ಇಳಿ ವಯಸ್ಸಿನ ತಂದೆಗೆ ಮದುವೆ ಮಾಡಿಸಿದ ಮಗಳು, ಭರ್ಜರಿಯಾಗಿ ನಡೆದ ಕಲ್ಯಾಣೋತ್ಸವ, ವೈರಲ್ ಆದ ಪೊಟೋಸ್…..!

Follow Us :

ತನ್ನ ಪ್ರೀತಿಯ ತಂದೆಗೆ ಇಳಿ ವಯಸ್ಸಿನಲ್ಲಿ ಅಂದರೇ 62ನೇ ವರ್ಷದ ತಂದೆಗೆ ಹೆಣ್ಣು ಮಗಳು ಮದುವೆ ಮಾಡಿಸುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಅನೇಕರು ತಂದೆ-ತಾಯಿ ರವರಿಗೆ ವಯಸ್ಸಾದ ಬಳಿಕ ವೃದ್ದಾಶ್ರಮಕ್ಕೆ ಕಳುಹಿಸಿದ ಉದಾಹರಣೆಗಳನ್ನು ನೋಡಿದ್ದೇವೆ. ತಂದೆ ತಾಯಿ ಯನ್ನು ಮಕ್ಕಳಂತೆ ನೋಡಿಕೊಂಡವರನ್ನು ನೋಡಿದ್ದೇವೆ. ತಮ್ಮ ಪ್ರೀತಿಯ ತಂದೆಗೆ ಆಸೆಯಾಗುವ ನಿಟ್ಟಿನಲ್ಲಿ ಆತನಿಗೆ 62ನೇ ವಯಸ್ಸಿನಲ್ಲಿ ಮದುವೆ ಮಾಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

62 ವರ್ಷದ ರಾಧಾಕೃಷ್ಣ ಕುರೂಪ್ ಎಂಬುವವರು ತಮ್ಮ ಮಕ್ಕಳ ಸಮ್ಮುಖದಲ್ಲಿ 60 ವರ್ಷದ ಮಲ್ಲಿಕಾ ಕುಮಾರಿ ಎಂಬಾಕೆಯನ್ನು ಕುತ್ತೂರು ಪೋತನ್ಮಲಾ ರಾಂಚು ಭವನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ರಾಧಾಕೃಷ್ಣ ರವರು ತಮ್ಮ ಮಕ್ಕಳು, ಅಳಿಯಂದಿರು ಹಾಗೂ ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ಮದುವೆಯಾಗಿದೆ. ಈ ಮದುವೆಗೆ ಎಲ್ಲರ ಸಂಪೂರ್ಣ ಒಪ್ಪಿಗೆಯಿತ್ತು ಎನ್ನಲಾಗಿದೆ. ಇನ್ನೂ ಸುಮಾರು ವರ್ಷಗಳಿಂದ ರಾಧಾಕೃಷ್ಣ ರವರು ಈರಂಗಾವ್ ದೇವಸ್ಥಾನದಲ್ಲಿ ಬಳಿ ಸುಗಂಧ ದ್ರವ್ಯ, ಲೇಖನ ಸಾಮಗ್ರಿ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಯನ್ನು ನಡೆಸುತಿದ್ದರು ಎನ್ನಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಆತನ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ರೀತಿ ಮಲ್ಲಿಕಾ ಕುಮಾರಿ ರವರ ಪತಿ ಕೂಡ ಮೃತಪಟ್ಟಿದ್ದರು. ಮಲ್ಲಿಕಾ ಕುಮಾರಿಗೆ ಮಕ್ಕಳಿಲ್ಲದ ಕಾರಣ ಆಕೆ ಮನೆಯಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು.

ಇನ್ನೂ ರಾಧಾಕೃಷ್ಣನ್ ಕುರುಪ್ ರವರಿಗೆ ರಶ್ಮಿ ಹಾಗೂ ರಂಜು ಎಂಬ ಇಬ್ಬರು ಪುತ್ರಿಯರು  ಹಾಗೂ ರಂಜಿತ್ ಎಂಬ ಓರ್ವ ಮಗನಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ರಂಜಿತ್ ಕೊಲ್ಲಂ ನಲ್ಲಿ ಹಾಸ್ಟಲ್ ನಲ್ಲಿದ್ದುಕೊಂಡ ಓದುತ್ತಿದ್ದಾನೆ ಎನ್ನಲಾಗಿದೆ. ರಾಧಾಕೃಷ್ಣರವರ ಕಿರಿಯ ಮಗಳು ಪತಿಯೊಂದಿಗೆ ವಿದೇಶದಲ್ಲಿದ್ದರು. ಕಳೆದೆರಡು ತಿಂಗಳ ಹಿಂದೆ ರಂಜು ತವರು ಮನೆಗೆ ಬಂದಿದ್ದರು. ಈ ವೇಳೆ ಕಾಯಿಲೆಯಿಂದ ನರಳುತ್ತಿದ್ದ ತಂದೆಯ ನೋವು ಆಕೆಗೆ ಅರ್ಥವಾಗಿದೆ. ಆಕೆ ಪುನಃ ಮನೆಗೆ ವಾಪಸ್ಸಾಗುವ ಮುಂಚೆ ತಂದೆಗೆ ಮದುವೆ ಮಾಡಿಸಲು ನಿರ್ಧಾರ ಮಾಡಿದ್ದರಂತೆ. ಕೂಡಲೇ ಮಾಟ್ರಿಮೋನಿಯಲ್ಲಿ ತಂದೆಯ ಬಯೋಡೆಟಾ ಸಹ ಅಪ್ಡೇಟ್ ಮಾಡಿದ್ದರು. ಈ ಹಾದಿಯಲ್ಲೇ ರಾಧಾಕೃಷ್ಣ ಕುರುಪ್ ಹಾಗೂ ಮಲ್ಲಿಕಾ ರವರ ಮದುವೆ ನಡೆದಿದೆ. ವೃದ್ದಾಪ್ಯದ ಸಮಯದಲ್ಲಿ ಇಬ್ಬರಿಗೂ ಬೆಂಬಲ ಸಿಗಬೇಕೆಂಬ ದೃಷ್ಟಿಯಿಂದ ಈ ಮದುವೆ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಂಜು ಮಾಡಿದ ಈ ಕೆಲಸಕ್ಕೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.