Film News

ಅಮಿತಾಬ್ ಬಗ್ಗೆ ಎಗ್ಸೈಟ್ ಮೆಂಟ್ ನೋಟ್ ಹಂಚಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್, ಮತ್ತೊಮ್ಮೆ ಜಂಟಿಯಾಗಿ ನಟಿಸಲಿದ್ದಾರೆ ಸ್ಟಾರ್ ಗಳು….!

ಬಾಲಿವುಡ್ ಸಿನಿರಂಗದಲ್ಲಿ ಮೆಗಾಸ್ಟಾರ್‍ ಎಂತಲೇ ಕರೆಯಲಾಗುವ ಅಮಿತಾಬ್ ಬಚ್ಚನ್ ಹಾಗೂ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಕಾಂಬಿನೇಷನ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದು, ಆ ಸಿನೆಮಾಗಳು ಸೂಪರ್‍ ಹಿಟ್ ಸಹ ಆಗಿದೆ. ಅದಾ ಕಾನೂನ್, ಗಿರಾಫ್ತಾರ್‍ ಸಿನೆಮಾಗಳಲ್ಲಿ ನಟಿಸಿದ್ದರು. ಅವರಿಬ್ಬರ ಕಾಂಬಿನೇಷನ್ ನಲ್ಲಿ 1991 ರಲ್ಲಿ ತೆರೆಕಂಡ ಹಮಾ ಎಂಬ ಸಿನೆಮಾ ಮಾತ್ರ ಭಾರಿ ಹಿಟ್ ಪಡೆದುಕೊಂಡಿದ್ದು, ಅತ್ಯಧಿಕ ಕಲೆಕ್ಷನ್ ಸಹ ಮಾಡಿದೆ. ಇದೀಗ ಮತ್ತೊಮ್ಮೆ ಈ ಸ್ಟಾರ್‍ ನಟರ ಕಾಂಬಿನೇಷನ್ ಬರಲಿದ್ದು, ರಜನಿಕಾಂತ್ ರವರು ಎಗ್ಸೈಟ್ ಮೆಂಟ್ ಆಗಿ ನೋಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸುಮಾರು 33 ವರ್ಷಗಳ ಬಳಿಕ ಈ ಸ್ಟಾರ್‍ ಗಳು ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಅಮಿತಾಬ್ ರವರ ಸಿನೆಮಾದಲ್ಲಿ ರಜನಿಕಾಂತ್ ರವರನು ನಟಿಸುತ್ತಿದ್ದರು. ಅವರಿಬ್ಬರು ಮಾಡಿದಂತಹ ಎಲ್ಲಾ ಸಿನೆಮಾಗಳು ಹಿಂದಿ ಭಾಷೆಯ ಸಿನೆಮಾಗಳು. ಆದರೆ ಇದೀಗ ರಜನಿಕಾಂತ್ ರವರ ಸಿನೆಮಾದಲ್ಲಿ ಅಮಿತಾಬ್ ನಟಿಸಲಿದ್ದಾರೆ. ಜೈಭೀಮ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ತಲೈವರ್ 170 ವರ್ಕಿಂಗ್ ಟೈಟಲ್ ನಲ್ಲಿ ಸಿನೆಮಾ ಒಂದು ಸೆಟ್ಟೇರಲಿದೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಿಂದ ಅಮಿತಾಬ್, ಟಾಲಿವುಡ್ ನಿಂದ ರಾಣಾ, ಮಲಯಾಳಂ  ನಿಂದ ಫಹಾದ್ ಫಾಜಿಲ್ ಜೊತೆಗೆ ಮತಷ್ಟು ಸ್ಟಾರ್‍ ಕಲಾವಿದರು ಈ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನೆಮಾವನ್ನು ದೈತ್ಯ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇತ್ತೀಚಿಗಷ್ಟೆ ರಜನಿಕಾಂತ್ ಹಾಗು ಅಮಿತಾಬ್ ಇಬ್ಬರೂ ಈ ಸಿನೆಮಾಗಾಗಿ ಭೇಟಿ ಯಾಗಿದ್ದಾರೆ. ಈ ಸಂದರ್ಭವಾಗಿ ಸಂತೋಷವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ರಜನಿಕಾಂತ್ ಬಿಗ್ ಬಿ ಜೊತೆಗೆ ತೆಗೆದ ಪೊಟೋ ಒಂದನ್ನು ಟ್ವಿಟರ್‍ ಮೂಲಕ ಹಂಚಿಕೊಂಡು, 33 ವರ್ಷಗಳ ಬಳಿಕ ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಲೈಕಾ ಸಿನೆಮಾ ತಲೈವರ್‍ 170 ರಲ್ಲಿ ನನ್ನ ಗುರು ಅಮಿತಾಬ್ ಬಚ್ಚನ್ ಜೊತೆಗೆ ನಟಿಸುತ್ತಿರುವುದು ತುಂಬಾನೆ ಸಂತೋಷವಾಗಿದ್ದು, ನನ್ನ ಹೃದಯ ಸಂತೋಷದಿಂದ ಬಡಿದುಕೊಳ್ಳುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ರಜಿನಿ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟ ಅಮಿತಾಬ್ ರವರು ಇತ್ತಿಚಿಗೆ ಸೌತ್ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈರಾ ನರಸಿಂಹರೆಡ್ಡಿ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಕಲ್ಕಿ 2898ಎಡಿ ಎಂಬ ಪ್ಯಾನ್ ವರ್ಲ್ಡ್ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ತಮ್ಮ ಬ್ಯುಸಿ ನಡುವೆ ಇದೀಗ ರಜನಿಕಾಂತ್ ರವರ ಸಿನೆಮಾದಲ್ಲೂ ಸಹ ನಟಿಸಲು ಒಪ್ಪಿದ್ದಾರೆ. ರಜನಿಕಾಂತ್ ಕೊನೆಯದಾಗಿ ಜೈಲರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಭಾರಿ ಸಕ್ಸಸ್ ಕಂಡಿದ್ದು, ಬರೊಬ್ಬರಿ 600 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Most Popular

To Top