ಮಕ್ಕಳಾಗಬೇಕಾದರೇ ಮಂಚಕ್ಕೆ ಹತ್ತಿರವಾಗಬೇಕು ಎಂದು ಬೋಲ್ಡ್ ಕಾಮೆಂಟ್ಸ್ ಮಾಡಿದ ಹಾಟ್ ಆಂಕರ್ ರಶ್ಮಿ….!

Follow Us :

ತೆಲುಗು ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಕಾಮಿಡಿ ಶೋಗಳಲ್ಲಿ ಜಬರ್ದಸ್ತ್ ಮೊದಲ ಸ್ಥಾನದಲ್ಲಿರುತ್ತದೆ. ಈ ಶೋ ನಲ್ಲಿ ಕಾಣಿಸಿಕೊಂಡ ಅನೇಕರು ಇದೀಗ ಸಿನೆಮಾಗಳಲ್ಲೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಬಹುಬೇಡಿಕೆಯುಳ್ಳ ಅನಸೂಯ ಹಾಗೂ ರಶ್ಮಿ ಸಹ ಇದೇ ಶೋ ನಿಂದ ಫೇಮಸ್ ಆಗಿದ್ದು. ಎಕ್ಸ್ಟ್ರಾ ಜಬರ್ದಸ್ತ್ ಹೋಸ್ಟ್ ಮಾಡುವ ರಶ್ಮಿ ಇದೀಗ ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಮಕ್ಕಳಾಗಬೇಕಾದರೇ ಮಂಚಕ್ಕೆ ಹತ್ತಿರವಾಗಿರಬೇಕು ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಕಂ ಆಂಕರ್‍ ರಶ್ಮಿ ಎಕ್ಸ್ಟ್ರಾ ಜಬರ್ದಸ್ತ್ ಹೋಸ್ಟ್ ಮಾಡುತ್ತಾರೆ. ಈ ಶೋ ನಲ್ಲಿ ಆಕೆ ಹಾಕುವ ಡೈಲಾಗ್ ಗಳು ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿರುತ್ತದೆ. ಇದೀಗ ಎಕ್ಸ್ಟ್ರಾ ಜಬರ್ದಸ್ತ್ ಪ್ರೊಮೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ರೊಹಿನಿ ಸಂತ್ತಿಪಂಡು ಗೆ ನಮ್ಮ ತಂದೆ ಕರೆ ಮಾಡಿ ಮಕ್ಕಳು ಬೇಕು ಎಂದು ಕೇಳುತ್ತಿದ್ದಾರೆ ಎಂದು ಡೈಲಾಗ್ ಹೇಳುತ್ತಾರೆ. ಊಟದ ತಟ್ಟೆಗೆ ಹತ್ತಿರವಿದ್ದರೇ ಮಕ್ಕಳು ಆಗಲ್ಲ ಎಂದು ಸತ್ತಿಪಂಡು ಹೇಳುತ್ತಾರೆ, ಅದಕ್ಕೆ ಕೂಡಲೇ ರಿಯಾಕ್ಟ್ ಆದ ರಶ್ಮಿ ಮಂಚಕ್ಕೆ ಹತ್ತಿರವಾಗಿರಬೇಕು ಎಂದು ಡೈಲಾಗ್ ಹೊಡೆಯುತ್ತಾರೆ. ಬಳಿಕ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದಲ್ಲಿ ಮಾಡಿದದಂತೆ ಸಾವಿರಕ್ಕೆ ಒಂದು ಪೂಜೆ, ಐದು ಸಾವಿರಕ್ಕೆ ಒಂದು ಪೀಜೆ ಹತ್ತು ಸಾವಿರಕ್ಕೆ ಒಂದು ಪೂಜೆ ಮಾಡಿದರೇ ಮಕ್ಕಳು ಆಗುತ್ತಾರೆ ಎಂದು ಡೈಲಾಗ್ ಹೊಡೆಯುತ್ತಾರೆ.

ಇನ್ನೂ ಈ ಎಪಿಸೋಡ್ ನಲ್ಲಿ ಜಡ್ಜ್ ಗಳಾಗಿ ಕೃಷ್ಣ ಭಗವಾನ್ ಹಾಗೂ ಖುಷ್ಬು ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ ಇದೇ ಮಾಹೆಯ 24 ರಂದು ಪ್ರಸಾರವಾಗಲಿದೆ. ಇನ್ನು ಸದ್ಯ ಬಿಡುಗಡೆಯಾದ ಪ್ರೊಮೋಗೆ ಲಕ್ಷಗಟ್ಟಲೇ ವ್ಯೂವ್ಸ್ ಸಹ ಬಂದಿದೆ. ಇನ್ನೂ ಕೆಲವೊಂದು ವಿಮರ್ಶೆಗಳೂ ಸಹ ಕೇಳಿಬರುತ್ತಿವೆ. ಈ ಹಿಂದೆ ಜಬರ್ದಸ್ತ್ ತುಂಬಾ ಚೆನ್ನಾಗಿತ್ತು. ಆಗ ಒಳ್ಳೆಯ ಡೈಲಾಗ್ ಗಳು ಇದ್ದವು. ಆದರೆ ಇದೀಗ ಜಬರ್ದಸ್ತ್ ಅಷ್ಟೊಂದು ಕ್ರೇಜ್ ಇಲ್ಲ ಎಂಬೆಲ್ಲಾ ಕಾಮೆಂಟ್ ಗಳು ಕೇಳಿಬರುತ್ತಿವೆ. ಇನ್ನೂ ಎಕ್ಸ್ಟ್ರಾ ಜಬರ್ದಸ್ತ್ ಶೋನ ರೇಟಿಂಗ್ಸ್ ಸಹ ಕಡಿಮೆಯಾಗುತ್ತಿದೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇನ್ನೂ ಈ ಶೋನಲ್ಲಿ ಹೊಸ ಕಲಾವಿದರು ಎಂಟ್ರಿ ಕೊಟ್ಟರೇ ಏನಾದರೂ ಹೈಪ್ ಪಡೆದುಕೊಳ್ಳುತ್ತಾ ಎಂಬುದು ಸಹ ಪ್ರಶ್ನೆಯಾಗಿದೆ.

ಇನ್ನೂ ರಶ್ಮಿ ಹೇಳಿಕೆ ಇದೀಗ ಹಾಟ್ ಟಾಪಿಕ್ ಆಗಿದೆ. ಜಬರ್ದಸ್ತ್ ಶೋ ಮೂಲಕ ತುಂಬಾನೆ ಫೇಮಸ್ ಆದ ರಶ್ಮಿ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಜೊತೆಗೆ ಬೇರೆ ಚಾನಲ್ ಗಳಿಂದ ಅವಕಾಶಗಳು ಬಂದರೂ ಸಹ ಆಕೆ ಹೆಚ್ಚಾಗಿ ಈಟಿವಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ರಶ್ಮಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.