸಿ ಮದುವೆಗೂ ಮುಂಚೆ ಗರ್ಭಿಣಿಯಾಗುವದರ ಬಗ್ಗೆ ಹಾಟ್ ಕಾಮೆಂಟ್ಸ್ ಮಾಡಿದ್ದು ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಿಂದ ಬಾಲಿವುಡ್ ಗೆ ಹಾರಿದ ತಾಪ್ಸಿ ಪನ್ನು ಬಾಲಿವುಡ್ ಸಿನೆಮಾಗಳಲ್ಲಿಯೇ ಪುಲ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಗೆ ಹೋಗಿದ ಬಳಿಕ ತಾಪ್ಸಿ ತುಂಬಾನೆ ಬದಲಾಗಿದ್ದಾರೆ ಎಂದು ಹೇಳಬಹುದಾಗಿದೆ. ನಟನಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ, ಸಮಯ ಸಿಕ್ಕಾಗಲೆಲ್ಲಾ ಗ್ಲಾಮರಸ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ವಿವಾದಗಳಿಗೆ ಕೇರಾಫ್ ಎಂಬಂತೆ ಕೆಲವೊಂದು ವಿವಾದಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಆಕೆ ಟಾಲಿವುಡ್ ನಿಂದ ಕೆರಿಯರ್‍ ಶುರು ಮಾಡಿದರೂ ಸಹ ಟಾಲಿವುಡ್ ಬಗ್ಗೆ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಟಾಲಿವುಡ್ ಸಿನಿರಂಗದ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

ನಟಿ ತಾಪ್ಸಿ ಯಾವುದೇ ಉತ್ತರ ನೀಡಿದರೂ ಸಹ ನೇರವಾಗಿರುವುದಿಲ್ಲ. ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿರುತ್ತದೆ. ಇನ್ನೂ ಇತ್ತೀಚಿಗಷ್ಟೆ ಆಕೆ ತಮ್ಮ ಸೋಷಿಯಲ್ ಮಿಡಿಯಾ ಫಾಲೊವರ್ಸ್ ಜೊತೆಗೆ ಚಿಟ್ ಚಾಟ್ ಮಾಡಿದ್ದರು. ಈ ವೇಳೆ ಎಲ್ಲ ಹಿರೋಯಿನ್ ಗಳಿಗೆ ಕೇಳುವಂತೆ ತಾಪ್ಸಿಗೂ ಸಹ ಅಭಿಮಾನಿಗಳು ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ತಾಪ್ಸಿ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ನೀಡಿದ್ದಾರೆ. ನಾನು ಇನ್ನೂ ಗರ್ಭಿಣಿಯಾಗಿಲ್ಲ ಅದಕ್ಕಾಗಿ ನನ್ನ ಮದುವೆ ಬೇಗ ಆಗದೇ ಇರಬಹುದು ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಅಭಿಮಾನಿಗಳು ಮದುವೆಯ ಬಗ್ಗೆ ಕೇಳಿದರೇ ಗರ್ಭದ ಬಗ್ಗೆ ಏಕೆ ಕೇಳಿದರು, ಏಕೆ ವಿವಾದ ಹುಟ್ಟಿಹಾಕಿದರು ಎಂಬ ಚರ್ಚೆ ಶುರುವಾಗಿದೆ. ಆಕೆ ಕೆಲವೊಂದು ನಟಿಯರು ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದರ ಬಗ್ಗೆ ತಾಪ್ಸಿ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆಲಿಯಾ ಭಟ್, ಇಲಿಯಾನಾ, ನೇಹಾ ಧೂಫಿಯಾ ಸೇರಿದಂತೆ ಅನೇಕ ನಟಿಯರು ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದಾರೆ. ಮದುವೆಗೂ ಮುಂಚೆ ಗರ್ಭ ಅದು ತಿಳಿದ ಕೂಡಲೇ ಮದುವೆ ಎಂಬ ಟ್ರೆಂಡ್ ನಡೆಯುತ್ತಿದೆ ಎಂಬ ಅರ್ಥದಲ್ಲಿ ತಾಪ್ಸಿ ಪರೋಕ್ಷವಾಗಿ ಹೇಳಿದ್ದಾರೆ. ಇನ್ನೂ ತಾಪ್ಸಿ ಸಹ ಬ್ಯಾಟ್ಮಿಂಟನ್ ಆಟಗಾರ ಮ್ಯಾತೀಸ್ ಬೋ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಅವರಿಬ್ಬರೂ ಅನೇಕ ಬಾರಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಆದರೆ ಮದುವೆಯ ಬಗ್ಗೆ ಮಾತ್ರ ತಾಪ್ರಿ ಒಪೆನ್ ಆಗುತ್ತಿಲ್ಲ.

Most Popular

To Top